ಕುರ್‌ಆನ್ ಅಧ್ಯಯನ
ಮಾರ್ಗದರ್ಶಿ
ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ ا
ಪರಮ ದಯಾಮಯನೂ ಕರುಣಾಳುವೂ ಆದ ಅಲ್ಲಾಹನ ನಾಮದಿಂದ
ಪ್ರಕಾಶಕರ ಮಾತು
ಇದು 'ತಪ್ಲೀಮುಲ್ ಕುರ್‌ಆನ್” ಎಂಬ ಜಗದ್ವಿಖ್ಯಾತ ಕುರ್‌ಆನ್ ವ್ಯಾಖ್ಯಾನ
ಗ್ರಂಥಕ್ಕೆ ಮೌ| ಸಯ್ಯದ್ ಅಬುಲ್ ಆಲಾ ಮೌದೂದಿಯವರು ಬರೆದಿರುವ ಮುನ್ನುಡಿಯ
ಕನ್ನಡಾನುವಾದ. .
ಉರ್ದು ಭಾಷೆಯಲ್ಲಿ ಆರು ಸಂಪುಟಗಳಲ್ಲಿ ಪ್ರಕಟವಾಗಿರುವ ಪ್ರಸ್ತುತ ವ್ಯಾಖ್ಯಾನ
ಗ್ರಂಥವನ್ನು ಸಂಕ್ಷೇಪಿಸಿ ಎರಡು ಸಂಪುಟಗಳಲ್ಲಿ ಕನ್ನಡದಲ್ಲಿ ಈಗಾಗಲೇ ಪ್ರಕಟಿಸಲಾಗಿದೆ.
ಪವಿತ್ರ ಕುರ್‌ಆನಿನ ಅಧ್ಯಯನಕ್ಕೆ ಒಂದು ಉತ್ತಮ ಕೈಪಿಡಿಯಂತಿರುವ ಅದರ
ಮುನ್ನುಡಿಯನ್ನು ಅಸಕ್ತ ಓದುಗರ ಉಪಯೋಗಕ್ಕಾಗಿ ಈಗ ಪ್ತ ಶ್ರತ್ಯೇಕವಾಗಿ
یت ದೆ. '
ಪವಿತ್ರ ಕುರ್‌ಆನ್ ಅಲ್ಲಾಹನ ಆಂತಿಮವಾಣಿ. ಅದರ ವೈಶಿಷ್ಟ್ಯ ಮತ್ತು
ಅಧ್ಯಯನದ ಕ್ರಮವನ್ನು, ಅದರ ಅಧ್ಯಾಯ ಮತ್ತು ಸೂಕ್ತಗಳ ಪರಸ್ಪರ ಸಂಬಂಧವನ್ನು
ತಿಳಿಯುವ ಆಸಕ್ತಿಯಿರುವ ಎಲ್ಲರಿಗೂ ಇದೊಂದು ಉಪಯುಕ್ತ ಮಾರ್ಗದರ್ಶಿ.
ಇ ಶಾಂತಿ ಪ್ರಕಾಶನ
"ಪವಿತ್ರ ಕುರ್‌ಆನ್ ಶಿಷ್ಟಾಚಾರ ಮತ್ತು ನ್ಯಾಯದ ಪ್ರಣಾಳಿಕೆ
ಯಾಗಿದೆ. ಸ್ವಾತಂತ್ರ್ಯದ ಘೋಷಣಾ ಪತ್ರವಾಗಿದೆ. ದೈನಂದಿನ
ಜೀವನದಲ್ಲಿ ಸತ್ಯ-ನ್ಯಾಯಗಳೆ ಶಿಕ್ಷಣ ನೀಡುವ ಕಾನೂನಿನ ಮಹಾನ್
ಗ್ರಂಥವಾಗಿದೆ. ಇನ್ನಾವುದೇ ಧಾರ್ಮಿಕ ಗ್ರಂಥ ಜೀವನದಲ್ಲಿ ಎಲ್ಲ
ಸಮಸ್ಯೆಗಳ ವ್ಯಾವಹಾರಿಕ ವ್ಯಾಖ್ಯಾನ ಮತ್ತು ಪರಿಹಾರ ನೀಡುವುದಿಲ್ಲ."
1945ರ ಜನವರಿ 1ರಂದು ಶ್ರೀಮತಿ ಸರೋಜಿನಿ ನಾಯ್ದುರವರು
ಕಲ್ಕತ್ತಾದ ಮುಸ್ಲಿಮ್ ಇನ್ಸ್‌ಟಿಟ್ಯೂಟ್ ಹಾಲ್‌ನಲ್ಲಿ.
ಕುರ್‌ಆನ್ ಅಧ್ಯಯನ ಮಾರ್ಗದರ್ಶಿ
ಸಾಮಾನ್ಯವಾಗಿ ನಾವು ಓದುವ ಪುಸ್ತಕಗಳಲ್ಲಿ ಒಂದು ವಿಷಯಕ್ಕೆ ಸಂಬಂಧಿಸಿದ
ಮಾಹಿತಿ, ಅಭಿಪ್ರಾಯ ಮತ್ತು ಪುರಾವೆಗಳನ್ನು ಒಂದು ನಿರ್ದಿಷ್ಟವಾದ
ಕ್ರಮಬದ್ಧತೆಯೊಂದಿಗೆ ಅವ್ಮಾಹತವಾಗಿ ವಿವರಿಸಲಾಗುತ್ತದೆ. ಆದುದರಿಂದ .ಈ
ವರೆಗೂ ಕುರ್‌ಆನಿನ ಪರಿಚಯವಿಲ್ಲದವನು ಅದರ ಅಧ್ಯಯನ ಮಾಡ ಹೊರಟಾಗ,
ಒಂದು 'ಗ್ರಂಥ'ವೆಂಬ ದೃಷ್ಟಿಯಿಂದ ಈ ಗ್ರಂಥದಲ್ಲೂ ಇತರ ಗ್ರಂಥಗಳಂತೆಯೇ
ಮೊದಲು ವಿಷಯವನ್ನು ನಿಗದಿಗೊಳಿಸಿಕೊಂಡಿರಬಹುದು; ಆ ಬಳಿಕ ಮುಖ್ಯ
ವಿಷಯವನ್ನು ಹಲವಾರು ಅಧ್ಯಾಯ, ಉಪ ಅಧ್ಯಾಯಗಳಾಗಿ ವಿಂಗಡಿಸಿ, ಕ್ರೋಢೀಕರಿಸಿ
ಒಂದೊಂದೇ ಉಪ ವಿಷಯದ ಕುರಿತು ವಿವರಿಸಿರಬಹುದು; ಅದೇ ರೀತಿಯಲ್ಲಿ
ಜೀವನದ ಒಂದೊಂದು ಕ್ಲೇತ್ರವನ್ನು ಬೇರೆ ಬೇರೆಯಾಗಿ ತೆಗೆದುಕೊಂಡು ಅದರ
ಬಗ್ಗೆ ನಿಯಮ ನಿಬಂಧನೆಗಳನ್ನು ಕ್ರಮಾನುಗತವಾಗಿ ಉಲ್ಲೇಖಿಸಿರಬಹುದೆಂದು
ನಿರೀಕ್ಷಿಸಿ ಮುಂದುವರಿಯುತ್ತಾನೆ. ಆದರೆ, ಅವನು ಈ ಗ್ರಂಥವನ್ನು ತೆರೆದು
ಅಧ್ಯಯನ ಆರಂಭಿಸಿದಾಗ ಅಲ್ಲಿ ತನ್ನ ನಿರೀಕ್ಷೆಗಿಂತ ತೀರಾ ಭಿನ್ನವಾದ, ಬೇರೆಲ್ಲೂ
ಕಂಡಿರದ ವಿಶಿಷ್ಟ ತರದ ವಿವರಣಾ ಕ್ರಮವನ್ನು ಕಾಣುತ್ತಾನೆ. ಅಲ್ಲಿ ಅವನು
ವಿಶ್ವಾಸಕ್ಕೆ ಸಂಬಂಧಿಸಿದ ವಿಚಾರಗಳು, ನೈತಿಕ ಆದೇಶಗಳು, ಧಾರ್ಮಿಕ ಆಜ್ಞೆಗಳು,
ಆಹ್ವಾನ, ಉಪದೇಶ, ವಿಮರ್ಶೆ, ಬೆದರಿಕೆ, ಎಚ್ಚರಿಕೆ, ಸುವಾರ್ತೆ, ಆಶ್ವಾಸನೆ,
ದೃಷ್ಟಾಂತ, ಸಾಕ್ಸ್ಯಾಧಾರಗಳು, ಐತಿಹಾಸಿಕ ಪ್ರಸಂಗ್ರ ವಿಶ್ವ ಸಂಕೇತಗಳ ಕಡೆಗೆ
ಸೂಚನೆ- ಇವೆಲ್ಲಾ ಪದೇ ಪದೇ ಬೆನ್ನು ಬೆನ್ನಿಗೇ ಬರುತ್ತಿರುವುದನ್ನು ಕಾಣುತ್ತಾನೆ.
ಒಂದೇ ವಿಷಯವನ್ನು ವಿವಿಧ ರೀತಿಯಲ್ಲಿ ಬೇರೆ ಬೇರೆ ಮಾತುಗಳಲ್ಲಿ
ಪುನರಾವರ್ತಿಸಲಾಗುತ್ತದೆ. ಒಂದು ವಿಷಯದ ಬಳಿಕ ಇನ್ನೊಂದು ಅದರ ನಂತರ
6 ಕುರ್‌ಆನ್ ಅಧ್ಯಯನ ಮಾರ್ಗದರ್ಶಿ
ಮತ್ತೊಂದು ಹಠಾತ್ತನೆ ಪ್ರಾರಂಭವಾಗುತ್ತದೆ. ಅಷ್ಟೇ ಅಲ್ಲ, ಒಂದು ವಿಷಯದ
ಎಡೆಯಲ್ಲಿ ಇನ್ನೊಂದು ವಿಷಯವು ಅಕಸ್ಮಾತ್ ಬಂದು ಬಿಡುತ್ತದೆ.
ಅಭಿಸಂಬೋಧಿತನೂ ಮಾತಾಡುವವನೂ ಆಗಾಗ ಬದಲಾಗುತ್ತಿರುತ್ತಾರೆ. ಭಾಷಣದ
ಗತಿ ಆಗಾಗ ವಿವಿಧ ದಿಕ್ಕುಗಳಿಗೆ ತಿರುಗುತ್ತಿರುತ್ತದೆ. ಪರಿಚ್ಛೇದಗಳಾಗಲಿ ಅಧ್ಯಾಯ
ಗೆಳಾಗಲಿ ಎಲ್ಲೂ ಇಲ್ಲ, ಇತಿಹಾಸವಿದ್ದರೂ ಅದು ಇತಿಹಾಸ ಕಥನದ ರೀತಿಯಲ್ಲಿಲ್ಲ.
ತತ್ವ ಸಿದ್ದಾಂತೆ ಮತ್ತು ಪಾರಲೌಕಿಕ ವಿಷಯಗಳಿವೆಯಾದರೂ ತರ್ಕಶಾಸ್ತ್ರ ಮತ್ತು
ತತ್ವಶಾಸ್ತ್ರಗಳ ಭಾಷೆಯಲ್ಲಿಲ್ಲ. ಮನುಷ್ಯ ಮತ್ತು ವಿಶ್ವದಲ್ಲಿರುವ ಪದಾರ್ಥಗಳ
ಪ್ರಸ್ತಾಪವಿದೆಯಾದರೂ ಅದು ಭೌತಶಾಸ್ತ್ರದ ರೀತಿಯಲ್ಲಿಲ್ಲ. ಸಂಸ್ಕೃತಿ ಮತ್ತು
ರಾಜಕೀಯ, ಜೀವನ ಶಾಸ್ತ್ರ ಮತ್ತು ಸಮಾಜ ಶಾಸ್ತ್ರಗಳ ಪ್ರಸ್ತಾಪವಿದೆ. ಆದರೆ
ಅದು ಸಾಮಾನ್ಯ ತಿಳುವಳಿಕೆಯ ರೀತಿಯಲ್ಲಿಲ್ಲ. ಕಾನೂನಿನ ನಿಬಂಧನೆ ಮತ್ತು
ಕಾನೂನಿನ ಮೂಲ ಸಿದ್ಧಾಂತಗಳ ಪ್ರಸ್ತಾಪವಿದೆಯಾದರೂ ಅವು ನ್ಯಾಯ ಶಾಸ್ತ್ರಜ್ಞರ
ಪದ್ಧ ತಿಗಳಿಗಿಂತ ತೀರಾ ಭಿನ್ನವಾಗಿವೆ. ನೈತಿಕ ಶಿಕ್ಷಣವಿದೆ. ಆದರೆ ಅದರ ವಿನ್ಯಾಸವು
ನೀತಿಶಾಸ್ತ್ರದ ಇತರ ಸಾಹಿತ್ಯಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಇವುಗಳನ್ನೆಲ್ಲಾ ತಾನು
ಮುಂಚೆ ಓದಿದ ಪುಸ್ತಕಗಳ ರೀತಿಗಿಂತ ತೀರಾ ಭಿನ್ನವಾಗಿ ಕಾಣುವಾಗ ಓದುಗನು
ಕಂಗೆಡುತ್ತಾನೆ. ಅವನು ಇದು ಆದಿಯಿಂದ ಅಂತ್ಯದ ವರೆಗೂ ಅನೇಕ ಸ್ವತಂತ್ರ
ಟಿಪ್ಪಣಿಗಳಿಂದ ಕೂಡಿದ, ಕ್ರಮವಾಗಿ ಕ್ರೋಢೀಕರಿಸದೆ, ಅಸ್ತವ್ಯಸ್ತವಾಗಿರುವ ಒಂದು
ಕೃತಿಯಾಗಿದ್ದರೂ ಅಖಂಡ ವಿಷಯದ ರೂಪದಲ್ಲಿ ಬರೆಯಲ್ಪಟ್ಟಿದೆಯೆಂದು ತಿಳಿಯು
ತ್ತಾನೆ. ವಿರೋಧಿ ಮನೋಭಾವದ ದೃಷ್ಟಿಯಿಂದ ನೋಡುವವನು ಅದರ ಮೇಲೆಯೇ
ತರತರದ ماس وہ ಗೋಪುರ ಕಟ್ಟುತ್ತಾನೆ. ಅನುಕೂಲ ದೃಷ್ಟಿಕೋನವುಳ್ಳವನು
ಕೆಲವೊಮ್ಮೆ ಅರ್ಥದ ಕಡೆಗೆ ಗಮನಿಸದೆ ಸಂಶಯಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸು
ತ್ತಾನೆ. ಕೆಲವೊಮ್ಮೆ ಬಾಹೈವಾಗಿ ಕಾಣುವ ಈ ಅಸ್ತವ್ಯಸ್ತತೆಗಾಗಿ ತರತರದ ಕೃತಕ
ವಾದಗಳನ್ನು ಮಾಡುತ್ತ ತನ್ನ ಮನಸ್ಸನ್ನು ತಾನೇ ಸಮಾಧಾನ ಪಡಿಸಿಕೊಳ್ಳುತ್ತಾನೆ.
ಒಮ್ಮೊಮ್ಮೆ ಕೃತಕ ರೀತಿಯಿಂದ ಸಂಬಂಧ ಕಲ್ಪಿಸಿ ವಿಚಿತ್ರ ರೀತಿಯಲ್ಲಿ ತಾತ್ಸರ್ಯ
ಗಳನ್ನು ಕಂಡುಕೊಳ್ಳುತ್ತಾನೆ. ಮತ್ತೆ ಕೆಲವೊಮ್ಮೆ 'ಸ್ವತಂತ್ರ ಟಿಪ್ಪಣಿಗಳ ಸಿದ್ದಾಂತ'ವನ್ನೇ
ಸ್ವೀಕರಿಸುತ್ತಾನೆ. ಇದರಿಂದ ಪ್ರತಿಯೊಂದು ಸೂಕ್ತವು ತನ್ನ ವಿಷಯಾನುಬಂಧದಿಂದ
ಬೇರ್ಪಟ್ಟು, ಅದನ್ನು ಅವತೀರ್ಣಗೊಳಿಸಿದವನ ಉದ್ದೇಶಕ್ಕೆ ವ್ಯತಿರಿಕ್ತವಾದ ವಿಚಿತ್ರ
ಅರ್ಥವನ್ನು ಕೊಡುತ್ತದೆ.
ಕುರ್‌ಆನ್ ಅಧ್ಯಯನ ಮಾರ್ಗದರ್ಶಿ 7
ಒಂದು ಗ್ರಂಥವನ್ನು ಚೆನ್ನಾಗಿ ಅಧ್ಯಯನ ನಡೆಸಬೇಕಾದರೆ ಓದುಗನಿಗೆ ಅದರ
ಮೂಲ ವಿಷಯ ತಿಳಿದಿರಬೇಕು. ಅದರ ಧೈೇಯೋದ್ಲೇಶ ಮತ್ತು ಕೇಂದ್ರೀಯ
ವಿಷಯದ ಅರಿವಿರಬೇಕು. ಅದರ ವಿವರಣಾ ಶೈಲಿಯ ಪರಿಚಯವಿರಬೇಕು. ಅದರ
ಪಾರಿಭಾಷಿಕ ಭಾಷೆ ಮತ್ತು ಅದರ ವಿಶಿಷ್ಟ ವ್ಯಾಖ್ಯಾನ ರೀತಿ ಗೊತ್ತಿರಬೇಕು. ಅದರ
ವಿವರಣೆಗಳು ತಮ್ಮ ಪ್ರತ್ಯಕ್ಷ ವಾಕ್ಯಗಳ ಹಿನ್ನೆಲೆಯಲ್ಲಿ ಯಾವ ಪರಿಸ್ಥಿತಿ ಮತ್ತು
ಪ್ರಕರಣಗಳಿಗೆ ಸಂಬಂಧಿಸಿವೆ ಎಂಬುದೂ ಕಣ್ಣ ಮುಂದಿರಬೇಕು. ಸಾಮಾನ್ಯವಾಗಿ
ನಾವು ಓದುವ ಪುಸ್ತಕಗಳಲ್ಲಿ ಈ ಎಲ್ಲ ವಿಷಯಗಳು ಸುಲಭದಲ್ಲಿ ಸಿಗುತ್ತವೆ.
ಆದುದರಿಂದ ಅವುಗಳ ಆಳಕ್ಕೆ ಇಳಿಯಲು ನಮಗೆ ಕಷ್ಟವಾಗುವುದಿಲ್ಲ. ಆದರೆ,
ಇಂತಹ ವಿಷಯಗಳು ಇತರ ಪುಸ್ತಕಗಳಲ್ಲಿ ಸಿಗುವುದು ನಮಗೆ ಅಭ್ಯಾಸವಾಗಿರುವಂತೆ
ಕುರ್‌ಆನಿನಲ್ಲಿ ಸಿಗುವುದಿಲ್ಲ. ಆದುದರಿಂದ ಒಂದು ಸಾಮಾನ್ಯ ಗ್ರಂಥದ ಅಭ್ಯಾಸವೆಂಬ
ಭಾವನೆಯನ್ನಿರಿಸಿಕೊಂಡು ಕುರ್‌ಆನಿನ ಅಧ್ಯಯನವನ್ನು ಯಾರಾದರೂ ಆರಂಭಿಸಿದಾಗ,
ಅವನಿಗೆ ಈ ಗ್ರಂಥದ ವಸ್ತು, ವಿಷಯ, ಉದ್ದೇಶ ಮತ್ತು ಕೇಂದ್ರೀಯ ವಿಷಯದ
ಸುಳಿವೇ ಸಿಗುವುದಿಲ್ಲ. ಅದರ ವಿವರಣಾ ಶೈಲಿ ಮತ್ತು ವ್ಯಾಖ್ಯಾನ ರೀತಿಯೂ
ಅವನಿಗೆ ಅಪರಿಚಿತವಾಗಿಯೇ ತೋರುತ್ತವೆ. ಹೆಚ್ಚಿನ ಕಡೆಗಳಲ್ಲಿ ವಿಷಯಗಳ ಹಿನ್ನೆಲೆ
ಅವನ ದೃಷ್ಟಿಯಿಂದ ಮರೆಯಾಗಿರುತ್ತದೆ. ಇದರ ಪರಿಣಾಮವಾಗಿ ಬೇರೆ ಬೇರೆ
ಸೂಕ್ತೆಗಳಲ್ಲಿ ಹರಡಿಕೊಂಡಿರುವ ಯುಕ್ತಿ ರತ್ನಗಳಿಂದ ಹೆಚ್ಚು ಕಡಿಮೆ ಪ್ರಯೋಜನ
ಪಡೆದರೂ ಒಬ್ಬನು ದೇವವಾಣಿಯ ನೈಜ ತಿರುಳನ್ನು ಗ್ರಹಿಸುವುದರಿಂದ ವಂಚಿತ
ಸಾಗುತ್ತಾನೆ. ಹೀಗೆ ಅವನಿಗೆ ಗ್ರಂಥದ ಮೂಲ دیون ಒದಗುವ ಬದಲಿಗೆ ಅವನು
ಆ ಗ್ರಂಥದಲ್ಲಿ ಹರಡಿಕೊಂಡಿರುವ ಕೆಲವು ಮರ್ಮ ಹಾಗೂ ಸೀಮಿತ ಪ್ರಯೋಜನ
ಗಳಿಂದಷ್ಟೇ ತೃಪ್ತನಾಗಬೇಕಾಗುತ್ತದೆ. ಇಷ್ಟೇ ಅಲ್ಲ, ಗ್ರಂಥಜ್ಞಾನಕ್ಕೆ ಬೇಕಾದ ಈ
ಆರಂಭಿಕ ಆವಶ್ಯಕತೆಗಳನ್ನು ತಿಳಿದುಕೊಳ್ಳದಿರುವುದರಿಂದಲೇ ಕುರ್‌ಆನಿನ ಅಧ್ಯಯನ
ಮಾಡುವ ಅನೇಕರು ಸಂಶಯಗಳಲ್ಲಿ ಸಿಕ್ಕಿಬೀಳುತ್ತಾರೆ. ಅಂತಹವರು ಕುರ್‌ಆನನ್ನು
ಓದುತ್ತಿರುವಾಗ ಅದರ ಪುಟಗಳಲ್ಲಿ ವೈವಿಧ್ಯಮಯ ವಿಷಯಗಳು ಅಸ್ತವ್ಯಸ್ತವಾಗಿ
ಹರಡಿರುವುದಾಗಿ ಅವರಿಗೆ ತೋರುತ್ತದೆ. ಅನೇಕ ಸೂಕ್ತಗಳ ಅರ್ಥ ಅವರಿಗೆ ವ್ಯಕ್ತ
ವಾಗುವುದಿಲ್ಲ. ಎಷ್ಟೋ ಸೂಕ್ತಗಳು ಸಹಜವಾಗಿಯೂ ವಿವೇಕದ ಜ್ಯೋತಿಯಿಂದ
ಬೆಳಗುತ್ತಿದ್ದರೂ ವಿಷಯಾನುಬಂಧದಲ್ಲಿ ಸಂಬಂಧವಿಲ್ಲದಂತೆ ಭಾಸವಾಗುತ್ತದೆ.
8 : ಕುರ್‌ಆನ್ ಅಧ್ಯಯನ ಮಾರ್ಗದರ್ಶಿ
ಅನೇಕ ಕಡೆಗಳಲ್ಲಿ ವ್ಯಾಖ್ಯಾನ ಮತ್ತು ವಿವರಣಾ ರೀತಿಯ ಕುರಿತಾದ ಅಜ್ಞಾನವು
ಅವರನ್ನು ನೈಜ ಅರ್ಥ ಗ್ರಹಿಸುವುದರಿಂದ ತಪ್ಪಿಸಿ ಬೇರೆ ಕಡೆಗೆ ಒಯ್ಯುತ್ತದೆ. ಹೆಚ್ಚಿನ
ಕಡೆಗಳಲ್ಲಿ ಹಿನ್ನೆಲೆಯ ಸರಿಯಾದ ಜ್ಞಾನವಿಲ್ಲದಿರುವುದರಿಂದಲೂ ಘೋರವಾದ
ತಪ್ಪು ಅಭಿಪ್ರಾಯಗಳು ಉಂಟಾಗುತ್ತವೆ.
7 7 ر7
po ocd ಈ
ಕುರ್‌ಆನ್ ಯಾವ ತರದ ಗ್ರಂಥ? ಅದರ ಅವತರಣ ಮತ್ತು ಅದರ
ಕ್ರೋಢೀಕರಣದ ವಿಧಾನ ಯಾವುದು? ಅದರ ಮೂಲ ವಿಷಯ ಯಾವುದು? ಅದು
ಯಾವುದರ ಕುರಿತು ಚರ್ಚಿಸುತ್ತದೆ? ಅದರಲ್ಲಿರುವ ವೈವಿಧ್ಯಪೂರ್ಣ ವಿಷಯಗಳು
ಯಾವ ಕೇಂದ್ರೀಯ ವಿಷಯಕ್ಕೆ ಸಂಬಂಧಿಸಿವೆ? ತನ್ನ ಉದ್ದೇಶವನ್ನು ಪ್ರತಿಪಾದಿಸಲು
ಅದು ಎಂತಹ ವಾದವನ್ನು ಮತ್ತು ವಿವರಣಾ ಶೈಲಿಯನ್ನು ಉಪಯೋಗಿಸಿದೆ?
ಇಂತಹ ಕೆಲವು ಮುಖ್ಯ ಪ್ರಶ್ನೆಗಳಿಗೆ ಸ್ಪಷ್ಟ ಹಾಗೂ ಸರಳವಾದ ಉತ್ತರವು
ಆರಂಭದಲ್ಲೇ ದೊರೆತರೆ, ಹಲವಾರು ತೊಡಕುಗಳಿಂದ ಪಾರಾಗಬಹುದಲ್ಲದೆ ಜ್ಞಾನ
ಹಾಗೂ ಚಿಂತನೆಗಳಿಗೂ ಅನುವು ಸಿಗುತ್ತದೆ. ಕುರ್‌ಆನಿನಲ್ಲಿ ಗ್ರಂಥ ರಚನಾ
ಅನುಕ್ರಮವನ್ನು ಹುಡುಕುವವನಿಗೆ ಅದು ಸಿಗದಿರುವಾಗ ಅವನು ಗ್ರಂಥದ ಪುಟಗಳಲ್ಲೇ
ಅಲೆದಾಡ ತೊಡಗುತ್ತಾನೆ. ಈ ಪ್ರಾಥಮಿಕ ವಿಷಯಗಳ ಅರಿವಿಲ್ಲದಿರುವುದೇ ಅವನ
ಈ ಪೇಚಾಟಕ್ಕಿರುವ ನಿಜವಾದ ಕಾರಣ. ನಾನೀಗ ಧರ್ಮದ ವಿಷಯಕ್ಕೆ ಸಂಬಂಧಿಸಿದ
ಒಂದು ಗ್ರಂಥದ ಅಧ್ಯಯನವನ್ನು ಆರಂಭಿಸುತ್ತಿದ್ದೇನೆಂಬ ಕಲ್ಪನೆಯೊಂದಿಗೆ ಅವನು
ಅಧ್ಯಯನವನ್ನು ಪ್ರಾರಂಭಿಸುತ್ತಾನೆ. 'ಧರ್ಮದ ವಿಷಯ' ಮತ್ತು 'ಗ್ರಂಥ" ಇವೆರಡರ
ಬಗ್ಗೆ ಜನರಲ್ಲಿ ಸಾಮಾನ್ಯವಾಗಿ ನೆಲೆಸಿರುವ ಭಾವನೆಗಳೇ ಅವನಲ್ಲೂ ಇರುತ್ತವೆ.
ಆದರೆ, ಅಲ್ಲಿ ತೆನ್ನ ಭಾವನೆಗಳಿಗೆ ತೀರಾ ಭಿನ್ನವಾದುದನ್ನು ಕಂಡಾಗ ಅದರೊಂದಿಗೆ
ಹೊಂದಿಕೊಳ್ಳಲು ಅವನಿಗೆ ಸಾಧ್ಯವಾಗುವುದಿಲ್ಲ. ಅವನಿಗೆ ವಿಷಯದ ಆರಂಭವೇ
. ಕೈಸೇರದಂತಾಗುತ್ತದೆ. ಅಪರಿಚತ ಪ್ರಯಾಣಿಕನೊಬ್ಬನು ಹೊಸತಾಗಿ ಪ್ರವೇಶಿಸಿದ
ನಗರದ ಓಣಿಗಳಲ್ಲಿ ಅಲೆದಾಡುವಂತೆ ಅವನೂ ಕುರ್‌ಆನಿನ ಪಂಕ್ತಿಗಳಲ್ಲಿ ಅಲೆದಾಡ
ಲಾರಂಭಿಸುತ್ತಾನೆ. ಆದುದರಿಂದ, ನೀವೀಗ ಅಧ್ಯಯನ ನಡೆಸಲಾರಂಭಿಸಿರುವ ಈ
ಗ್ರಂಥವು ಜಗತ್ತಿನ ಪ್ರಚಲಿತ ಸಾಹಿತ್ಯಗಳಿಗಿಂತ ಭಿನ್ನವಾದ ಹಾಗೂ ತನ್ನದೇ ಆದ
ಕುರ್‌ಆನ್ ಅಧ್ಯಯನ ಮಾರ್ಗದರ್ಶಿ 9
ವೈಶಿಷ್ಟ್ಯಗಳಿಂದ ಕೂಡಿದ ಏಕ್ಕೆಕ ಗ್ರಂಥವಾಗಿದ್ದು ಅದರ ರಚನೆಯು ಜಗತ್ತಿನ ಇತರೆಲ್ಲ
ಗ್ರಂಥಗಳಿಗಿಂತ ಭಿನ್ನರೂಪದಲ್ಲಾಗಿದೆ ಹಾಗೂ ಅದು ತನ್ನ ಮೂಲ ವಿಷಯ, ರಚನೆ
ಮತ್ತು ಕ್ರಮಗಳ ದೃಷ್ಟಿಯಿಂದ ಅಸಾಮಾನ್ಮ ಗ್ರಂಥವಾಗಿದೆ ಎಂಬ ಕಾರಣಗಳಿಂದಾಗಿ
ಈ ವರೆಗಿನ ಗ್ರಂಥಗಳ ಅಧ್ಯಯನಗಳಿಂದ 'ಗ್ರಂಥ'ದ ಸ್ವರೂಪದ ಬಗ್ಗೆ ನಿಮ್ಮ
ಮನಸ್ಸಿನೊಳಗೆ ಉಂಟಾಗಿರುವ ಭಾವನೆಯು ಈ ಗ್ರಂಥದ ಅಧ್ಯಯನಕ್ಕೆ
ಸಹಾಯಕವಾಗಲಾರದು, ಮಾತ್ರವಲ್ಲ ಅದು ವಿಘ್ನವನ್ನುಂಟು ಮಾಡುವುದು.
ಆದುದರಿಂದ ಈ ಗ್ರಂಥದ ಅಧ್ಯಯನ ನಡೆಸಬೇಕೆಂದಿದ್ದರೆ ನಿಮ್ಮ . ಮನಸ್ಸಿನಲ್ಲಿ
ಮೊದಲೇ ಮನೆ ಮಾಡಿಕೊಂಡಿರುವ ಊಹೆಗಳನ್ನೆಲ್ಲಾ ಹೋಗಲಾಡಿಸಿ, ಇದರ
ವಿಚಿತ್ರವಾದ ವೈಶಿಷ್ಟ್ಯಗಳ ಪರಿಚಯ ಪಡೆದುಕೊಳ್ಳಬೇಕು ಎಂಬುದನ್ನು ಆರಂಭದಲ್ಲೇ
ಒದುಗನಿಗೆ ತಿಳಿಸಿಬಿಟ್ಟರೆ ಅವನು ಗೊಂದಲದಿಂದ ಪಾರಾಗಲು ಸಾಧ್ಯವಿದೆ.
ಓಡುಗನಿಗೆ ಕುರ್‌ಆನಿನ ಮೇಲೆ ವಿಶ್ವಾಸವಿರಲಿ ಇಲ್ಲದಿರಲಿ-ಕುರ್‌ಆನಿನ
ಅಧ್ಯಯನ ನಡೆಸಬೇಕಾದರೆ ಅವನಿಗೆ ಪ್ರಥಮತಃ ಅದರ ಮೂಲದ ಬಗ್ಗೆ ತಿಳಿದಿರ y
ಬೇಕಾದುದು ಅತಿ ಅಗತ್ಯ. ಆ ಮೂಲವನ್ನು ಸ್ವತಃ ಕುರ್‌ಆನ್" ಮತ್ತು ಅದನ್ನು
ನಮ್ಮ ಮುಂದಿರಿಸಿದ ಹ. ಮುಹಮ್ಮದ್‌ರವರೇ(ಸ) ವವರಿಸಿದ್ದಾರೆ- ಅದು ಹೀಗಿದೆ:
1) ಸಕಲ ಪ್ರಪಂಚದ ಸೃಷ್ಟಿಕರ್ತನೂ ಅಧಿಪತಿಯೂ ಆಗಿರುವ ಜಗದೊಡೆಯನು
ತನ್ನ ಅಗಾಧ ಸಾಮ್ರಾಜ್ಯದ 'ಭೂಮಿ' ಎಂದು ಕರೆಯಲ್ಪಡುವ ಒಂದು ಭಾಗದಲ್ಲಿ
ಮಾನವನನ್ನು ಸೃಷ್ಟಿಸಿದನು. ಅವನಿಗೆ ಜ್ಞಾನ, ವಿಚಾರ, ಬುದ್ಧಿಶಕ್ತಿಗಳನ್ನು ದಯ
ಪಾಲಿಸಿದನು. ಒಳಿತು-ಕೆಡುಕುಗಳ ವೃತ್ಕಾಸವನ್ನರಿಯುವ ವಿವೇಕವನ್ನು ನೀಡಿದನು.
ಆಯ್ಕೆ ಮತ್ತು ಇಚ್ಛಾ ಸ್ವಾತಂತ್ರ್ಯವನ್ನೂ ಕೊಟ್ಟನು. ಬಳಸುವ ಅಧಿಕಾರ ಪ್ರದಾನ
ಮಾಡಿದನು. ಒಟ್ಟಿನಲ್ಲಿ ಅವನಿಗೆ ಒಂದು ತರದ ಸ್ವಾಯತ್ತತೆಯನ್ನು ನೀಡಿ ಅವನನ್ನು
ಈ ಭೂಮಿಯಲ್ಲಿ ತನ್ನ ಪ್ರತಿನಿಧಿಯನ್ನಾಗಿ ಮಾಡಿದನು.
2) ಈ ಸ್ಥಾನವನ್ನು ಪ್ರದಾನ ಮಾಡುವಾಗ ಜಗದೊಡೆಯನು ಮಾನವನಿಗೆ
ಚೆನ್ನಾಗಿ ಹೇಳಿ ಮನದಟ್ಟು ಮಾಡಿ; ಕೊಟ್ಟಿರುವ ವಿಷಯಗಳಾವುವೆಂದರೆ- ನಿಮ್ಮ
ಮತ್ತು ಇಡೀ ಜಗತ್ತಿನ ಒಡೆಯನೂ ಆರಾಧ್ಯನೂ ಸಾರ್ವಭೌಮನೂ ನಾನಾಗಿರುತ್ತೇನೆ.
10 ಕುರ್‌ಆನ್ ಅಧ್ಯಯನ ಮಾರ್ಗದರ್ಶಿ
ನನ್ನ ಈ ಸಾಮ್ರಾಜ್ಯದಲ್ಲಿ ನೀವಾಗಲಿ ಇತರ ಯಾರೇ ಆಗಲಿ ಸ್ವತಂತ್ರರಲ್ಲ. ನಿಮಗೆ
ನನ್ನ ಹೊರತು ಇನ್ನಾರೂ ಆರಾಧನೆ ಮತ್ತು ಉಪಾಸನೆಗೆ ಅರ್ಹರಲ್ಲ. ನಿಮಗೆ
ಅಧಿಕಾರ ಕೊಡಲಾಗಿರುವ ಈ ಅವಧಿಯು ವಾಸ್ತವದಲ್ಲಿ ಒಂದು ಪರೀಕ್ಷಾ
ಕಾಲವಾಗಿರುತ್ತದೆ. ಈ ಅವಧಿ ಮುಗಿದ ನಂತರ ನೀವು ನನ್ನ ಬಳಿಗೆ ಬರಬೇಕಾಗಿದೆ.
ನಾನು ನಿಮ್ಮ ಕರ್ಮಗಳನ್ನು ಚೆನ್ನಾಗಿ ಪರಿಶೀಲಿಸಿ ನಿಮ್ಮ ಪೈಕಿ ಪರೀಕ್ಷೆಯಲ್ಲಿ
ಉತ್ತೀರ್ಣರಾದವರು ಯಾರು ಅನುತ್ತೀರ್ಣರಾದವರು ಯಾರು ಎಂದು ತೀರ್ಪು
ನೀಡುವೆನು. ನನ್ನನ್ನು ನಿಮ್ಮ ಏಕೈಕ ಆರಾಧ್ಯ ಮತ್ತು ಆಜ್ಞಾಧಿಕಾರಿಯೆಂದು
ಸ್ವೀಕರಿಸಿಕೊಳ್ಳುವುದು, ನಾನು ಕಳುಹಿಸಿದ ನಿರ್ದೇಶನಗಳ ಪ್ರಕಾರ ಕಾರ್ಯವೆಸಗುವುದು
ಮತ್ತು ಈ ಜಗತ್ತನ್ನು ಪರೀಕ್ಷಾ ಕೊಠಡಿಯೆಂದು ಬಗೆದು ಅಂತಿಮ ತೀರ್ಮಾನದಲ್ಲಿ
ವಿಜಯ ಗಳಿಸುವುದು ನಿಮ್ಮ ಮುಖ್ಯ ಉದ್ದೇಶವೆಂಬ ಪ್ರಜ್ಞೆಯೊಂದಿಗೆ ಜೀವಿಸುವುದೇ
ನಿಮ್ಮ ಸರಿಯಾದ ನಿಲುಮೆಯಾಗಿರಬೇಕು. ಇದಕ್ಕೆ ವೃತಿರಿಕ್ಷವಾಗಿರುವ ಯಾವ
ನಿಲುಮೆಯೂ ಸರಿಯಲ್ಲ. ಮೊದಲು ಹೇಳಿದ ನಿಲುಮೆಯಂತೆ (ಅದರಂತೆ ನಡೆಯಲು
ನೀವು ನಿರ್ಬಂಧಿತರಾಗಿಲ್ಲದಿದ್ದರೂ) ನಡೆದಲ್ಲಿ ನಿಮಗೆ ಈ ಲೋಕದಲ್ಲಿ ಶಾಂತಿ
ಸಮಾಧಾನಗಳು ಸಿಗುವುವು ಮತ್ತು ನೀವು ನನ್ನ ಬಳಿಗೆ ಮರಳಿ ಬಂದಾಗ
ಸ್ವರ್ಗವೆಂದು ಕರೆಯಲಾಗುವ ಅನಂತ ಸುಖಾನಂದಗಳ ' ಬೀಡನ್ನು ನಿಮಗೆ
ದಯಪಾಲಿಸುವೆನು. ನೀವು ಇನ್ನಾವುದಾದರೂ ನಿಲುಮೆಯನ್ನಿರಿಸಿ ಕೊಂಡರೆ (ಅದರಂತೆ
ನಡೆಯಲಿಕ್ಕೂ ನೀವು ಸ್ವತಂತ್ರರೇ ಆಗಿರುವಿರಾದರೂ) ಇಹದಲ್ಲಿ ಗೊಂದಲಗಳನ್ನೂ
ಅಶಾಂತಿಗಳನ್ನೂ ಅನುಭವಿಸಬೇಕಾದೀತು ಮತ್ತು ಈ ಲೋಕವನ್ನು ಬಿಟ್ಟು
ಪರಲೋಕವನ್ನು ಸೇರಿದಾಗ ಅಲ್ಲಿ ನರಕವೆಂದು ಕರೆಯಲಾಗುವ ಅನಂತ ದುಃಖ
ದುಮ್ಮಾನಗಳ ಮಹಾ ಕೂಪದಲ್ಲಿ ಎಸೆಯಲ್ಪಡುವಿರಿ.
3) ಜಗದೊಡೆಯನು ಈ ರೀತಿಯ ಬೋಧನೆಗಳನ್ನು ಮಾನವ ವರ್ಗಕ್ಕೆ
ಕೊಟ್ಟು ಅವರನ್ನು ಭೂಲೋಕದಲ್ಲಿ ನೆಲೆಗೊಳಿಸಿದನು. ಈ ವರ್ಗದ ಮೂಲ
ವ್ಯಕ್ತಿಗಳಿಗೆ(ಆದಮ್ ಮತ್ತು ಹವ್ವಾ) ಈ ಭೂಮಿಯ ಮೇಲೆ ಸ್ವತಃ
ಕಾರ್ಯವೆಸಗಲಿಕ್ಕೂ ತಮ್ಮ ಸಂತತಿಯು ಅದರ ಪ್ರಕಾರ ನಡೆಯುವಂತೆ ಬೋಧಿಸಲಿಕ್ಕೂ
ಬೇಕಾದಂತಹ ನಿರ್ದೇಶನಗಳನ್ನು ನೀಡಿದನು. ಈ ಆದಿ ಮಾನವರು ಅಜ್ಞಾನ ಮತ್ತು
ಅಂಧಕಾರದ ಸ್ಥಿತಿಯಲ್ಲಿ ಜನಿಸಿರಲಿಲ್ಲ. ಅವರ ಜೀವನವು ದೇವ ವತಿಯಿಂದ
ಕುರ್‌ಆನ್ ಅಧ್ಯಯನ ಮಾರ್ಗದರ್ಶಿ 11
ಸಂಪೂರ್ಣ ಜ್ಞಾನದ ಪ್ರಕಾಶದಲ್ಲೇ ಆರಂಭವಾಗಿತ್ತು. ಅವರು ಪರಮಾರ್ಥವನ್ನು
ಅರಿತಿದ್ದರು. ಅವರಿಗೆ ಅವರ ಜೀವನ ಶಾಸನವನ್ನು ನೀಡಲಾಗಿತ್ತು.
.ದೇವಾನುಸರಣೆಯೇ(ಅರ್ಥಾತ್ ಇಸ್ಲಾಮ್) ಅವರ ಜೀವನ ಮಾರ್ಗವಾಗಿತ್ತು.
ದೇವಾಜ್ಞೆಗಳನ್ನು ಪಾಲಿಸುವವರಾಗಿ ಬಾಳಬೇಕೆಂದೇ ಅವರು ತಮ್ಮ ಸಂತತಿಗೂ
ಬೋಧಿಸಿ ಹೋಗಿದ್ದರು. ಆದರೆ ಅನಂತರದ ಕಾಲಗಳಲ್ಲಿ ಜನರು ಕ್ರಮೇಣ
ಸರಿಯಾದ ಜೀವನ ಮಾರ್ಗ(ಧಮಗ)ದಿಂದ ಭ್ರಷ್ಟರಾಗಿ ನಾನಾ ರೀತಿಯ ತಪ್ಪು
ಹಾದಿಗಳಲ್ಲಿ ನಡೆದು ಬಿಟ್ಟರು. ಅವರು ತಮ್ಮ ಅಸಡ್ಲೆಯಿಂದಾಗಿ ಧರ್ಮದ ನೈಜ
ಮಾರ್ಗವನ್ನು ಕಳೆದು ಕೊಂಡರು ಮತ್ತು ತಮ್ಮ ಕಿಡಿಗೇಡಿತನದಿಂದ ಅದನ್ನು
ರೂಪಗೆಡಿಸಿಯೂ ಬಿಟ್ಟರು. ಅವರು ಭೂಮಿ-ಆಕಾಶಗಳಲ್ಲಿರುವ ನಾನಾ ತರದ
ಇತರ ಮಾನವ ಹಾಗೂ ಮಾನವೇತರ ಕಾಲ್ಪನಿಕ ಮತ್ತು ಭೌತಿಕ ವಸ್ತುಗಳನ್ನು
ದೇವನೊಂದಿಗೆ ಸಹಭಾಗಿಗಳಾಗಿ ಮಾಡಿಬಿಟ್ಟರು. ಅವರು ದೇವದತ್ತವಾದ
ನೈಜಜ್ಞಾನದೊಂದಿಗೆ ತರತರದ ಭ್ರಾಮಕ ವಿಚಾರಗಳ ಮತ್ತು ತತ್ವ-ಸಿದ್ಧಾಂತಗಳ
ಕಲಬೆರಕೆ ಮಾಡಿ ಅನೇಕ ಮತಗಳನ್ನು ಸೃಷ್ಟಿಸಿಕೊಂಡರು. ಅವರು ದೇವನಿರ್ಮಿತ,
ನ್ಯಾಯಪೂರ್ಣ ಸಿದ್ದಾಂತ ಮತ್ತು ಸಂಸ್ಕೃತಿ(ಶರೀಲತ್ ಅರ್ಥಾತ್ ಧರ್ಮಶಾಸ್ತ್ರ)ಯನ್ನು
ಬಿಟ್ಟು ಅಥವಾ ಕೆಡಿಸಿ ತಮ್ಮ ದೇಹೇಚ್ಛೆ ಹಾಗೂ ಪಕ್ಸಪಾತಗಳಿಂದ ತಾವೇ ಜೀವನ
ನಿಯಮಗಳನ್ನು ಸೃಷ್ಟಿಸಿಕೊಂಡರು. ಇದರಿಂದಾಗಿ ದೇವನ ಭೂಮಿಯು
ಅನ್ಮಾಯಗಳಿಂದ ತುಂಬಿ ಹೋಯಿತು.
4) ದೇವನು ಮಾನವನಿಗೆ ಸೀಮಿತ ಅಧಿಕಾರ ಸ್ವಾತಂತ್ರ್ಯವನ್ನು ಕೊಟ್ಟಿರುವುದ
ರೊಂದಿಗೆ ಸೃಷ್ಟಿಕರ್ತನೆಂಬ ನೆಲೆಯಲ್ಲಿ ತನ್ನ ಅಧಿಕಾರಾತ್ಮಕ ಹಸ್ತಕ್ಸೇಪ ನಡೆಸಿ ಭ್ರಷ್ಟ
ಮಾನವರನ್ನು ಬಲಾತ್ಕಾರವಾಗಿ ಸರಿದಾರಿಗೆ ತಿರುಗಿಸುವುದೂ ಸರಿಯೆನಿಸುತ್ತಿರಲಿಲ್ಲ.
ಈ ವರ್ಗಕ್ಕೆ ಹಾಗೂ ಇದರ ಬೇರೆ ಬೇರೆ ಜನಾಂಗಗಳಿಗೆ ಜಗತ್ತಿನಲ್ಲಿ ಕರ್ಮವೆಸಗಲು
ಕಾಲಾವಕಾಶವನ್ನು ನಿಶ್ಚಯಿಸಿಕೊಟ್ಟ ಬಳಿಕ ಬಂಡಾಯ ತಲೆದೋರಿದ ತಕ್ಷಣ
ಅದನ್ನು ನಾಶಪಡಿಸಿ ಬಿಡುವುದೂ ಸಮಂಜಸವಾಗುತ್ತಿರಲಿಲ್ಲ. ಮಾನವನ ಸ್ವಾಯತ್ತತೆ
ಯನ್ನು ರಕ್ಷಿಸುತ್ತ ಈ ವರ್ಗದ ಕರ್ಮಾವಧಿಯ ಕಾಲದಲ್ಲೇ ಅದಕ್ಕೆ ಮಾರ್ಗದರ್ಶನದ
ವೈವಸ್ಥೆ ಮಾಡುತ್ತಿರುವ ಹೊಣೆಯನ್ನು ಅವನು ಸೃಷ್ಟಿಯ ಆದಿಕಾಲದಲ್ಲೇ
ವಹಿಸಿರುತ್ತಾನೆ. ಹೀಗೆ ತಾನೇ ವಿಧಿಸಿರುವ ಹೊಣೆಗಾರಿಕೆಯನ್ನು ನೆರವೇರಿಸಲಿಕ್ಕಾಗಿ
12 ಕುರ್‌ಆನ್ ಅಧ್ಯಯನ ಮಾರ್ಗದರ್ಶಿ
ಅವನು ತನ್ನ ಮೇಲೆ ವಿಶ್ವಾಸವಿರಿಸುವ ಹಾಗೂ ತನ್ನ ಸಂಪ್ರೀತಿಯ ಮಾರ್ಗವನ್ನನುಸರಿಸು
ವಂತಹ ವ್ಯಕ್ತಿಗಳನ್ನು ಉಪಯೋಗಿಸಲಾರಂಭಿಸಿದನು. ಅವರನ್ನು ತನ್ನ ಪ್ರತಿನಿಧಿ
ಗಳೆನ್ನಾಗಿಯೂ ಮಾಡಿದನು. ಅವರಿಗೆ ತನ್ನ ಸಂದೇಶಗಳನ್ನು ಕಳುಹಿಸಿದನು. ಅವರಿಗೆ
ದಿವೃಜ್ಞಾನವನ್ನು ಒದಗಿಸಿದನು. ಅವರಿಗೆ ನೈಜ ಜೀವನ ಮಾರ್ಗವನ್ನು ತೋರಿದನು.
ಮಾನವ ವರ್ಗವು ಬಿಟ್ಟಗಲಿದಂತಹ ಸನ್ಮಾರ್ಗದ ಕಡೆಗೆ ಮರಳಿ ಬರುವಂತೆ ಅದರ
ಕಡೆಗೆ ಕರೆ ನೀಡುವ ಕಾರ್ಯಕ್ಕಾಗಿ ಅವರ ನೇಮಕ ಮಾಡಿದನು.
5) ಈ ಸಂದೇಶವಾಹಕರು ಬೇರೆ ಬೇರೆ ಜನಾಂಗಗಳಲ್ಲಿ ಉದಯಿಸುತ್ತಲೇ
ಇದ್ದರು. ಅವರ ಆಗಮನವು ಸಾವಿರಾರು ವರ್ಷಗಳ ವರೆಗೆ ನಿರಂತರವಾಗಿ
ನಡೆಯಿತು. ಸಹಸ್ರಾರು ಸಂಖೆಯಲ್ಲಿ ಕಳುಹಿಸಲ್ಪಟ್ಟರು. ಅವರೆಲ್ಲರ ಧರ್ಮ ಒಂದೇ
ಆಗಿತ್ತು. ಅರ್ಥಾತ್ ಆರಂಭದ ದಿನವೇ ಮಾನವನಿಗೆ ತೋರಿಸಿಕೊಡಲಾಗಿದ್ದ ನೈಜ
ಧರ್ಮ. ಅವರೆಲ್ಲರೂ ಒಂದೇ ಸನ್ಮಾರ್ಗದ ಅನುಯಾಯಿಗಳಾಗಿದ್ದರು. ಅಂದರೆ
ಅವರು ಆದಿ ಕಾಲದಲ್ಲೇ ಮಾನವನಿಗಾಗಿ ನಿರ್ಣಯಿಸಿ ಕೊಡಲಾಗಿದ್ದ ಅನಾದಿಯೂ
ಅನಂತವೂ ಆದ ನೀತಿ-ನಾಗರಿಕತೆಗಳ ಸಿದ್ಧಾಂತಗಳನ್ನು ಅನುಸರಿಸುವವರಾಗಿದ್ದರು.
ಅವರೆಲ್ಲರ ಗುರಿ ಒಂದೇ ಆಗಿತ್ತು. ಅಂದರೆ-ಈ ಧರ್ಮ ಮತ್ತು ಈ ಸನ್ಮಾರ್ಗದ
ಕಡೆಗೆ ತಮ್ಮ ಸಂತತಿಯನ್ನು ಕರೆಯುವುದು ಮತ್ತು ಈ ಕರೆಯನ್ನು ಸ್ವೀಕರಿಸಿ
ಕೊಂಡವರನ್ನು ಸಂಘಟಿಸಿ ಸ್ವತಃ ದೇವನ ಶಾಸನಗಳನ್ನು ಪಾಲಿಸುವ ಮತ್ತು ಆ
ಶಾಸನದ ಅನುಸರಣೆಯಲ್ಲೇ ಸ್ಥಿರವಾಗಿ ನೆಲೆ ನಿಲ್ಲುವ ಹಾಗೂ ಆ ಶಾಸನದ
ಅವಿಧೇಯತೆಯನ್ನು ತಡೆಯುವಂತೆ ಶ್ರಮಿಸುವಂತಹ ಒಂದು ಸಮುದಾಯವನ್ನು
ನಿರ್ಮಿಸುವುದು. ಆ ಸಂದೇಶವಾಹಕರು ತಂತಮ್ಮ ಕಾಲಾವಧಿಯಲ್ಲಿ ತಮ್ಮ ಈ
ದೌತ್ಯವನ್ನು ಬಹಳ ಚೆನ್ನಾಗಿ ನಡೆಸಿದರು. ಆದರೆ ಮಾನವರ ಬಹುದೊಡ್ಡ
ಸಂಖ್ಯೆಯು ಈ ಕರೆಯನ್ನು ಸ್ವೀಕರಿಸಲು ಸಿದ್ಧವಾಗಲಿಲ್ಲ. ಇದನ್ನು ಅಂಗೀಕರಿಸಿ
ಮುಸ್ಲಿಮ್ ಸಮುದಬಾಯವೆಂಬ ನೆಲೆಯನ್ನು ಸ್ವೀಕರಿಸಿಕೊಂಡವರೂ ಕಾಲಕ್ರಮೇಣ
ಕೆಡಲಾರಂಭಿಸಿದರು. ಕೆಲವು ಸಮುದಾಯಗಳಂತೂ ದೇವ ಮಾರ್ಗದರ್ಶನವನ್ನು
ಸಂಪೂರ್ಣವಾಗಿ ಕಳೆದುಕೊಂಡವು. ಇನ್ನು ಕೆಲವು ಸಮುದಾಯಗಳು ತಮ್ಮ
ಹಸ್ತಕ್ಟೇಪಗಳಿಂದಲೂ ಕಲಬೆರಕೆಗಳಿಂದಲೂ ಅದನ್ನು ವಿಕೃತಗೊಳಿಸಿದವು.
6) ಕೊನೆಗೆ ಸರ್ವಲೋಕಾಧಿಪತಿಯು ಗತ ಪ್ರವಾದಿಗಳು ಯಾವ ಕರ್ತವ್ಯ
ನಿರ್ವಹಣೆಗಾಗಿ ಕಳುಹಿಸಲ್ಪಡುತ್ತಿದ್ದರೋ ಅದಕ್ಕಾಗಿಯೇ ಹ. ಮುಹಮ್ಮದ್‌ರನ್ನು(ಸ)
ಕುರ್‌ಆನ್ ಅಧ್ಯಯನ ಮಾರ್ಗದರ್ಶಿ 13
ಅರಬ್ ದೇಶದಲ್ಲಿ ಕಳುಹಿಸಿದನು. ಅವರ ಅಭಿಸಂಬೋಧಿತರಲ್ಲಿ ಸಾಮಾನ್ಮ ಜನರೂ
ಇದ್ದರು. ಗತ ಪ್ರವಾದಿಗಳ ಭ್ರಷ್ಟ ಅನುಯಾಯಿಗಳೂ ಇದ್ದರು. ಸಕಲರಿಗೂ
ಸರಿದಾರಿಯ ಕಡೆಗೆ ಆಹ್ವಾನ ನೀಡುವುದು, ಎಲ್ಲರಿಗೂ ಪುನರಪಿ ಅಲ್ಲಾಹನ
ಮಾರ್ಗದರ್ಶನ ನೀಡುವುದು, ಈ ಕರೆ ಹಾಗೂ ಸನ್ಮಾರ್ಗವನ್ನು ಸ್ವೀಕರಿಸುವವರನ್ನು
ಒಂದು ಸಮುದಾಯವನ್ನಾಗಿ ಸಂಘಟಸಿ, ಒಂದೆಡೆ ಅದಕ್ಕೆ ಸೇರಿದವರ ವ್ಯಕ್ತಿಗತ
ಜೀವನ ವ್ಯವಸ್ಥೆಯನ್ನು ದೇವ ಮಾರ್ಗದರ್ಶನದ ಬುನಾದಿಯಲ್ಲಿ ಸ್ಥಾ: ಪಿಸುವುದೂ
ಇನ್ನೊಂದೆಡೆ ಲೋಕ ಸುಧಾರಣೆಗಾಗಿ ಅವಿರತ ಪ್ರಯತ್ನ ನಡೆಸುವುದೂ ಅವರ
ಕರ್ತವ್ಯವಾಗಿತ್ತು. ದೇವನು ಮುಹಮ್ಮದ್‌ರ(ಸ) ಮೇಲೆ ಅವತೀರ್ಣಗೊಳಿಸಿದ ಈ
ಸಂದೇಶ ಹಾಗೂ ಮಾರ್ಗದರ್ಶನಗಳನ್ನೊಳೆಗೊಂಡ ಗ್ರಂಥವೇ ಈ 'ಕುರ್‌ಆನ್.'
7 7 7
مہ یب
ಕುರ್‌ಆನಿನ مہ ಮೂಲವನ್ನು ತಿಳಿದುಕೊಂಡ ಬಳಿಕ ಈ ಗ್ರಂಥದ ಮುಖ್ಯ
ವಿಷಯವೇನು, ಇದರ ಕೇಂದ್ರೀಯ ವಿಷಯ ಯಾವುದು ಮತ್ತು ಇದರ ಇಂಗಿತವೇನು
ಎಂದು ತಿಳಿದುಕೊಳ್ಳಲು ವಾಚಕರಿಗೆ ಸುಲಭವಾಗುವುದು.
ಮುಖ್ಯ ವಿಷಯ: ಇದರ ಮುಖ್ಯ ವಿಷಯ ಮಾನವನಾಗಿದ್ದಾನೆ. ಏಕೆಂದರೆ
ಮಾನವನ ಜೀವನದ ಯಶಸ್ಸು ಮತ್ತು ಅವನ ನಷ್ಟ ಯಾವುದರಲ್ಲಿದೆಯೆಂಬುದೇ
ಇದರ ಸಾರಸರ್ವಸ್ವವಾಗಿದೆ.
ಕೇಂದ್ರೀಯ ವಿಷಯ: ಬಾಹ್ಯ ದೃಷ್ಟಿ ಊಹಾಪೋಹೆ ಅಥವಾ ಇಂದ್ರಿಯಾಸಕ್ತಿಗಳ
ಕಾರಣಗಳಿಂದ ಮಾನವನು ದೇವನ ಬಗ್ಗೆ ಹಾಗೂ ವಿಶ್ವ ವ್ಯವಸ್ಥೆಯ, ತನ್ನ ಸ್ವಂತ
ಅಸ್ಲಿತ್ತದ ಮತ್ತು ಲೌಕಿಕ ಜೀವನದ ಬಗ್ಗೆ ಇರಿಸಿಕೊಂಡಿರುವ ಭಾವನೆಗಳೂ
ಅವುಗಳ ತಳಹದಿಯಲ್ಲಿ ಸ್ವೀಕರಿಸಿಕೊಂಡಿರುವ ನಿಲುಮೆಗಳೂ ವಾಸ್ತವಿಕತೆಯ
ದೃಷ್ಟಿಯಿಂದ ತಪ್ಪು ಹಾಗೂ ಪರಿಣಾಮದ ದೃಷ್ಟಿಯಿಂದಲೂ ಸ್ವತಃ ಮಾನವನಿಗೇ
ವಿನಾಶಕಾರಿಯೂ ಆಗಿರುತ್ತದೆ. ದೇವನು ಮಾನವನನ್ನು ತನ್ನ ಪ್ರತಿನಿಧಿಯನ್ನಾಗಿ
ಮಾಡುವಾಗ ಅವನಿಗೆ ತೋರಿಸಿಕೊಟ್ಟುದೇ ವಾಸ್ತವಿಕತೆಯಾಗಿದೆ. ಈ ಆಧಾರದಲ್ಲಿ
ನಾನು ಹಿಂದೆ ವಿವರಿಸಿರುವ 'ನೈಜ ನಿಲುಮೆ'ಯೇ ಮಾನವನ ಮಟ್ಟಿಗೆ ನೈಜ ಹಾಗೂ
ಉತ್ತಮ ನಿಲುಮೆಯಾಗಿದೆ. ಕುರ್‌ಆನಿನ ಕೇಂದ್ರೀಯ ವಿಷಯವೂ ಇದುವೇ ಆಗಿದೆ.
14 ಕುರ್‌ಆನ್ ಅಧ್ಯಯನ ಮಾರ್ಗದರ್ಶಿ
ಉದ್ದೇಶ; ಮಾನವರನ್ನು ಈ ನೈಜ ನಿಲುಮೆಯ ಕಡೆಗೆ ಆಹ್ವಾನಿಸುವುದೂ ತನ್ನ
ನಿರ್ಲಕ್ಷ್ಯದಿಂದ ಕಳೆದು ಕೊಂಡ ಮತ್ತು ತನ್ನ ಕಿಡಿಗೇಡಿತನದಿಂದ ವಿಕೈತೆಗೊಳಿಸುತ್ತಿದ್ದ
ಅಲ್ಲಾಹನ ಈ ಸನ್ಮಾರ್ಗದರ್ಶನವನ್ನು ಸುವ್ಯಕ್ತವಾಗಿ ಮುಂದಿಡುವುದೂ ಇದರ
ಉದ್ದೇಶವಾಗಿರುತ್ತದೆ.
ಈ ಮೂರು ಮೂಲಭೂತ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು
ಕುರ್‌ಆನಿನ ಅಧ್ಯಯನ ನಡೆಸುವವನು ಈ ಗ್ರಂಥವು ಎಲ್ಲೂ ತನ್ನ ಮುಖ್ಯ ವಿಷಯ,
ಉದ್ದೇಶ ಮತ್ತು ಕೇಂದ್ರೀಯ ವಿಷಯಗಳಿಂದ ಕೂದಲೆಳೆಯಷ್ಟೂ ಸರಿಯದಿರು
ವುದನ್ನು ಕಾಣಬಲ್ಲನು. ಆದಿಯಿಂದ ಅಂತ್ಮದ ವರೆಗೂ ಅದರ ವೈವಿಧ್ಯಪೂರ್ಣ
ವಿಷಯಗಳು ಒಂದು ಸರದ ಬೇರೆ ಬೇರೆ ಗಾತ್ರಗಳ, ವಿವಿಧ ಬಣ್ಣಗಳೆ ಮುತ್ತು
ರತ್ನಗಳು ಒಂದೇ ದಾರದಲ್ಲಿ ಪೋಣಿಸಿದಂತೆ ಅದರ ಕೇಂದ್ರೀಯ ವಿಷಯದೊಂದಿಗೆ
ಜೋಡಿಸಲ್ಪಟ್ಟಿವೆ. ಅದು ಭೂಮಿ-ಆಕಾಶಗಳೆ ನಿರ್ಮಾಣ, ಮಾನವನ ಸೃಷ್ಟಿ, ವಿಶ್ವ
ನಿದರ್ಶನಗಳ ಪರಿಶೀಲನೆ ಮತ್ತು ಗತ ಸಮುದಾಯಗಳ ಘಟನೆಗಳ ಬಗ್ಗೆ
ಪ್ರಸ್ತಾಪಿಸುತ್ತದೆ. ಬೇರೆ ಬೇರೆ ಜನಾಂಗಗಳ ವಿಶ್ವಾಸ, ಚಾರಿತ್ರ್ಯ ಮತ್ತು ವರ್ತನೆ
ಗಳನ್ನು ವಿಮರ್ಶಿಸುತ್ತದೆ. ಅಲೌಕಿಕ ವಿಷಯಗಳನ್ನೂ ಸಮಸ್ಯೆಗಳನ್ನೂ ವಿವರಿಸುತ್ತದೆ.
ಇನ್ನೂ ಅನೇಕ ವಿಷಯಗಳ ಪ್ರಸ್ತಾಪ ನಡೆಸುತ್ತದೆ. ಆದರೆ, ಅವೆಲ್ಲ ಭೌತಶಾಸ್ತ್ರ
ಅಥವಾ ಇತಿಹಾಸ, ತತ್ತ್ವಶಾಸ್ತ್ರ ಅಥವಾ ಇನ್ನಾವುದಾದರೂ ವಿದ್ಯೆ ಅಥವಾ ಕಲೆಯ
ಶಿಕ್ಷಣ ನೀಡಲಿಕ್ಕಾಗಿ ಅಲ್ಲ. ಅದು ಮಾನವನಲ್ಲಿ ಪರಮಾರ್ಥದ ಬಗ್ಗೆ ಇರುವ
ತಪ್ಪುಕಲ್ಪನೆಯನ್ನು ದೂರೀಕರಿಸಲಿಕ್ಕೂ ವಾಸ್ತವಿಕತೆಯನ್ನು ಜನರಿಗೆ ಚೋಧಿಸಲಿಕ್ಕೂ
ವಸ್ತುಸ್ಲಿತಿಗೆ ವಿರುದ್ಧವಾದ ನಿಲುಮೆಯ ದೋಷ ಮತ್ತು ದುಷ್ಪರಿಣಾಮಗಳನ್ನು
ವ್ಯಕ್ತಪಡಿಸಲಿಕ್ಕೂ ಪರಮಾರ್ಥ ಹಾಗೂ ಸತ್ವರಿಣಾಮವನ್ನುಂಟು ಮಾಡತಕ್ಕೆಂತಹ
ನೀತಿಯ ಕಡೆಗೆ ಕರೆಕೊಡಲಿಕ್ಕೂ ಆಗಿರುತ್ತದೆ. ಆದುದರಿಂದಲೇ ಅದು ಪ್ರತಿಯೊಂದು
ವಿಷಯದ ಕುರಿತು ಉದ್ದೇಶಕ್ಕೆ ಅಗತ್ಯವಿರುವಷ್ಟರ ಮಟ್ಟಿಗೆ ಮಾತ್ರ ಪ್ರಸ್ತಾಪಿಸುತ್ತದೆ.
ಉದ್ದೇಶಕ್ಕೆ ಅಗತ್ಯವಿರುವಷ್ಟು ಮಾತ್ರ ಹೇಳಿದ ಬಳಿಕ ಅನವಶ್ಯಕ ವಿವರಣೆಗಳನ್ನು
ಬಿಟ್ಟು ತನ್ನ ಮುಖ್ಯ ಮತ್ತು ಕೇಂದ್ರೀಯ ವಿಷಯದ ಕಡೆಗೆ ವಾಲುತ್ತದೆ. ಅದರ
ಎಲ್ಲ ವಿವರಣೆಯೂ ಅತ್ಯಂತ ಏಕರೂಪತೆಯೊಂದಿಗೆ 'ಸಂದೇಶ ಪ್ರಚಾರ'ದ ಅಕ್ಟದ
ಸುತ್ತಲೂ ತಿರುಗುತ್ತಿರುತ್ತದೆ.
ಕುರ್‌ಆನ್ ಅಧ್ಯಯನ ಮಾರ್ಗದರ್ಶಿ 15
ಮಾ ಗೆ
ಕುರ್‌ಆನಿನ ಅವತರಣಾ ರೀತಿಯನ್ನು ಚೆನ್ನಾಗಿ ಅರಿತು ಕೊಳ್ಳದೆ ಹೋದರೆ
ಭಾಷಾ ಶೈಲಿ, ಅದರ ಕ್ರೋಢೀಕರಣ ಮತ್ತು ಅದರಲ್ಲಿರುವ ಹಲವಾರು ವಿಷಯ
ಗಳನ್ನು ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯವಾಗದು.
ಈ ಕುರ್‌ಆನ್, ಅಲ್ಲಾಹನು ಒಮ್ಮೆಲೆ ಬರೆದು ಹ. ಮುಹಮ್ಮದ್‌ರವರಿಗೆ(ಸ)
ಕೊಟ್ಟು ಇದನ್ನು ಪ್ರಕಟಿಸಿ ಜನರನ್ನು ಒಂದು ನಿರ್ದಿಷ್ಟ ಜೀವನ ವಿಧಾನದ ಕಡೆಗೆ
ಆಹ್ವಾನಿಸಿರೆಂದು ಹೇಳಿದಂತಹ ಗ್ರಂಥವಲ್ಲ. ಇದು ಸಾಮಾನ್ಯ ಗ್ರಂಥ ರಚನಾ
ವಿನ್ಮಾಸೆ ಪ್ರಕಾರ ಗ್ರಂಥದ ಮೂಲ ವಿಷಯ ಮತ್ತು ಕೇಂದ್ರೀಯ ವಿಷಯಗಳ ಕುರಿತು
ಚರ್ಚಿಸಲಾಗುವಂತಹ ಗ್ರಂಥವೂ ಅಲ್ಲ. ಈ ಕಾರಣದಿಂದಲೇ ಇದರಲ್ಲಿ ಗ್ರಂಥ
ರಚನಾಕ್ರಮವಾಗಲಿ ಗ್ರಂಥದ ಶೈಲಿಯಾಗಲಿ ಇಲ್ಲ. ಅಲ್ಲಾಹನು ಮಕ್ಕಾ ಪಟ್ಟಣದಲ್ಲಿ
ತನ್ನ ಓರ್ವ ದಾಸನನ್ನು ಸಂದೇಶವಾಹಕರಾಗಿ ನಿಯುಕ್ತಗೊಳಿಸಿ ಅವರ ಸ್ವಂತ
ಊರಲ್ಲಿ ಅವರ ಗೋತ್ರದಿಂದ (ಕುರೈಶ್) ಈ ಆಂದೋಲನವನ್ನು ಪ್ರಾರಂಭಿಸಬೇಕೆಂದು
ಆದೇಶ ನೀಡಿದನು. ಈ ಕಾರ್ಯವನ್ನಾರಂಭಿಸಲು ಮೊತ್ತ ಮೊದಲು ಅಗತ್ಕವಾಗಿ
ಬೇಕಾಗಿದ್ದ ನಿರ್ದೇಶನಗಳನ್ನು ಮಾತ್ರ ನೀಡಲಾಯಿತು. ಅವು ಹೆಚ್ಚಾಗಿ ಮೂರು
ವಿಷಯಗಳನ್ನೊಳಗೊಂಡಿದ್ದವು:
1) ಇಂತಹ ಮಹತ್ಕಾರ್ಯಕ್ಕಾಗಿ ತನ್ನನ್ನು ತಾನೇ ಹೇಗೆ ಸಿದ್ದಪಡಿಸಿಕೊಳ್ಳ
ಬೇಕು ಮತ್ತು ಯಾವ ರೀತಿಯಲ್ಲಿ ಕಾರ್ಯವೆಸಗಬೇಕೆಂದು ಸಂದೇಶವಾಹಕರಿಗೆ
ಬೋಧಿಸುವುದು.
2) ಪರಮಾರ್ಥದ ಬಗ್ಗೆ ಪ್ರಾಥಮಿಕ ಜ್ಞಾನ, ವಸ್ತುಸ್ಥಿತಿಯ ಬಗ್ಗೆ 'ಪರಿಸರದ
ಜನರಲ್ಲಿ ಕಂಡು ಬರುತ್ತಿದ್ದ ತಪ್ಪುಕಲ್ಪನೆಯಿಂದಾಗಿ ಅವರ ರೀತಿ ನೀತಿಗಳೇ
ಬದಲಾಗುತ್ತಿದ್ದುದರಿಂದ ಅವುಗಳ ಸ್ಥೂಲ ಖಂಡನೆ.
3) ಸರಿಯಾದ ರೀತಿ ನೀತಿಗಳ ಕಡೆಗೆ ಆಹ್ವಾನ ಮತ್ತು ದೇವ ನಿರ್ದೇಶನ
"ಯಾವ ನೈತಿಕ ಮೂಲ ಸಿದ್ಧಾಂತಗಳಿಂದ ಮಾನವನಿಗೆ ಯಶಸ್ಸು ಹಾಗೂ
ಕಲ್ಯಾಣವಾಗುವುದೋ ಅವುಗಳ ವಿವರಣೆ.
ಮೊತ್ತ ಮೊದಲು ಈ ಸಂದೇಶಗಳು ಸತೃಪ್ರಚಾರದ ಆರಂಭವೆಂಬ ನೆಲೆಯಲ್ಲಿ
ಕೆಲವು ಸಂಕ್ಷಿಪ್ತ ನುಡಿಗಳಲ್ಲಿರುತ್ತಿದ್ದವು. ಅವುಗಳ ಭಾಷೆಯು ನಿಖರ, ಮಧುರ.
ಮತ್ತು ಅತ್ಯಂತ ಪರಿಣಾಮಕಾರಿಯಾಗಿದ್ದು ಶ್ರೋತ್ಯ ವರ್ಗದ ಅಭಿರುಚಿಗನುಸಾರವಾಗಿ
16 ಕುರ್‌ಆನ್ ಅಧ್ಯಯನ ಮಾರ್ಗದರ್ಶಿ
ಅತ್ಯುತ್ತಮ ಸಾಹಿತ್ಯ ವರ್ಣವನ್ನೊಳೆಗೊಂಡಿತ್ತು. ಇದರಿಂದಾಗಿ ಅದು ಜನರ
ಹೃದಯಕ್ಕೆ ಬಾಣದಂತೆ ನಾಟುತ್ತಿತ್ತು. ಅದರ ಮಾಧುರ್ಯದಿಂದಾಗಿ ಅವರ ಕಿವಿಗಳು
ತಾವಾಗಿಯೇ ನಿಮಿರುತ್ತಿದ್ದವು. ಅದರ ಅನುರೂಪ ಲಾಲಿತ್ಯದ ಕಾರಣ ನಾಲಗೆಗಳು
ತನ್ನಿಂತಾನೇ ಅದನ್ನು ಆವರ್ತಿಸಲು ನಿರ್ಬಂಧಿತವಾಗುತ್ತಿದ್ದುವು. ಅದರಲ್ಲಿ ಸ್ಥಾನೀಯ
ವರ್ಣವೂ ಅಧಿಕವಾಗಿತ್ತು. ಸಾರ್ವಲೌಕಿಕ ಸತ್ಯಗಳನ್ನು ವಿವರಿಸಲಾಗುತ್ತಿತ್ತಾದರೂ
ಅವುಗಳಿಗೆ ಬೇಕಾದ ದೃಷ್ಟಾಂತಗಳು, ಸಾಕ್ಷ್ಯಗಳು ಮತ್ತು ಉದಾಹರಣೆಗಳನ್ನು
ಶ್ರೋತೃಗಳಿಗೆ ಚಿರಪರಿಚಿತವಾಗಿದ್ದ ಅತಿ ಸಮೊಪದ ಪರಿಸರಗಳಿಂದಲೇ
ಆಯ್ದುಕೊಳ್ಳಲಾಗಿತ್ತು. ಅವರು ಅದರಿಂದ ಪ್ರಭಾವಿತರಾಗುವಂತೆ ಅವರದೇ ಐತಿಹಾಸಿಕ
ಕಥನ, ಅವರದೇ ಸಂಪ್ರದಾಯಗಳು ಮತ್ತು ಅವರ ನಂಬಿಕೆಗೆ ಹಾಗೂ ನೈತಿಕ-
ಸಾಮಾಜಿಕ ದೋಷಗಳ ಬಗ್ಗೆ ಚರ್ಚಿಸಲಾಗುತ್ತಿತ್ತು.
ಸಂದೇಶ ಪ್ರಚಾರದ ಈ ಪ್ರಾರಂಭಿಕ ಹಂತವು ಸುಮಾರು ನಾಲ್ಕೈದು ವರ್ಷಗಳ
ವರೆಗೆ ಮುಂದುವರಿಯಿತು. ಈ ಘಟ್ಟದಲ್ಲಿ ಪ್ರವಾದಿವರ್ಯರ(ಸ) ಧರ್ಮಾಹ್ವಾನದ
ಪ್ರತಿಕ್ರಿಯೆಯೂ ಮೂರು ರೂಪಗಳಲ್ಲಿ ಕಂಡು ಬಂತು:
1) ಕೆಲವು ಸಜ್ಜನರು ಈ ಆಹ್ವಾನವನ್ನು ಸ್ವೀಕರಿಸಿ ಮುಸ್ಲಿಮ್ ಸಮುದಾಯದಲ್ಲಿ
ಸೇರಿಕೊಳ್ಳಲು ಸಿದ್ಧರಾದರು.
2) ಬಹು ದೊಡ್ಡ ವಿಭಾಗವು ಅಜ್ಞಾನ ಸ್ವಾರ್ಥ ಅಥವಾ ಪೂರ್ವಿಕರ
ಆಚಾರಗಳ ಪ್ರೇಮದಿಂದಾಗಿ ಪ್ರತಿರೋಧಕ್ಕೆ ಅಣಿಯಾಯಿತು.
3) ಈ ನವ ಆಂದೋಲನದ ಧ್ವನಿಯು ಮಕ್ಕಾ ಮತ್ತು ಕುರೈಶ್ ಗೋತ್ರದ
ಮೇರೆಯನ್ನು ದಾಟಿ ದೂರ ದೂರಕ್ಕೆ ತಲಪತೊಡಗಿತು.
ನಃ ۴
یپ ಳೇ ಈ
ಇಲ್ಲಿಂದ ಈ ಆಂದೋಲನದ ಎರಡನೆಯ ಹಂತ ಆರಂಭವಾಗುತ್ತದೆ. ಈ
ಹಂತದಲ್ಲಿ ಇಸ್ಲಾಮಿನ ಈ ಆಂದೋಲನ ಮತ್ತು ಪುರಾತನ ಅಜ್ಞಾನಗಳ ನಡುವೆ
ಒಂದು ತೀವ್ರ ಘರ್ಷಣೆಯುರಟಾಯಿತು. ಇದು ನಿರಂತರ ಎಂಟೊಂಭತ್ತು ವರ್ಷಗಳ
ತನಕ ಮುಂದುವರಿಯಿತು. ಮಕ್ಕಾ ಪಟ್ಟಣದಲ್ಲಿ ಮತ್ತು ಕುರೈಶ್ ಗೋತ್ರದಲ್ಲಿ
ಮಾತ್ರವಲ್ಲ ಅರೇಬಿಯಾದ ಹೆಚ್ಚಿನ ಭಾಗಗಳಲ್ಲಿ ಗತಕಾಲದ ಅಜ್ಞಾನವನ್ನೇ
ಕುರ್‌ಆನ್ ಅಧ್ಯಯನ ಮಾರ್ಗದರ್ಶಿ 17
ಉಳಿಸಿಕೊಳ್ಳಲು ಹವಣಿಸುತ್ತಿದ್ದವರು ಈ ಆಂದೋಲನವನ್ನು ಬಲ ಪ್ರಯೋಗಿಸಿ
ಅಳಿಸಲು ಮುಂದಾದರು. ಅವರು ಇದನ್ನು ನಿರ್ಮೂಲನಗೊಳಿಸಲು ಎಲ್ಲಾ ವಿಧದ
ಅಸ್ತ್ರಗಳನ್ನೂ ಬಳಸಿದರು. ಸುಳ್ಳು ಪ್ರಚಾರ ನಡೆಸಿದರು. ಮಿಥ್ಕಾರೋಪಗಳನ್ನು
ಹೊರಿಸಿದರು. ಸಂದೇಹಗಳನ್ನು ವ್ಯಕ್ತಪಡಿಸಿದರು. ಆಕ್ಷೇಪಣೆಗಳ ಸುರಿಮಳೆಗರೆದರು.
ಜನಸಾಮಾನ್ಯರ ಮನಸ್ಸಿನಲ್ಲಿ ತರತರದ ಸಂಶಯಗಳನ್ನುಂಟು ಮಾಡಿದರು.
ಪ್ರವಾದಿಯವರ(ಸ) ಮಾತುಗಳನ್ನು ಕೇಳಬಾರದೆಂದು ಅಪರಿಚಿತರನ್ನು ತಡೆಯಲು
ಪ್ರಯತ್ನಿಸಿದರು. ಇಸ್ಲಾಮ್ ಸ್ಟೀಕರಿಸಿದವರ ಮೇಲೆ ಘೋರ ಹಿಂಸೆ
ದೌರ್ಜನ್ಯಗಳನ್ನೆಸಗಿದರು. ಅವರ ಮೇಲೆ ಆರ್ಥಿಕ ಮತ್ತು ಸಾಮಾಜಿಕ ಬಹಿಷ್ಕಾರ
ಹಾಕಿದರು. ಹಿಂಸೆಯನ್ನು ಸಹಿಸಲಿಕ್ಕಾಗದೆ ಅವರ ಪೈಕಿ ಅನೇಕರು ತಮ್ಮ
ಮನೆಮಾರುಗಳನ್ನು ಬಿಟ್ಟು ಎರಡು ಸಲ ಇದಿಯೋಪಿಯಾಕ್ಕೆ ವಲಸೆ
ಹೋಗಬೇಕಾಯಿತು. ಕೊನೆಗೆ ಮೂರನೆಯ ಬಾರಿ ಅವರೆಲ್ಲರೂ ಮದೀನಾಕ್ಕೆ ವಲಸೆ
ಹೋಗಬೇಕಾಯಿತು. ಆದರೆ ದಿನದಿಂದ ದಿನಕ್ಕೆ ಪ್ರತಿರೋಧವು ಹೆಚ್ಚುತ್ತಿದ್ದಾಗಲೂ
ಈ ಆಂದೋಲನವು ಹಬ್ಬುತ್ತಲೇ ಹೋಯಿತು. ಮಕ್ಕಾ ಪಟ್ಟಣದಲ್ಲಿ ಒಬ್ಬ
ಸದಸ್ಕನಾದರೂ ಇಸ್ಲಾಮನ್ನು ಸ್ವೀಕರಿಸದಿದ್ದ ಒಂದೇ ಒಂದು ಕ್ಷುಟುಂಬವಾಗಲಿ
ಮನೆಯಾಗಲಿ ಉಳಿಯಲಿಲ್ಲ. ಇಸ್ಲಾಮ್ ವಿರೋಧಿಗಳ ಹಗೆತನದಲ್ಲಿ ಇನ್ನಷ್ಟು
ಕಾಠಿಣ್ಯ ಮತ್ತು ತೀಕ್ಷ್ಯತೆಯುಂಟಾಗುತ್ತಾ ಹೋಗಲು ಇನ್ನೊಂದು ಕಾರಣವಿತ್ತು.
ಅನೇಕರ ಸಹೋದರರೂ ಸಹೋದರ ಪುತ್ರರೂ ಪುತ್ರಿಯರೂ ಸಹೋದರಿಯರೂ
ಪತಿಯಂದಿರೂ ಇಸ್ಲಾಮಿನ ಅನುಯಾಯಿಗಳಾದುದು ಮಾತ್ರವಲ್ಲ ಅದರ ಅನುರಕ್ತರಾಗಿ
ಬಿಟ್ಟಿದ್ದರು. ಅವರ ಕರುಳಿನ ಕುಡಿಗಳೇ ಅವರ ವಿರುದ್ಧ ಹೋರಾಟಕ್ಕಿಳಿದಿದ್ದರು.
ಹಳೆಯ ಕಾಲದ ಅಜ್ಞಾನದೊಂದಿಗಿದ್ದ ಸಂಬಂಧಗಳನ್ನು ಕಡಿದುಕೊಂಡು ಈ
ನವೋತ್ಥಾನ ಆಂದೋಲನದ ಕಡೆಗೆ" ಬರುತ್ತಿದ್ದವರೆಲ್ಲ ಮೊದಲೇ ಸಮಾಜದಲ್ಲಿ -
ಅತ್ಯುತ್ತಮರೆಂದು: ಪರಿಗಣಿಸಲ್ಪಟ್ಟವರಾಗಿದ್ದುದು ಇನ್ನಷ್ಟು ಸ್ವಾರಸ್ಕಕರ ಸಂಗತಿ.
ಅವರು ಈ ಆಂದೋಲನದಲ್ಲಿ ಸೇರಿಕೊಂಡ ಬಳಿಕ ಅತ್ಯಂತ ಸತ್ಕಸಂಧರೂ
ಸಚ್ಚಾರಿತ್ಯ್ಯದ ಸಾಕಾರಮೂರ್ತಿಗಳೂ ಆಗುತ್ತಿದ್ದುದರಿಂದ ಇಂತಹವರನ್ನು ತನ್ನ
885 ಆಕರ್ಷಿಸಿ, ಆ ರೀತಿಯಲ್ಲಿ ಸಂಸ್ಕರಿಸುತ್ತಿದ್ದ ಈ ಅಂದೋಲನದ ಔನ್ನತ್ಯವನ್ನು
ಮನಗಾಣದಿರಲು ಲೋಕಕ್ಕೆ ಸಾಧ್ಯವೇ ಇರಲಿಲ್ಲ.
18 ಕುರ್‌ಆನ್ ಅಧ್ಯಯನ ಮಾರ್ಗದರ್ಶಿ
ಈ ಸುದೀರ್ಪ ಹಾಗೂ ತೀವ್ರ ಸಂಘರ್ಷದ ಕಾಲದಲ್ಲಿ ಅಲ್ಲಾಹನು
ಸಂದರ್ಭಕ್ಕನುಸಾರವಾಗಿ ಅಗತ್ಯವುಳ್ಳ ಪ್ರಭಾವಪೂರ್ಣ ಉಪನ್ಮಾಸಗಳನ್ನು
ಅವತೀರ್ಣಗೊಳಿಸುತ್ತಿದ್ದನು. ಅವುಗಳಲ್ಲಿ ಪ್ರವಾಹದಂತಹ ನಿರರ್ಗಳತೆ,
ಮಹಾಪೂರದಂತಹ ಶಕ್ತಿ, ಕಾಡ್ಗಿಚ್ಚಿನಂತಹ ಪ್ರಭಾವವಿರುತ್ತಿತ್ತು. ಆ ಉಪನ್ಯಾಸಗಳಲ್ಲಿ
ಒಂದು ಕಡೆ ಸತ್ಯವಿಶ್ವಾಸಿಗಳಿಗೆ ಅವರ ಪ್ರಾಥಮಿಕ ಕರ್ತವ್ಯಗಳನ್ನು ತೋರಿಸಿ
ಕೊಡಲಾಯಿತು. ಅವರಲ್ಲಿ ಸಾಮೂಹಿಕತೆಯ ಪ್ರಜ್ಞೆಯನ್ನು ಸೃಷ್ಟಿಸಲಾಯಿತು.
ಅವರಿಗೆ ಧರ್ಮನಿಷ್ಠೆ, ಸುಶೀಲತೆ ಮತ್ತು ಸಚ್ಚಾರಿತ್ಯ್ಯಗಳ ಮಹತ್ವಕ್ಕೆ ಸಂಬಂಧಿಸಿದ
ಶಿಕ್ಷಣವನ್ನೀಯಲಾಯಿತು. ಅವರಿಗೆ ಸತ್ಯಧರ್ಮವನ್ನು ಪ್ರಚಾರಮಾಡುವ ವಿಧಾನವನ್ನು
ಜೋಧಿಸಲಾಯಿತು. ವಿಜಯದ ವಾಗ್ದಾನ ಮತ್ತು ಸ್ವರ್ಗದ ಸುವಾರ್ತೆ ನೀಡುವುದರ
ಮೂಲಕ ಅವರಲ್ಲಿ ಧೈರ್ಯ ತುಂಬಲಾಯಿತು. ಸಹನೆ, ಧೈರ್ಯ, ಸ್ಥೆ ನ್ಟೈರ್ಯ ಹಾಗೂ
ಮಹಾ ಸಾಹಸದೊಂದಿಗೆ ಅಲ್ಲಾಹನ ಮಾರ್ಗದಲ್ಲಿ ಪರಿಶ್ರಮ ನಡೆಸುವಂತೆ
ಅವರನ್ನು ಹುರಿದುಂಬಿಸಲಾಯಿತು. ಘೋರ ಚಿತ್ರ ಹಿಂಸೆಗಳನ್ನು ಸಹಿಸಿಕೊಂಡೂ
ತಮಗೆ ಎದುರಾಗಿರುವ ಮಹಾ ಚಂಡಮಾರುತಗಳನ್ನೆದುರಿಸಲು ಸಿದ್ಧರಾಗತಕ್ಕಂತಹ
ಅಮಿತೋತ್ಸಾಹ, ಸ್ಫೂರ್ತಿ, ಹುಮ್ಮಸ್ಸುಗಳನ್ನು ಅವರಲ್ಲಿ ತುಂಬಲಾಯಿತು. ಇನ್ನೊಂದು
ಕಡೆ ವಿರೋಧಿಗಳಿಗೂ ಸತ್ಯಮಾರ್ಗದಿಂದ ವಿಮುಖರಾಗುವವರಿಗೂ ಅನಾಸ್ಗೆಯ
ಗಾಢ ನಿದ್ರೆಯಲ್ಲಿರುವವರಿಗೂ ಗತ ಜನಾಂಗಗಳಿಗೊದಗಿದ ದುರಂತಗಳನ್ನು ವಿವರಿಸಿ
ಹೇಳುವ, ಮೂಲಕ ಎಚ್ಚರಿಕೆ ಕೊಡಲಾಯಿತು. ಆ ಜನಾಂಗಗಳೆ ಇತಿಹಾಸವನ್ನು
ಅವರು ಬಲ್ಲವರಾಗಿದ್ದರು. ತಮ್ಮ ವ್ಯಾಪಾರದ ನಿಮಿತ್ತ ಮಾಡುತ್ತಿದ್ದ ಪ್ರಯಾಣದ
ವೇಳೆ ದಾರಿಯಲ್ಲಿ ಕಾಣುತ್ತಿದ್ದ ಆ ಕಾಲದ ಅಳಿದುಳಿದ ಕುರುಹುಗಳನ್ನೂ ಅವರ
ಮುಂದಿಟ್ಟು ಎಚ್ಚರಿಸಲಾಯಿತು. ಅವರು ಭೂಮಿ-ಆಕಾಶಗಳಲ್ಲಿ ಸದಾ ಕಣ್ಣಾರೆ
ಕಾಣುತ್ತಿದ್ದ ಕುರುಹುಗಳ ಮೂಲಕ ಅವರಿಗೆ 'ತೌಹೀದ್'(ಏಕದೇವವಿಶ್ವಾಸ) ಮತ್ತು
'ಅಖಿರತ್'(ಪರಲೋಕ ವಿಶ್ವಾಸ)ಗೆ ಸಂಬಂಧಿಸಿದ ದೃಷ್ಟಾಂತಗಳನ್ನು. ಕೊಡಲಾಯಿತು.
ಇವನ್ನೆಲ್ಲಾ ಅವರು ತಮ್ಮ ಜೀವನದಲ್ಲಿ ಸದಾ ಕಂಡು ಅನುಭವಿಸುತ್ತಿದ್ದರು.
'ಶಿರ್ಕ್'(ಬಹುದೇವತ್ವ) ಮತ್ತು ನಿರಂಕುಶವಾದ, ಪರಲೋಕದ ನಿರಾಕರಣೆ ಮತ್ತು
ಹಿರಿಯರ ಅಂಧಾನುಕರಣೆಗಳ ದೋಷಗಳನ್ನು ಮನ ಮಸ್ತಿಷ್ಕಗಳಿಗೆ ನಾಟುವಂತಹ
ಸುಸ್ಪಷ್ಟ ನಿದರ್ಶನಗಳ ಮೂಲಕ ವ್ಯಕ್ತಪಡಿಸಲಾಯಿತು. ಅವರ ಪ್ರತಿಯೊಂದು
ಶುರ್‌ಆನ್ ಅಧ್ಯಯನ ಮಾರ್ಗದರ್ಶಿ 19
ಸಂದೇಹವನ್ನು ನಿವಾರಿಸಲಾಯಿತು. ಅವರ ಪ್ರತಿಯೊಂದು ಆಕ್ಷೇಪಗಳಿಗೆ ಸೂಕ್ತ
ರೀತಿಯಿಂದ ಉತ್ತರಿಸಲಾಯಿತು. ಅವರು ಸ್ವತಃ ಸಿಲುಕಿ ಬಿದ್ದಿದ್ದ ಹಾಗೂ ಇತರರನ್ನು
ಸಿಲುಕಿಸುತ್ತಿದ್ದ ಸಕಲ ಜಟಿಲತೆಗಳನ್ನು ದೂರೀಕರಿಸಲಾಯಿತು. ಅಜ್ಞಾನವನ್ನು ಎಲ್ಲ
ದಿಕ್ಕುಗಳಿಂದಲೂ ಸುತ್ತುವರಿದು ಸಂಕೀರ್ಣಗೊಳಿಸಿದಾಗ, ಬೌದ್ದಿಕ ಲೋಕದಲ್ಲಿ
ಅದಕ್ಕೆ ನೆಲೆಯೂರಲು ಎಲ್ಲೂ ಸ್ಥಾನವಿಲ್ಲದಂತಾಯಿತು. ಇದರೊಂದಿಗೇ ಅವರಲ್ಲಿ
ಅಲ್ಲಾಹನ ಕ್ರೋಧ ಮತ್ತು ಅಂತ್ಮ ದಿನದ ಭಯಾನಕ ನರಕದ ಘೋರ ಯಾತನೆಯ
ಭಯವನ್ನು ಮೂಡಿಸಲಾಯಿತು. ಅವರ ದುರಾಚಾರ, ದೋಷಪೂರ್ಣ ಜೀವನ,
ಅಜ್ಞಾನಜನ್ಯ ಕಂದಾಚಾರ, ಸತ್ಯದ್ವೇಷ ಮತ್ತು ಅವರು ಸತ್ಯವಿಶ್ವಾಸಿಗಳಿಗೆ ನೀಡುತ್ತಿದ್ದ
ಕಿರುಕುಳಗಳ ಬಗ್ಗೆ ಛೀಮಾರಿ ಹಾಕಲಾಯಿತು. ಅಲ್ಲಾಹನ ಮೆಚ್ಚುಗೆಯ ಉತ್ತಮ
ನೀತಿ ನಾಗರಿಕತೆಗಳು ಯಾವ ಮೂಲ ತತ್ವಗಳ ಮೇಲೆ ನೆಲೆ ನಿಲ್ಲುತ್ತಾ ಬಂದಿದ್ದುವೋ
ಅವುಗಳಿಗೆ ಸಂಬಂಧಿಸಿದ ದೊಡ್ಡ ದೊಡ್ಡ ಮೂಲ ತತ್ವಗಳನ್ನು ಅವರ
ಮುಂದಿರಿಸಲಾಯಿತು. i
ಈ ಹಂತವು ವಿವಿಧ ಘಟ್ಟಗಳನ್ನೊಳೆಗೊಂಡಿತ್ತು. ಅದರ ಪ್ರತಿಯೊಂದು
ಘಟ್ಟದಲ್ಲಿ ಸಂದೇಶಪ್ರಚಾರ ಕಾರ್ಯವು ವಿಸ್ಪತಗೊಳ್ಳುತ್ತಾ ಸಾಗಿತು. ಹೋರಾಟ
ಮತ್ತು ಪ್ರತಿರೋಧಗಳು ತೀವ್ರವಾಗುತ್ತಾ ಹೋಯಿತು. ನಾನಾ ರೀತಿಯ
ವಿಶ್ವಾಸಗಳನ್ನೂ ವಿವಿಧ ಕರ್ಮವಿಧಾನಗಳನ್ನಿರಿಸಿಕೊಂಡವರನ್ನೂ ಎದುರಿಸಬೇಕಾಯಿತು.
ಅದಕ್ಕನುಸಾರವಾಗಿಯೇ ಅಲ್ಲಾಹನ ಕಡೆಯಿಂದ ಬರುವ ಸಂದೇಶಗಳ ವಿಷಯಗಳು
ವೈವಿಧ್ಯಪೂರ್ಣವಾಗಿರುತ್ತಿತ್ತು. ಇದು ಮಕ್ಕಾದಲ್ಲಿ ಅವತೀರ್ಣಗೊಂಡ ಕುರ್‌ಆನಿನ
ಅಧ್ಯಾಯಗಳ ಹಿನ್ನೆಲೆಯಾಗಿದೆ.
ಮಕ್ಕಾದಲ್ಲಿ ಈ ಆಂದೋಲನವು ತನ್ನ ಕಾರ್ಯವೆಸಗುತ್ತಾ ಹದಿಮೂರು
ವರ್ಷಗಳು ಕಳೆದುಹೋಗಿದ್ದುವು. ಅದೇ ವೇಳೆ ಅರಬ್ ದೇಶದ: ಎಲ್ಲ
ಭಾಗಗಳಿಂದಲೂ ತನ್ನ ಅನುಯಾಯಿಗಳನ್ನು ಒಂದೆಡೆ ಒಟ್ಟು ಸೇರಿಸುವುದರ
ಮೂಲಕ ತನ್ನ ಬಲವನ್ನು ಕೇಂದ್ರೀಕರಿಸಿಕೊಳ್ಳ ತಕ್ಕಂತಹ. ಒಂದು ಕೇಂದ್ರ ಸ್ಥಾನವು
ಮದೀನಾದಲ್ಲಿ ಹಠಾತ್ತನೆ ಒದಗಿಬಿಟ್ಟಿತು. ಆ ಪ್ರಕಾರ ಪ್ರವಾದಿವರ್ಯರೂ(ಸ)
/
'
20 ಕುರ್‌ಆನ್ ಅಧ್ಯಯನ ಮಾರ್ಗದರ್ಶಿ
'ಹೆಚ್ಚಿನ ಅನುಯಾಯಿಗಳೂ 'ಹಿಜ್ರತ್' (ವಲಸೆ) ಮಾಡಿ ಮದೀನಾಕ್ಕೆ ತಲಪಿದರು. ಹೀಗೆ!
ಈ ಆಂದೋಲನವು ಮೂರನೆಯ ಹಂತಕ್ಕೆ ಕಾಲಿಟ್ಟಿತು. 4
ಈ ಕಾಲಘಟ್ಟದಲ್ಲಿ ಪರಿಸ್ಥಿತಿಯು ಸಂಪೂರ್ಣ ಬದಲಾಯಿತು. ಮುಸ್ಲಿಮ್
ಸಮುದಾಯವು ಒಂದು ಕ್ರಮಬದ್ಧ ರಾಷ್ಟ್ರವನ್ನು ನಿರ್ಮಾಣ ಮಾಡಿಕೊಳ್ಳುವುದರಲ್ಲಿ
ಯಶಸ್ವಿಯಾಯಿತು. ಪ್ರಾಚೀನ ಅಜ್ಞಾನದ ಧ್ವಜವಾಹಕರೊಂದಿಗೆ ಸಶಸ್ತ್ರ ಹೋರಾಟ
ಆರಂಭವಾಯಿತು. ಗತ ಪ್ರವಾದಿಗಳ ಸಮುದಾಯ(ಯಹೊದಿಯರು ಮತ್ತು
ಕ್ರೈಸ್ತರು)ುದವರನ್ನೂ ಎದುರಿಸಬೇಕಾಗಿ ಬಂತು. ಮುಸ್ಲಿಮ್ ಸಮುದಾಯದ ಒಳೆಗೂ
ನಾನಾ ವಿಧದ ಕಪಟವಿಶ್ವಾಸಿಗಳು ನುಸುಳಿ ಬಂದರು. ಅವರೊಂದಿಗೂ
ವ್ಯವಹರಿಸಬೇಕಾಗಿ ಬಂತು. ಈ ಆಂದೋಲನವು ಹತ್ತು ವರ್ಷಗಳ ಅತ್ಮುಗ್ರ
ಘರ್ಷಣೆಗಳನ್ನು ದಾಟ ಕಟ್ಟಕಡೆಗೆ ಇಡೀ ಅರಬ್ ದೇಶವು ಅದರ ಅಧೀನಕ್ಕೆ
ಬರುವಷ್ಟು ಯಶಸ್ಸು ಗಳಿಸಿತು. ಸಾರ್ವಲೌಕಿಕ ಕರೆ ಹಾಗೂ ಸುಧಾರಣಾ ಕಾರ್ಯಗಳ
ದ್ವಾರಗಳು ತೆರೆಯಲ್ಪಟ್ಟವು. ಈ ಹಂತಗಳಿಗೆ ಅನೇಕ ಉಪಹಂತಗಳಿದ್ದುವು.
ಪ್ರತಿಯೊಂದು ಉಪಹಂತದಲ್ಲೂ ಈ ಆಂದೋಲನದ ವಿಶಿಷ್ಟ ಬೇಡಿಕೆಗಳಿದ್ದುವು.
ಈ ಅವಶ್ಯಕತೆಗಳಿಗೆ ಅನುಗುಣವಾದ ಉಪನ್ಮಾಸಗಳು ಅಲ್ಲಾಹನ ವತಿಯಿಂದ
ಪ್ರವಾದಿವರ್ಯರ(ಸ) ಮೇಲೆ ಅವತೀರ್ಣಗೊಳ್ಳುತ್ತಿದ್ದುವು, ಅವುಗಳ ರೀತಿಯು
ಕೆಲವೊಮ್ಮೆ ಅವೇಶಪೂರ್ಣವಾಗಿದ್ದರೆ ಇನ್ನು ಕೆಲವೊಮ್ಮೆ ರಾಜ ಗಾಂಭೀರ್ಯ
ಹೊಂದಿತ್ತು. ಒಮ್ಮೆ ಬೋಧನಾತ್ಮಕವಾಗಿದ್ದರೆ ; ಇನ್ನೊಮ್ಮೆ ಸುಧಾರಣೆಗಾಗಿ
ಸಮಜಾಯಿಸುವಂತೆಯೂ ಇರುತ್ತಿತ್ತು. ಇವುಗಳಲ್ಲಿ ಸಂಘಟನೆ, ಸರಕಾರ ಮತ್ತು
ಉತ್ತಮ ನಾಗರಿಕ ಸಮಾಜದ ನಿರ್ಮಾಣ ಮಾಡುವುದು ಹೇಗೆ? ಜೀವನದ ವಿವಿಧ
ವಿಭಾಗಗಳನ್ನು ಯಾವ ನಿಯಮ ನಿಬಂಧನೆಗಳಿಗನುಸಾರ ನೆಲೆ ನಿಲ್ಲಿಸಬಹುದು?
ಮುನಾಫಿಕ(ಕಪಟವಿಶ್ವಾಸಿ)ರೊಂದಿಗೆ ಹೇಗೆ ವ್ಯವಹರಿಸಬೇಕು? ದಿಮ್ಮಿ (ಇಸ್ಲಾಮೊ
ರಾಷ್ಟ್ರದ ಮುಸ್ಲಿಮೇತರ ಪ್ರಜೆ)ಗಳೊಂದಿಗೆ ಹೇಗೆ" ನಡೆದುಕೊಳ್ಳಬೇಕು? ಗ್ರಂಥದವ
ರೊಂದಿಗೆ ಇರಿಸಿಕೊಳ್ಳಬೇಕಾದ ಸಂಬಂಧ ಯಾವ ತರದ್ದು? ಯುದ್ದ ಘೋಷಿಸಿದ
ಶತ್ರುಗಳೊಂದಿಗೆ ಮತ್ತು ಒಪ್ಪಂದಬದ್ಧ ಜನಾಂಗಗಳೊಂದಿಗೆ ನಡೆದುಕೊಳ್ಳಬೇಕಾದ
_ ಕ್ರಮ ಹೇಗೆ? ಸುಸಂಘಟಿತ ಸತ್ಮವಿಶ್ವಾಸಿಗಳ ಈ ಸಮೂಹವು' ಈ ಲೋಕದಲ್ಲಿ
ದೇವ ಪ್ರಶಿನಿಧಿತ್ವದ ಕರ್ತವ್ಮ ನಿರ್ವಹಣೆಗಾಗಿ ತನ್ನನ್ನು 'ಹೇಗೆ ಅಣಿಗೊಳಿಸಿಕೊಳ್ಳಬೇಕು
ಕುರ್‌ಆನ್ ಅಧ್ಯಯನ ಮಾರ್ಗದರ್ಶಿ 21
ಎಂಬಿತ್ಕಾದಿಗಳೆನ್ನು ತೋರಿಸಿ ಕೊಡಲಾಯಿತು. ಈ ಉಪನ್ಮಾಸಗಳಲ್ಲಿ ಒಂದೆಡೆ
ಮುಸ್ಲಿಮರಿಗೆ ಶಿಕ್ಷಣ ಮತ್ತು ತರಬೇತಿಗಳನ್ನೂ ನೀಡಲಾಗುತ್ತಿತ್ತು. ಅವರ
ದೌರ್ಬಲ್ಯಗಳ ಬಗ್ಗೆ ಎಚ್ಚರಿಕೆ ಕೊಡಲಾಗಿತ್ತು. ಅವರನ್ನು ದೇವಮಾರ್ಗದಲ್ಲಿ
(ವ ಸೊತ್ತುಗಳ ಸಹಿತ ಜಿಹಾದ್(ಹೋರಾಟ)ಗೆ ಪ್ರೇರೇಪಿಸಲಾಗುತ್ತಿತ್ತು. ಅವರಿಗೆ
ಜಯಾಪಜಯ, ಕಷ್ಟ-ಸುಖ, ಬಡತನ-ಸಿರಿತನ, ಭಯ-ಶಾಂತಿ, ಹೀಗೆ ಪ್ರತಿಯೊಂದು
ಸಂದರ್ಭದಲ್ಲೂ ತಕ್ಕುದಾದ ನೈತಿಕ ತರಬೇತಿ ನೀಡಲಾಗುತ್ತಿತ್ತು ಮತ್ತು ಅವರನ್ನು
ಪ್ರವಾದಿವರ್ಯರ(ಸ) ಕಾಲಾನಂತರ ಅವರ ಉತ್ತರಾಧಿಕಾರಿಗಳಾಗಿ ಈ ಆಂದೋಲನ
ಹಾಗೂ ಸುಧಾರಣಾ ಕಾರ್ಯವನ್ನು ನೆರವೇರಿಸ ತಕ್ಕವರನ್ನಾಗಿ 'ರೂಪಿಸಲಾಗುತ್ತಿತ್ತು.
ಇನ್ನೊಂದು ಕಡೆಯಲ್ಲಿ ಸತ್ಯವಿಶ್ವಾಸದ ಮೇರೆಯಿಂದ ಹೊರಗುಳಿದವರಾಗಿದ್ದ
ಗ್ರಂಥದವರು, ಕಪಟವಿಶ್ವಾಸಿಗಳು, ಸತ್ಮನಿಷೇಧಿಗಳು, ಬಹುದೇವ ವಿಶ್ವಾಸಿಗಳೇ
ಮೊದಲಾದ ಸತ್ಮವಿಶ್ವಾಸದ ಮೇರೆಯಿಂದ ಹೊರಗಿರುವವರಿಗೆ ವಿವಿಧ
ಸ್ಥಿತಿಗಳಿಗನುಸಾರ ತಿಳಿ ಹೇಳಲು ವಿನಮ್ರತೆಯಿಂದ ಕರೆ ನೀಡಲು ಕಟುವಾಗಿ ಗದರಿಸಿ
ಉಪದೇಶಿಸಲು ಅಲ್ಲಾಹನ ಯಾತನೆಯ ಬಗ್ಗೆ ಎಚ್ಚರಿಸಲು ಪಾಠದಾಯಕ ಘಟನೆ
ಹಾಗೂ ವೃತ್ತಾಂತಗಳಿಂದ ಎಚ್ಚರಿಕೆ ನೀಡಲು ಪ್ರಯತ್ನಿಸುತ್ತ ಅವರ ವಿರುದ್ಧ
ಆಧಾರವನ್ನು ಬಲಗೊಳಿಸಲಾಗುತ್ತಿತ್ತು. ಇದು ಮದೀನಾದಲ್ಲಿ ಅವತೀರ್ಣಗೊಂಡ
ಪವಿತ್ರ ಕುರ್‌ಆನಿನ ಅಧ್ಯಾಯಗಳ ಹಿನ್ನೆಲೆ.
ಕುರ್‌ಆನ್ ಒಂದು ಸಂದೇಶದೊಂದಿಗೆ ಅವತೀರ್ಣಗೊಳ್ಳಲಾರಂಭಿಸಿದ್ದು, ಅದು
ತನ್ನ ಆರಂಭದಿಂದ ಪರಿಪೂರ್ಣತೆಯ ವರೆಗೆ ಯಾವ ಯಾವ ಹಂತಗಳನ್ನು ಹಾಗೂ
ಯಾವ .ಯಾವ ಘಟ್ಟಗಳನ್ನು ಹಾದು ಹೋಗುತ್ತಿತ್ತೋ ಅವುಗಳ ವೈವಿಧ್ಯಪೂರ್ಣ
ಅವಶ್ಮಕತೆಗಳಿಗನುಸಾರ ಅದರ ವಿವಿಧ ಭಾಗಗಳು ಅವತೀರ್ಣಗೊಳ್ಳುತ್ತ ಹೋಯಿತೆಂದು
ಮೇಲಿನ ವಿವರಣೆಯಿಂದ ತಿಳಿದು ಬರುತ್ತದೆ. ಇಂತಹ ಗ್ರಂಥದಲ್ಲಿ ಡಾಕ್ಟರೇಟ್
ಪಡೆಯಲಿಕ್ಕಾಗಿ ಬರೆಯಲಾಗುವ ಪ್ರಬಂಧ(Thesis)ದಂತಹ ರಚನಾಕ್ರಮವಿರಲು
ಸಾಧ್ಯವಿಲ್ಲ. ಈ ಆಂದೋಲನದ ವಿಕಾಸದೊಂದಿಗೆ ಅವತೀರ್ಣಗೊಂಡ ಕುರ್‌ಆನಿನ
ಚಿಕ್ಕ ಹಾಗೂ ದೊಡ್ಡ ಭಾಗಗಳನ್ನು ಪತ್ರಿಕೆಯ ರೂಪದಲ್ಲಿ ಪ್ರಕಟಿಸಲಾಗುತ್ತಿರಲಿಲ್ಲ.
!
/
22 ಕುರ್‌ಆನ್ ಅಧ್ಯಯನ ಮಾರ್ಗದರ್ಶಿ /
REELS ober,
ಅವು ಭಾಷಣಗಳೆ ರೂಪದಲ್ಲಿ ಹೇಳಲ್ಪಡುತ್ತಿ ದ್ಹುವು ಮತ್ತು ಅದೇ ರೂಪದಲ್ಲಿ !
ಪ್ರಸಾರಗೊಳಿಸಲ್ಪಡುತ್ತಿದ್ದುವು. ಆದುದರಿಂದ ಅವುಗಳ ವರ್ಣನಾ ಶೈಲಿಯೂ ಲಿಖಿತ
ರೂಪದ್ದಾಗಿರದೆ ಭಾಷಣ ರೂಪದ್ದಾಗಿತ್ತು. ಈ ಭಾಷಣವೂ ಒಬ್ಬ ಪ್ರಾಧ್ಯಾಪಕನ
ಭಾಷಣಗಳಂತಲ್ಲ. ಅವು ಓರ್ವ ಪ್ರಚಾರಕನ ಉಪನ್ಮಾಸಗಳಂತಿತ್ತು. ಅದು ಮನ,
ಮಸ್ತಿಷ್ಕ ಬುದ್ಧಿ, ಭಾವನೆಗಳೆಲ್ಲದರ ಮೇಲೂ ಪ್ರಭಾವ ಬೀರಬೇಕಾಗಿತ್ತು. ಅದು
ಎಲ್ಲ ವಿಧದ ಮನೋವೃತ್ತಿಗಳನ್ನೆದುರಿಸಬೇಕಾಗಿತ್ತು. ಅದು ತನ್ನ ಸಂದೇಶ ಪ್ರಚಾರ
ಮತ್ತು ಸಕ್ರಿಯ ಚಟುವಟಿಕೆಗಳಲ್ಲಿ ಅನೇಕ ವೈವಿಧ್ಯಪೂರ್ಣ ಅವಸ್ಥೆಗಳಲ್ಲಿ ಕಾರ್ಯವೆಸಗ
ಬೇಕಾಗಿತ್ತು. ಓರ್ವ ಪ್ರಚಾರಕ ಸಾಧ್ಯವಿರುವ ಎಲ್ಲ ವಿಧಾನಗಳಿಂದ ತನ್ನ ಮಾತನ್ನು
ಹೃದಯದೊಳಗೆ ನಾಟುವಂತೆ ಮಾಡುವುದು, ಭಾವನಾಲೋಕವನ್ನು ಬದಲಾಯಿಸುವುದು,
ಭಾವೋದ್ವೇಗಗಳ ಪ್ರವಾಹವನ್ನೆಬ್ಬಿಸುವುದು, ವಿರೋಧಿಗಳ ಬಲವನ್ನು ಮುರಿಯುವುದು,
ಸಂಗಾತಿಗಳನ್ನು ಸಂಸ್ಕರಿಸಿ ತರಬೇತಿಗೊಳಿಸುವುದು, ಅವರಲ್ಲಿ ಉತ್ಸಾಹ, ದೃಢಸಂಕಲ್ಪಗಳನ್ನು
ತುಂಬುವುದು, ಶತ್ರುಗಳ ವಾದಗಳನ್ನು ಖಂಡಿಸುವುದು ಮತ್ತು ಅವರ ನೈತಿಕ ಬಲವನ್ನು '
ಹತ್ತಿಕ್ಕುವುದು- ಹೀಗೆ ಒಂದು ಸಂದೇಶದ ಧ್ವಜವಾಹಕ ಮತ್ತು ಒಂದು ಅಂದೋಲನದ
ನಾಯಕನು ಇದನ್ನೆಲ್ಲ ಮಾಡಬೇಕಾಗುತ್ತದೆ. ಆದುದರಿಂದ ಅಲ್ಲಾಹನು ಈ ಕಾರ್ಯಕ್ಕೆ
ಸಂಬಂಧಿಸಿ ತನ್ನ ಪ್ರವಾದಿಯ ಮೇಲೆ ಅವತೀರ್ಣಗೊಳಿಸಿದ ಎಲ್ಲ ಭಾಷಣಗಳ
ಶೈಲಿಯು ಒಂದು ಸಂದೇಶಕ್ಕೆ ತಕ್ಕಂತೆಯೇ ಇದೆ. ಅವುಗಳಲ್ಲಿ ಕಾಲೇಜಿನ ಉಪನ್ಯಾಸಕರ
ಶೈಲಿಯನ್ನು ಹುಡುಕುವುದು ಸರಿಯಾಗಲಾರದು.
7 7 7
po ಈ ಳೇ
ಕುರ್‌ಅನಿನಲ್ಲಿ ವಿಷಯಗಳನ್ನು ಪದೇ ಪದೇ ಆವರ್ತಿಸಲು ಕಾರಣವೇನೆಂದೂ
ಇದರಿಂದಲೇ ಚೆನ್ನಾಗಿ ತಿಳಿಯುತ್ತದೆ. ಒಂದು ಸಂದೇಶ ಮತ್ತು ಸಕ್ರಿಯ ಆಂದೋಲನವು
ಒಂದು ಕಾಲದಲ್ಲಿ ಯಾವ ಹಂತದಲ್ಲಿರುತ್ತದೋ ಅದಕ್ಕೆ ಅನುರೂಪವಾಗಿರುವ "
ಮಾತನ್ನೇ ಹೇಳಬೇಕಾದುದು, ಅದು ಆ ಹಂತದಲ್ಲಿರುವ ತನಕ ಮಾತ್ರ. ಅನಂತರದ
ಹಂತಕ್ಕೆ ಸಂಬಂಧಿಸಿದ ಮಾತನ್ನು ಎತ್ತದಿರುವುದು ಮತ್ತು ಅದಕ್ಕೆ ತಿಂಗಳುಗಳು ಅಥವಾ
ವರ್ಷಗಳೇ ತಗಲಿದರೂ ಅದೇ ಹಂತಕ್ಕೆ ಸಂಬಂಧಿಸಿದ ಮಾತುಗಳನ್ನು
ಕುರ್‌ಆನ್ ಅಧ್ಯಯನ ಮಾರ್ಗದರ್ಶಿ 23
ಪುನರಾವರ್ತಿಸಬೇಕಾದುದು ಅದರ ಸ್ವಾಭಾವಿಕ ಬೇಡಿಕೆಯಾಗಿರುತ್ತದೆ. ಒಂದೇ ತರದ
ಮಾತುಗಳನ್ನು ಒಂದೇ ಶೈಲಿಯಲ್ಲಿ ಪುನರಾವರ್ತಿಸುತ್ತವಿದ್ದರೆ ಕೇಳುವ ಕಿವಿಗಳು
ಅದನ್ನೇ ಕೇಳಿ ಕೇಳಿ ಬೇಸತ್ತು ಹೋಗುತ್ತವೆ ಮತ್ತು ಮನಸ್ಸು ದಣಿಯುತ್ತದೆ.
ಆದುದರಿಂದ ಪ್ರತಿಯೊಂದು ಕಾಲಘಟ್ಟದಲ್ಲಿ ಪದೇ ಪದೇ ಹೇಳಬೇಕಾದ ಮಾತುಗಳು
ಮೆನಮೋಹಕವಾಗಿ ಹೃದಯದಾಳಕ್ಕೆ ಇಳಿಯುವಂತಾಗಲು ಹಾಗೂ ಆಂದೋಲನದ
ಎಲ್ಲ ಹಂತಗಳೊ ಬಲಗೊಳ್ಳುತ್ತ ಹೋಗಲು ಪ್ರತಿ ಬಾರಿಯೂ ಮಾತನ್ನು ಹೊಸ
ಶಬ್ದಗಳು, ಹೊಸ ರೀತಿ ಮತ್ತು ಹೊಸ ಶೈಲಿ ಯೊಂದಿಗೆ ಹೇಳಬೇಕಾಗುತ್ತದೆ.
ಮಾತ್ರವಲ್ಲ ಈ ಆಂದೋಲನದ ಬುನಾದಿಯು ಯಾವ ವಿಶ್ವಾಸ ಹಾಗೂ ಸಿದ್ಧಾಂತಗಳ
ಮೇಲಿರುವುದೋ ಅವುಗಳನ್ನು ಆದಿಯಿಂದ ಅಂತ್ಯದ ವರೆಗೂ ಯಾವ ಸಮಯದಲ್ಲೂ
ಯಾವ ಸ್ಥಿತಿಯಲ್ಲೂ ಕಣ್ಮರೆಯಾಗಲು ಬಿಡದೆ ಆಂದೋಲನದ ಪ್ರತಿಯೊಂದು
ಕಾಲಘಟ್ಟದಲ್ಲೂ ಪುನರಾವರ್ತಿಸಲ್ಪಡುತ್ತಿರ ಬೇಕು. ಇದೇ ಕಾರಣದಿಂದ ಇಸ್ಲಾಮೊ
ಆಂದೋಲನದ ಒಂದು ಕಾಲಘಟ್ಟದಲ್ಲಿ ಎಷ್ಟು ಅಧ್ಯಾಯಗಳು
ಅವತೀರ್ಣಗೊಂಡಿವೆಯೋ ಅವುಗಳಲ್ಲೆಲ್ಲಾ ಸರ್ವ ಸಾಮಾನ್ಯವಾಗಿ ಒಂದೇ ತರದ
ವಿಷಯಗಳೂ ಪದಗಳೂ ವಿವರಣಾ ಶೈಲಿಯೂ ವಿವಿಧ ರೂಪಗಳಲ್ಲಿ ಬಂದಿವೆ.
ಆದರೆ, ತೌಹೀದ್(ಏಕದೇವವಿಶ್ವಾಸ) ದೇವನ ಗುಣವಿಶೇಷಗಳು, ಪರಲೋಕ ವಿಶ್ವಾಸ
ಮತ್ತು ಅಂದು ನಡೆಯಲಿರುವ ವಿಚಾರಣೆ, ಪುರಸ್ಕಾರ, ہود ಪ್ರವಾದಿತ್ವ, ಗ್ರಂಥಗಳ
ಮೇಲಿನ ವಿಶ್ವಾಸ, ತಕ್ಟಾ(ಧರ್ಮನಿಷೆ), ಸಹನೆ, ಭರವಸೆ ಹಾಗೂ ಇದೇ ತರದ ಇತರ
ಮೂಲ ವಿಷಯಗಳ ಆವರ್ಕನವು ಇಡೀ ಕುರ್‌ಆನಿನಲ್ಲಿ ಕಂಡು ಬರುತ್ತದೆ. ಏಕೆಂದರೆ,
ಈ ಆಂದೋಲನದ ಯಾವ ಘಟ್ಟದಲ್ಲೂ ಅವುಗಳ ಬಗ್ಗೆ ಅಸಡ್ಡೆಯನ್ನು ಸಹಿಸಲಾಗದು.
ಈ ಮೂಲ ಕಲ್ಪನೆಗಳು ಕೊಂಚವಾದರೂ ಕ್ಟೀಣಿಸಿ ಬಿಡುತ್ತಿದ್ದರೆ, ಇಸ್ಲಾಮಿನ ಈ
ಆಂದೋಲನವು ತನ್ನ ನೈಜ ಸ್ಪೂರ್ತಿಯೊಂದಿಗೆ ಮುನ್ನಡೆಯುತ್ತಿರಲಿಲ್ಲ.
ಚೆನ್ನಾಗಿ ಗಮನಿಸಿದರೆ ಪ್ರವಾದಿವರ್ಯರು(ಸ) ಕುರ್‌ಆನನ್ನು ಅವತೀರ್ಣಗೊಂಡ
ಕ್ರಮಕ್ಕನುಸಾರವಾಗಿ ಏಕೆ ಕ್ರೋಢೀಕರಿಸಲಿಲ್ಲವೆಂಬ ಪ್ರಶ್ನೆಯೂ ಇದೇ ವಿವರಣೆಯಿಂದ
ಬಗೆಹರಿಯುತ್ತದೆ.
/
24 ಕುರ್‌ಆನ್ ಅಧ್ಯಯನ ಮಾರ್ಗದರ್ಶಿ
EEE csi
ಈ ಆಂದೋಲನದ ಆರಂಭವೂ ಅದರ ವಿಕಾಸವೂ ಯಾವ ಕ್ರಮಕ್ಕನುಸಾರೆ
ನಡೆಯಿತೋ ಅದೇ ಕ್ರಮಕ್ಕನುಸಾರ ಇಪ್ಪತ್ತಮೂರು ವರ್ಷಗಳ ವರೆಗೂ ಮುಂದು
ವರಿಯಿತೆಂಬುದು ಮೇಲಿನ ವಿವರಣೆಯಿಂದ ನಿಮಗೆ ತಿಳಿಯಿತು. ಆಂದೋಲನದ
ವಿಕಾಸೆಬೊಂದಿಗೆ ಮಾತ್ರ ಸಂಬಂಧವಿದ್ದ ಕ್ರಮಬದ್ದ ತೆಯನ್ನು ಅದು ಪೂರ್ಣಗೊಂಡ
ಬಳಿಕವೂ ಕ್ರೋಢೀಕರಣಕ್ಕಾಗಿ ಇರಿಸಿಕೊಳ್ಳುವುದು ಸೂಕ್ತವಾಗಿರಲಿಲ್ಲ. ಈಗ ಅದಕ್ಕೆ,
ಆಂದೋಲನವು ಪರಿಪೂರ್ಣತೆಗೆ ತಲಪಿದ ನಂತರದ ಪರಿಸ್ಥಿತಿಯೊಂದಿಗೆ ಹೆಚ್ಚು
ಹೊಂದಾಣಿಕೆಯಾಗತಕ್ಕ ಬೇರೆಯೇ ಒಂದು ಕ್ರಮಬದ್ಧತೆಯ ಅಗತ್ಮವಿತ್ತು. ಏಕೆಂದರೆ
ಪ್ರಾರಂಭದಲ್ಲಿ ಇದರ ಶ್ರೋತೈಗಳು ಇಸ್ಲಾಮಿನ ಬಗ್ಗೆ ಏನೂ ಪರಿಚಯವಿಲ್ಲದವ
ರಾಗಿದ್ದರು. ಆದುದರಿಂದ ಆಗ ಸಂಪೂರ್ಣವಾಗಿ ಆರಂಭ ಬಿಂದುವಿನಿಂದಲೇ ಶಿಕ್ಷಣ
ವನ್ನಾರಂಭಿಸಲಾಯಿತು. ಆದರೆ ಆಂದೋಲನವು ಪೂರ್ಣಗೊಂಡ ಬಳಿಕ ಅದರ
ಅಭಿಸಂಬೋಧಿತರು ಅದರ ಮೇಲೆ ವಿಶ್ವಾಸವಿಟ್ಟು ಒಂದು ಸಮುದಾಯವಾಗಿ
ಮಾರ್ಪಟ್ಟವರಾಗಿದ್ದರು. ಆಚಾರ-ವಿಚಾರಗಳೆರಡನ್ನೂ ಪೂರ್ಣಗೊಳಿಸಿ ಪ್ರವಾದಿ
ವರ್ಯರು(ಸ) ಅವರ ವಶಕ್ಕೆ ಬಿಟ್ಟು. ಕೊಟ್ಟಿದ್ದೆ ಕಾರ್ಯವನ್ನು ಮುಂದುವರಿಸುವ
'ಹೊಣೆಗಾರರೆನಿಸಿದ್ದರು. ಮೊದಲು ಇವರು ತಮ್ಮ ಕರ್ತವ್ಯಗಳನ್ನೂ ತಮ್ಮ ಜೀವನ
ಸಿದ್ಧಾಂತಗಳನ್ನೂ ಗತ ಪ್ರವಾದಿಗಳ ಸಮುದಾಯಗಳಲ್ಲಿ ತಲೆದೋರುತ್ತಿದ್ದ
ಅನಿಷ್ಟಗಳನ್ನೂ ಚೆನ್ನಾಗಿ ತಿಳಿದಿರಬೇಕಾಗಿತ್ತು. ಅನಂತರ ಇಸ್ಲಾಮಿನ ಪರಿಚಯವಿಲ್ಲದ '
ಜಗತ್ತಿನ ಮುಂದೆ ದೇವನ ಸನ್ಮಾರ್ಗವನ್ನಿಡಲು ಮುಂದಾಗಬೇಕಿತ್ತು.
ಅಷ್ಟೇ ಅಲ್ಲ, ಕುರ್‌ಆನ್ ಯಾವ ತರದ ಗ್ರಂಥವೆಂದು ಚೆನ್ನಾಗಿ ಅರ್ಥಮಾಡಿ
ಕೊಂಡರೆ ಇದು ಒಂದೇ ತರದ ವಿಷಯಗಳನ್ನು ಒಂದೇ ಸ್ಥಳದಲ್ಲಿ ಒಟ್ಟುಗೂಡಿಸುವ
ಸ್ವಭಾವವನ್ನೇ ಇರಿಸಿಕೊಂಡಿಲ್ಲ ವೆಂದು ಮನವರಿಕೆಯಾಗುವುದು. ಇಸ್ಲಾಮಿನ ಸೆಂಪೂರ್ಣ
ದೃಶ್ಯ ಮತ್ತು ಸಮಗ್ರ ಚಿತ್ರವು ಕಣ್ಣ ಮುಂದಿರಲಿಕ್ಕಾಗಿ ಹಾಗೂ ಅದು ಯಾವ
ಕಾಲದಲ್ಲೂ "ಏಕಿಮುಪವಾಗದಿರಲಿಕ್ಕಾಗ ಅದನ್ನು ಓದುವವರ ಮುಂದೆ, ಮದೀನಾ
ವಾಸದ ಕಾಲಘಟ್ಟದ ವಿಷಯಗಳು ಮಕ್ಕಾ ವಾಸದ ಕಾಲಘಟ್ಟದ ಶಿಕ್ಷಣದ
ನಡುವೆಯೂ ಮಕ್ಕಾ. ವಾಸ ಕಾಲದ ವಿಷಯಗಳು ಮದೀನಾ ವಾಸ ಕಾಲದ
ಉಪನ್ಮಾಸದ ನಡುವೆಯೂ, ಆರಂಭದ ಮಾತುಕತೆಯು ಕೊನೆಯ ಕಾಲದ '
ಉಪದೇಶಗಳ ನಡುವೆಯೂ ಕೊನೆಯ ಕಾಲದ ಮಾರ್ಗದರ್ಶನಗಳು ಆರಂಭದ
ಬೋಧನೆಗಳ ಪಕ್ಕದಲ್ಲೂ ಆಗಾಗ ಬರುತ್ತಿರುವುದೇ ಇದರ ಸಹಜ ಲಕ್ಷಣವಾಗಿರುತ್ತದೆ.
ಕುರ್‌ಆನ್ ಅಧ್ಯಯನ ಮಾರ್ಗದರ್ಶಿ 25
ಕುರ್‌ಆನನ್ನು ಅದು ಅವತೀರ್ಣಗೊಂಡಿದ್ದ ಕ್ರಮದಲ್ಲೇ ಕ್ರೋಢೀಕರಿಸಿ
ದ್ದರೆ ಮತ್ತು ಅಂತಹ ಕ್ರೋಢೀಕರಣದ ನಂತರ ಅದು ಫಲಕಾರಿಯಾಗ
ಬೇಕಾಗಿದ್ದರೆ ಕುರ್‌ಆನಿನೊಂದಿಗೆ ಅದರ ಸಂಪೂರ್ಣ ಅವತೀರ್ಣದ ಮಹತ್ವ, ಅದರ
ಒಂದೊಂದು ಭಾಗವು ಅವತೀರ್ಣಗೊಳ್ಳುತ್ತಿದ್ದಾಗಿನ ಪರಿಸ್ಥಿ, ತಿ ಮತ್ತು ಅದರ
ಮಹತ್ವಗಳನ್ನೂ ಬರೆದು ಸೇರಿಸಬೇಕಾಗುತ್ತಿತ್ತು. ಇದು ಅನಿವಾರ್ಯವಾಗಿ ಕುರ್‌ಆನಿನ
ಒಂದು ಉಪಸಂಹಾರವಾಗುತ್ತಿತ್ತು. ಆದರೆ ಯಾವ ಉದ್ದೇಶಕ್ಕಾಗಿ ಅಲ್ಲಾಹನು ತನ್ನ
ವಾಣಿಯ ಈ ಸಂಗ್ರಹವನ್ನು ಕ್ರೋಢೀಕರಿಸಿ ಸುರಕ್ಸಿತಗೊಳಿಸಿದ್ದನೋ .ಅದಕ್ಕೆ ಇದು'
ವೃತಿರಿಕ್ತವಾಗುತ್ತಿತ್ತು. ಅಲ್ಲಿ ಇದರ ಉದ್ದೇಶವು ಯಾವುದೇ ಇತರ ವಾಣಿಗಳ
ಕಲಬೆರಕೆ ಅಥವಾ ಸೇರ್ಪಡೆ ಇಲ್ಲದೆ ಶುದ್ಧ ದೇವವಾಣಿಯು ತನ್ನ ಸಂಕ್ಷಿಪ್ತ
ರೂಪದಲ್ಲಿ ಕ್ರೋಢೀಕೃತವಾಗಿರಬೇಕು. ಅದನ್ನು ಮಕ್ಕಳು ಯುವಕರು, ಮುದುಕರು,
ಸ್ತ್ರೀಯರು, ಪುರುಷರು, ನಗರವಾಸಿಗಳು, ಹಳ್ಳಿಗರು ಸಾಮಾನ್ಯ ಜನರು, ವಿದ್ಯಾವಂತರೇ
ಮೊದಲಾದ ಎಲ್ಲರೂ ಓದಬೇಕು ಮತ್ತು ಎಲ್ಲ ಕಾಲಗಳಲ್ಲೂ ಎಲ್ಲಾ ಸ್ಥಳಗಳಲ್ಲೂ
ಎಲ್ಲಾ ಪರಿಸ್ಥಿತಿಗಳಲ್ಲಿಯೂ ಓದಬೇಕು ಮತ್ತು ಅದನ್ನು ಓದುತ್ತಿರುವಾಗ ಪ್ರತಿಯೊಂದು
ಸಲವೂ ಪ್ರತಿಯೊಬ್ಬ ಬುದ್ಧಿಜೀವಿಯೂ ತನ್ನ ದೇವನು ಯಾವುದನ್ನು ಇಷ್ಟಪಡುತ್ತಾನೆ
ಮತ್ತು ಯಾವುದನ್ನು ಇಷ್ಟಪಡುವುದಿಲ್ಲ ಎಂಬುದನ್ನು ಚೆನ್ನಾಗಿ ತಿಳಿದು
ಕೊಳ್ಳಬೇಕೆಂದಾಗಿತ್ತು. ದೇವವಾಣಿಯ ಈ ಸಂಗ್ರಹದೊಂದಿಗೆ ಒಂದು ಸುದೀರ್ಪು
ಇತಿಹಾಸವೂ ಸೇರಿಕೊಂಡಿದ್ದು ಅದರ ಪಠನವೂ ಕಡ್ಡಾಯವಾಗಿ ಬಿಡುತ್ತಿದ್ದರೆ ಈ
ಉದ್ದೇಶವೇ ಸೋರಿ ಹೋಗುತ್ತಿತ್ತು.
ವಾಸ್ತವದಲ್ಲಿ ಕುರ್‌ಆನಿನ ಪ್ರಸಕ್ತ ಕ್ರಮದ ಬಗ್ಗೆ ಆಕ್ಷೇಪವೆತ್ತುವವರು ಈ
ಗ್ರಂಥದ ಉದ್ದೇಶವನ್ನೇ ತಿಳಿದಿಲ್ಲ. ಮಾತ್ರವಲ್ಲ ಅವರು ಈ ಗ್ರಂಥವು ಇತಿಹಾಸ,
ಸಾಮಾನ್ಯ ಜ್ಞಾನ, ಸಮಾಜಶಾಸ್ತ್ರದ ವಿದ್ಯಾರ್ಥಿಗಳಿಗಾಗಿ ಮಾತ್ರ ಅವತೀರ್ಣ
ಗೊಂಡಿದೆ ಎಂಬ ತಪ್ಪು ಅಭಿಪ್ರಾಯ ಹೊಂದಿದಂತೆ ತೋರುತ್ತದೆ.
7 7
ಳೊ ಈ ಳೇ
ಕುರ್‌ಆನಿನ ಕ್ರಮಬದ್ಧತೆಯ ಬಗ್ಗೆ ಓದುಗರು ಅರಿತಿರಬೇಕಾದ ಇನ್ನೊಂದು
ವಿಷಯವೇನೆಂದರೆ ಈ ಕ್ರಮಬದ್ಧತೆಯನ್ನು ಅನಂತರ ಬಂದವರು ಕೊಟ್ಟದ್ದಲ್ಲ.
26 ಕುರ್‌ಆನ್ ಅಧ್ಯಯನ ಮಾರ್ಗದರ್ಶಿ
Fok EEL La
ಬದಲಾಗಿ ಅಲ್ಲಾಹನ ಮಾರ್ಗದರ್ಶನದ ಪ್ರಕಾರ ಸ್ವಯಂ ಪ್ರವಾದಿವರ್ಯರೇ(ಸ)
ಕುರ್‌ಆನನ್ನು ಈ ರೀತಿಯಲ್ಲಿ ಕ್ರೋಡೀಕರಿಸಿದ್ದಾರೆ. ಅವರು ಯಾವುದಾದರೊಂದು
ಅಧ್ಯಾಯವು ಅವತೀರ್ಣಗೊಂಡಾಗಲೇ ತಮ್ಮ ಬರಹಗಾರರ ಪೈಕಿ ಒಬ್ಬರನ್ನು ಕರೆದು
ಅದನ್ನು ಸರಿಯಾಗಿ ಬರೆಸಿದ ಬಳಿಕ ಈ ಅಧ್ಯಾಯವನ್ನು ಇಂತಹ ಅಧ್ಯಾಯದ ನಂತರ
ಮತ್ತು ಇಂತಹ ಅಧ್ಯಾಯಕ್ಕಿಂತ ಮೊದಲು ಇರಿಸಿಕೊಳ್ಳಬೇಕೆಂದು ನಿರ್ದೇಶಿಸುತ್ತಿದ್ದರು.
ಇದೇ ರೀತಿಯಲ್ಲಿ ಸಂಪೂರ್ಣ ಅಧ್ಯಾಯವನ್ನಾಗಿ ಮಾಡಲುದ್ದೇಶಿಸಿರದಂತಹ ಕುರ್‌ಆನಿನ
ಭಾಗವೊಂದು ಅವತೀರ್ಣಗೊಂಡಾಗ ಅದನ್ನು ಇಂತಹ ಅಧ್ಯಾಯದಲ್ಲಿ ಇಂತಹ
ಸ್ಥಾನದಲ್ಲಿ ಬರೆಯಬೇಕೆಂದು ಹೇಳುತ್ತಿದ್ದರು. ಇದೇ ಕ್ರಮಕ್ಕನುಸಾರ ನಮಾಯಿನಲ್ಲೂ
ಇತರ ಸಂದರ್ಭಗಳಲ್ಲೂ ಸ್ವತಃ ಪಠಿಸುತ್ತಿದ್ದರು ಮತ್ತು ಇದೇ ಕ್ರಮದನ್ವಯ
ಸಹಾಬಿಗಳೂ(ರ) ಅದನ್ನು ಕಂಠಪಾಠ ಮಾಡಿಕೊಳ್ಳುತ್ತಿದ್ದರು. ಆದುದರಿಂದ ಕುರ್‌ಆನಿನ
ಅವತರಣವು ಯಾವ ದಿನ ಪೂರ್ಣಗೊಂಡಿತೋ ಅದೇ ದಿನ ಅದರ ಕ್ರೋಡೀಕರಣವೂ
ಸಂಪೂರ್ಣಗೊಂಡಿತೆಂಬುದು ಐತಿಹಾಸಿಕ ಸತ್ಯ, ಇದನ್ನು ಕ್ರೋಡೀಕರಿಸಿದವನು ಇದನ್ನು
ಅವತೀರ್ಣಗೊಳಿಸಿದವನೇ ಆಗಿದ್ದಾನೆ. ಯಾರ ಹೃದಯಕ್ಕೆ ಇದನ್ನು ಇಳಿಸಲಾಯಿತೋ
ಅವರಿಂದಲೇ ಇದನ್ನು ಕ್ರೋಡೀಕರಿಸಲಾಯಿತು. ಇದರಲ್ಲಿ ಹಸ್ತಕ್ಟೇಪ ನಡೆಸಲು
ಯಾರಿಗೂ ಸಾಧ್ಯವಿರಲಿಲ್ಲ.
ನಮಾರು್ ಪ್ರಾರಂಭದಿಂದಲೇ ಮುಸ್ಲಿಮರ ಮೇಲೆ ಕಡ್ಡಾಯವಾಗಿತ್ತು. *
ಕುರ್‌ಆನ್ ಪಠನವು ನಮಾಯಿನ ಒಂದು ಅನಿವಾರ್ಯ ಭಾಗವಾಗಿತ್ತು. ಆದುದರಿಂದ
ಕುರ್‌ಆನಿನ ಅವತರಣದೊಂದಿಗೇ ಮುಸ್ಲಿಮರಲ್ಲಿ ಕುರ್‌ಆನನ್ನು ಕಂಠಪಾಠ ಮಾಡಿ
ಕೊಳ್ಳುವ ರೂಢಿ ಜಾರಿಗೆ ಬಂತು. ಕುರ್‌ಆನ್ ಅವತೀರ್ಣಗೊಳ್ಳುತ್ತಿದ್ದಂತೆ ಮುಸ್ಲಿಮರು
ಅದನ್ನು ಕಂಠಪಾಠ ಮಾಡುತ್ತ ಹೋದರು. ಹೀಗೆ ಕುರ್‌ಆನಿನ ರಕ್ಸಣೆಯು
ಪ್ರವಾದಿವರ್ಯರು(ಸ) ತಮ್ಮ ಬರಹಗಾರರ ಮೂಲಕ ಬರೆಸುತ್ತಿದ್ದ ಖರ್ಜೂರದ
ಹಾಳೆಗಳು, ಎಲುಬು ಮತ್ತು ತೊಗಲುಗಳೆ ತುಂಡುಗಳನ್ನು ಮಾತ್ರ ಅವಲಂಬಿಸಿರಲಿಲ್ಲ.
ಅದು ಅವತೀರ್ಣಗೊಂಡ ಕೂಡಲೇ ಅದು ಹತ್ತೋ, ,ماما ಸಾವಿರಾರು-
ಸದು ಹ್ರೊನ ನಮಾರ್ ಪ್ರವಾದಿತ್ಯದ ಅನೇಕ ವರ್ಷಗಳ ನಂತರವಷ್ಟೇ ಕದ್ದಾಯವಾರುತು.
ವಸ್ತುತಃ ನಮಾರು್ ಆರಂಭದಿಂದಲೇ ಕಡ್ಡಾಯವಾಗಿತ್ತು. ಅದು ಕಡ್ಡಾಯವಾಗಿರದಂತಹ ಯಾವ
ಕಾಲವೂ ಇಸ್ಲಾಮಿನಲ್ಲಿ ಕಳೆದಿಲ್ಲವೆಂಬುದನ್ನು ಅರಿತಿರಬೇಕು.
ಕುರ್‌ಆನ್ ಅಧ್ಯಯನ ಮಾರ್ಗದರ್ಶಿ 27
ಲಕ್ಷಗಟ್ಟಲೆ ಹೃದಯಗಳಲ್ಲಿ ಅಚ್ಚೊತ್ತಲ್ಪಡುತ್ತಿತ್ತು. ಇದರಲ್ಲಿ ಒಂದು ಶಬ್ದವನ್ನಾದರೂ
ಅದಲು ಬದಲು ಮಾಡಲು ಯಾವ ಶೈತಾನನಿಂದಲೂ ಸಾಧ್ಯವಿರಲಿಲ್ಲ.
ಪ್ರವಾದಿವರ್ಯರ(ಸ) ನಿಧನಾನಂತರ ಅರೇಬಿಯಾದಲ್ಲಿ ಧರ್ಮಧಿಕ್ಕಾರದ
ಬಿರುಗಾಳಿಯೆದ್ದಾಗ ಅದನ್ನು ಅಣಗಿಸಲಿಕ್ಕಾಗಿ ಸಹಾಬಿಗಳಿಗ(ರ) ಘೋರ ಸಂಗ್ರಾಮಗಳನ್ನು
ನಡೆಸಬೇಕಾಗಿ ಬಂತು. ಈ ಕಾದಾಟದಲ್ಲಿ ಕುರ್‌ಆನ್ ಸಂಪೂರ್ಣ ಕಂಠಪಾಠ ಮಾಡಿದ್ದ
ಸಹಾಬಿಗಳು ಅಧಿಕ ಸಂಖ್ಯೆಯಲ್ಲಿ ಹುತಾತ್ಮರಾದರು. ಆಗ ಕುರ್‌ಆನಿನ ರಕ್ಷಣೆಗೆ
ಕೇವಲ ಒಂದೇ ಕ್ರಮವನ್ನಿಟ್ಟು ಅದನ್ನು ನಂಬಿ ಬಿಟ್ಟರೆ ಸಾಲದೆಂದೂ ಕಂಠಪಾಠದ
ಜೊತೆಗೆ ಬರೆದಿಡುವ ಮೂಲಕವೂ ಅದನ್ನು ಭದ್ರಗೊಳಿಸಿಡದುವ ಏರ್ಪಾಡು
ಮಾಡಬೇಕೆಂದೂ ಹ. ಉಮರ್‌ರಿಗೆ(ರು) ತೋಚಿತು. ಆ ಪ್ರಕಾರ ಅವರು ಈ
ಕಾರ್ಯದ ಅವಶ್ಯಕತೆಯನ್ನು ಹ.ಅಬೂಬಕರ್‌ರಿಗ(ರು ಮನವರಿಕೆ ಮಾಡಿದರು.
ಅವರು ಮೊದಲು ಸ್ವಲ್ಪ ಹಿಂಜರಿದರಾದರೂ ಅನಂತರ ಒಪ್ಪಿದರು. ಪ್ರವಾದಿವರ್ಯರ(ಸ)
ಬರಹಗಾರರಾಗಿದ್ದ سج نہ ಬಿನ್ ಸಾಬಿತ್ ಅನ್ಸಾರಿಯವರನ್ನು(ರೆ) ಈ ಕಾರ್ಯಕ್ಕಾಗಿ
ನೇಮಿಸಿದರು. ಪ್ರವಾದಿವರ್ಯರು ಬಿಟ್ಟು ಹೋಗಿದ್ದ ಲಿಖಿತ ರೂಪದಲ್ಲಿದ್ದ ಎಲ್ಲಾ
ಭಾಗಗಳನ್ನೂ ಒಟ್ಟುಗೂಡಿಸುವ ಕೆಲಸ ಒಂದು ಕಡೆ ನಡೆದರೆ, ಇನ್ನೊಂದೆಡೆ
ಸೆಹಾಬಿಗಳ ಪೈಕಿ ಯಾರ ಬಳಿಯಲ್ಲೆಲ್ಲಾ ಕುರ್‌ಆನ್ ಅಥವಾ ಅದರ ಯಾವುದಾದರೂ
ಭಾಗವಿದೆಯೋ ಅವುಗಳನ್ನೆಲ್ಲ ಸಂಗ್ರಹಿಸುವ ಕಾರ್ಯ ನಡೆಯಿತು.* ಆ ಬಳಿಕ
ಹಾಫಿರು್(ಕುರ್‌ಆನ್ ಕಂಠಪಾಠವಿದ್ದವರು)ಗಳಿಂದಲೂ ಸಹಾಯ ಪಡೆಯಲಾಯಿತು.
ಈ ಮೂರು ಮೂಲಗಳ ಸಂಯುಕ್ತ ಸಾಕ್ಟ್ಯಗಳೆ ಮೇಲೆ ಸಂಪೂರ್ಣ ಸಂತೃಪ್ತಿಯುಂಟಾದ
ಬಳಿಕ ಕುರ್‌ಆನಿನ ಒಂದೊಂದು ಶಬ್ದವನ್ನು ಲಿಖಿತ ರೂಪಕ್ಕೆ ತರಬೇಕು ಎಂಬ
ತೀರ್ಮಾನ ಕೈಗೊಳ್ಳಲಾಯಿತು. ಈ ನಿರ್ಧಾರದ ಪ್ರಕಾರ ಪವಿತ್ರ ಕುರ್‌ಆನಿನ ಒಂದು
*ಪ್ರವಾದಿವರ್ಯರು(ಸ) ಬದುಕಿದ್ದ ಕಾಲದಲ್ಲೇ ಅನೇಕ ಮಂದಿ ಸಹಾಬಿಗಳು ಕುರ್‌ಆನನ್ನು
ಅಥವಾ ಅದರ ವಿವಿಧ ಭಾಗಗಳನ್ನು ಬರೆದು ತಮ್ಮ ಬಳಿ ಇಟ್ಟು ಕೊಂಡಿದ್ದರೆಂದು ಪ್ರಾಮಾಣಿಕ
ವರದಿಗಳಿಂದ ತಿಳಿದು ಬರುತ್ತದೆ. ಈ ನಿಟ್ಟಿನಲ್ಲಿ ಹರ್ರ್ರುತ್ ಉಸ್ಮಾನ್, ಅಲೀ, ಅಬ್ದುಲ್ಲಾ ಬಿನ್
'ಮಸ್‌ವೂದ್, ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್, ಸಾಲಿಮ್ ಮವೂನೀ, ಹುದೈಫಾ, ರುದ್
ಬಿನ್ ಸಾಬಿತ್, ಮುಆದ್ ಬಿನ್ ಜಬಲ್, ಉಬೈೆ ಬಿನ್ ಕಅಬ್ ಮತ್ತು ಅಬೂರದ್ ಖೈಸ್
ಬಿನ್ ಅಸ್ಸಕನ್‌ರ(ರ) ಹೆಸರುಗಳು ಕಂಡು ಬರುತ್ತವೆ.
28 ಕುರ್‌ಆನ್ ಅಧ್ಯಯನ ಮಾರ್ಗದರ್ಶಿ
ನ ರ್ಣ
ಅಧಿಕೃತ ಪ್ರತಿಯನ್ನು ತಯಾರಿಸಿ ಉಮ್ಮುಲ್ ಮೂಮಿನೀನ್ ಹ.ಹಪ್ಸಾರ(ರ)
ಬಳಿಯಲ್ಲಿರಿಸಲಾಯಿತು. ಬೇಕಾದವರು ಅದರ ನಕಲನ್ನು ಪಡೆದುಕೊಳ್ಳಲು ಅಥವಾ
ಅದರೊಂದಿಗೆ ಹೋಲಿಸಿ ತಮ್ಮಲ್ಲಿರುವ ಪ್ರತಿಯನ್ನು ಸರಿಪಡಿಸಿಕೊಳ್ಳಲು ಜನರಿಗೆ
ಸಾರ್ವತ್ರಿಕ ಅನುಮತಿ ನೀಡಲಾಯಿತು.
ನಮ್ಮ ದೇಶದ ಬೇರೆ ಬೇರೆ ಪ್ರದೇಶಗಳಲ್ಲಾಡುವ ಒಂದೇ ಭಾಷೆಯಲ್ಲೂ
ವೃತ್ಯಾಸಗಳಿರುವಂತೆಯೇ ಅರೇಬಿಯಾದಲ್ಲಿಯೂ ವಿವಿಧ ಪ್ರದೇಶಗಳಲ್ಲಿ ನಾನಾ
ಗೋತ್ರಗಳು ಆಡುವ ಅರಬೀ ಭಾಷೆಯಲ್ಲೂ ವ್ಯತ್ಕಾಸ ಕಂಡು ಬರುತ್ತಿತ್ತು.
ಮಕ್ಕಾದಲ್ಲಿ ಕುರೈಶ್ ಗೋತ್ರದವರಾಡುತ್ತಿದ್ದ ಭಾಷೆಯಲ್ಲೇ ಕುರ್‌ಆನ್
ಅವತೀರ್ಣಗೊಂಡಿತ್ತು. ಆದರೆ ಆರಂಭದಲ್ಲಿ ಇತರ ಪ್ರದೇಶ ಹಾಗೂ ಗೋತ್ರದವರು
ತಂತಮ್ಮ ವಾಡಿಕೆಯ ಉಚ್ಚಾರ ಮತ್ತು ಶೈಲಿಯಂತೆ ಅದನ್ನು ಓದಿಕೊಳ್ಳಬಹುದೆಂಬ
ಅನುಮತಿ ನೀಡಲಾಗಿತ್ತು. ಇದರಿಂದ ಅರ್ಥದಲ್ಲೇನೂ ವೃತ್ಕಾಸ ಉಂಟಾಗುತ್ತಿರಲಿಲ್ಲ.
ವಾಕ್ಕ ಮಾತ್ರ ಅವರ ಮಟ್ಟಿಗೆ ಸರಳವಾಗುತ್ತಿತ್ತು. ಆದರೆ ಕ್ರಮೇಣ ಇಸ್ಲಾಮ್
ದೂರ ದೂರಕ್ಕೆ ಹಬ್ಬಿತು. ಅರಬರು ತಮ್ಮ ಮರುಭೂಮಿಯಿಂದ ಹೊರಟು
ಭೂಗೋಲದ ಬಹುದೊಡ್ಡ ಭಾಗವನ್ನು ಜಯಿಸಿಕೊಂಡರು. ಇತರ ಜನಾಂಗದವರೂ
ಇಸ್ಲಾಮಿನ ಪರಿಧಿಯೊಳಗೆ ಬರತೊಡಗಿದ್ದರು. ಇದರಿಂದ ಅರಬರ ಮತ್ತು
ಅರಬೇತರರ ಸಮ್ಮಿಶ್ರಣವು ಅರಬೀ ಭಾಷೆಯ ಮೇಲೆ ಪ್ರಭಾವ ಬೀರ ತೊಡಗಿದಾಗ,
ಮುಂದೆಯೂ ಇತರ ಆಡು ಭಾಷೆಗಳ ಪ್ರಕಾರ ಕುರ್‌ಆನನ್ನು ಓದಲು ಬಿಟ್ಟರೆ
ಅದರಿಂದ ತರತರದ ಪಿತೊರಿಗಳೂ ಗಂಡಾಂತರಗಳೊ ಉಂಟಾಗಬಹುದೆಂಬ ಆಶಂಕೆ
ಯುಂಟಾಯಿತು. ಉದಾ: ದೇವವಾಣಿಯನ್ನು ಒಬ್ಬನು ತನಗೆ ತಿಳಿದ ರೀತಿಯಲ್ಲಿ
ಓದುತ್ತಿರುವುದನ್ನು ಇನ್ನೊಬ್ಬನು ಕೇಳಿದಾಗ, ಅವನು ದೇವವಾಣಿಯನ್ನು ಉದ್ದೇಶ
ಪೂರ್ವಕವಾಗಿ ವಿರೂಪಗೊಳಿಸುತ್ತಿದ್ದಾನೆಂದು ಜಗಳಾಡುವನು ಅಥವಾ ಶಬ್ದಗಳ
ಮಟ್ಟಿಗೆ ಮಾತ್ರ ಸೀಮಿತವಾಗಿರುವ ವ್ಯತ್ಯಾಸವು ಕ್ರಮೇಣ ಪರಿವರ್ತನೆಯ ದ್ವಾರವನ್ನೇ
ತೆರೆದು ಬಿಡಲೂಬಹುದು ಅಥವಾ ಅರಬೀ ಮತ್ತು ಅರಬೇತರ ಬೆರಕೆಯಿಂದ
ಭಾಷೆಯನ್ನು ಕೆಡಿಸಿಕೊಂಡವರು ಕುರ್‌ಆನಿನಲ್ಲಿ ತಮ್ಮ ಆಡು ಭಾಷೆಯಂತೆ
ಹಸ್ತಕ್ಷೇಪ ನಡೆಸಿ ಅದರ ಸೌಂದರ್ಯವನ್ನು ಕೆಡಿಸಿಬಿಡುವರು. ಈ ಎಲ್ಲ
ಕಾರಣಗಳಿಂದ ಹ.ಉಸ್ಮಾನ್‌ರು(ರ) ಸಹಾಬಿಗಳೊಂದಿಗೆ ವಿಚಾರ ವಿನಿಮಯ ಮಾಡಿ
ಕುರ್‌ಆನ್ ಅಧ್ಯಯನ ಮಾರ್ಗದರ್ಶಿ - 29
kes dine ہدےسھ
ಇಸ್ಲಾಮೊ ಸಾಮ್ರಾಜ್ಯದಾದ್ಯಂತ ಹೆ. ಅಬೂಬಕರ್‌ರ(ರ) ಕಾಲದಲ್ಲಿ ಲಿಖಿತಗೊಂಡಿರುವ
ಮೂಲ ಗುಣಮಟ್ಟದ ಕುರ್‌ಆನಿನ ಪ್ರತಿಯ ನಕಲುಗಳನ್ನು ಪ್ರಕಟಿಸಬೇಕೆಂದೂ
ಇತರ ಆಡು ಭಾಷೆಗಳಲ್ಲಿ ಬರೆಯಲ್ಪಟ್ಟಿರುವ ಕುರ್‌ಆನ್ ಗ್ರಂಥದ ಪ್ರತಿಗಳನ್ನು
ರದ್ದು ಗೊಳಿಸಬೇಕೆಂದೂ ತೀರ್ಮಾನ ಮಾಡಿದರು.
ಇಂದು ನಮ್ಮ ಕೈಯಲ್ಲಿರುವ ಕುರ್‌ಆನ್ ಗ್ರಂಥವು ಹ. ಅಬೂಬಕರ್
ಸಿದ್ದೀಕ್‌ರ(ರ) ಕಾಲದಲ್ಲಿ ಲಿಖಿತ ಗೊಳಿಸಲ್ಪಟ್ಟು ಹ. ಉಸ್ಮಾನ್‌ರ(ರ) ಅಧಿಕೃತ
ಮೇಲ್ನೋಟದಲ್ಲಿ ಎಲ್ಲ ಪ್ರಾಂತ್ಯಗಳಿಗೆ ಕಳುಹಿಸಲಾಗಿದ್ದ ಗ್ರಂಥದ ಪ್ರತಿಯಾಗಿದೆ.
ಜಗತ್ತಿನ ಅನೇಕ ಕಡೆಗಳಲ್ಲಿ ಕುರ್‌ಆನಿನ ಆ ಅಧಿಕೃತ ಪ್ರತಿಗಳು ಈಗಲೂ ಇವೆ.
ಕುರ್‌ಆನಿನ ಸೆಂರಕ್ಸಣೆಯ ಬಗ್ಗೆ ಯಾರಿಗಾದರೂ ಕಿಂಚಿತ್ತಾದರೂ ಸಂಶಯವಿದ್ದರೆ,
ಅಂತಹವನು ಪಶ್ಚಿಮ ಆಪ್ರಿಕಾದ ಒಬ್ಬ ಪುಸ್ತಕ ಮಾರಾಟಗಾರನಿಂದ ಕುರ್‌ಆನಿನ
ಒಂದು ಪ್ರತಿಯನ್ನು ಖರೀದಿಸಿ, ಜಾವಾದ ಒಬ್ಬ ಹಾಫಿರುಖ್(ಕುರ್‌ಆನನ್ನು ಕಂಠಪಾಠ
ಮಾಡಿಕೊಂಡವುನಿಂದ ಬಾಯ್ದೆರೆ ಹೇಳಿಸಿ ಇವೆರಡನ್ನೂ ಹೋಲಿಸಿ ನೋಡಬಹುದು.
ಅನಂತರ ಜಗತ್ತಿನ ದೊಡ್ಡ ದೊಡ್ಡ ಪುಸ್ತಕ ಭಂಡಾರಗಳಲ್ಲಿರುವ ಹ.ಉಸ್ಮಾನ್‌ರ(ರ)
ಕಾಲದಿಂದ ಇಂದಿನ ತನಕ ಬೇರೆ ಬೇರೆ ಶತಮಾನಗಳಲ್ಲಿ ಬರೆದಿರುವ ಗ್ರಂಥ
ಗಳೊಂದಿಗೂ ಹೋಲಿಸಿ ನೋಡಬಹುದು. ಒಂದು ವೇಳೆ ಒಂದಕ್ಷೆರದ ವ್ಯತ್ಕಾಸ
ವಾದರೂ ಕಂಡು ಬಂದರೆ ಆತ ಈ ಮಹಾ ಐಪಿಹಾಸಿಕ ಸಂಶೋಧನೆಯನ್ನು ಜಗತ್ತಿ
ನಾದ್ಯಂತ ಅಗತ್ಯವಾಗಿ ಪ್ರಚಾರಪಡಿಸಬೇಕು. ಸಂಶಯ ಸ್ವಭಾವಿಗಳು ಕುರ್‌ಆನ್
ಅಲ್ಲಾಹನಿಂದೆ ಅವತೀರ್ಣಗೊಂಡಿದ್ದೆಂಬ ಬಗ್ಗೆ ಸಂಶಯ ತಾಳುವುದಿದ್ದರೆ ತಾಳಲಿ.
ಆದರೆ ಈಗ ನಮ್ಮ ಕೈಯಲ್ಲಿರುವ ಕುರ್‌ಆನ್ ಹ.ಮುಹಮ್ಮದ್‌ರು(ಸ) ಜಗತ್ತಿನ
ಮುಂದಿರಿಸಿದ, ಕಿಂಚಿತ್ತೂ ಹೆಚ್ಚು ಕಡಿಮೆ ಮಾಡದ ಅದೇ ಕುರ್‌ಆನ್ ಆಗಿದೆ
ಎಂಬುದು ಒಂದು ಐತಿಹಾಸಿಕ ಸತ್ಯವಾಗಿದ್ದು ಇದರಲ್ಲಿ ಸಂದೇಹಕ್ಕೆ ಆಸ್ಪದವೇ
ಇಲ್ಲ. ಇಷ್ಟೊಂದು ನಿಖರವಾದ ಆಧಾರ ಪ್ರಮಾಣಗಳಿರುವಂತಹ ಇನ್ನೊಂದು
ವಸ್ತು ಮಾನವ ಇತಿಹಾಸದಲ್ಲಿಲ್ಲ. ಇದರಲ್ಲೂ ಸಂಶಯ ತಾಳುವವನು ರೋಮನ್
ಸಾಮ್ರಾಜ್ಯವೊಂದು ಈ ಜಗತ್ತಿನಲ್ಲಿ ಇತ್ತೆಂಬುದರ ಬಗೆಗೂ, ಮೊಗಲರು ಭಾರತದಲ್ಲಿ
ಅಳಿದ್ದರೆಂಬ ಬಗೆಗೂ ನೆಪೋಲಿಯನ್ ಎಂಬವನೊಬ್ಬನು ಈ ಲೋಕದಲ್ಲಿದ್ದನೆಂಬ
ಬಗೆಗೂ ಸಂಶಯ ತಾಳಬಹುದು. ಇಂತಹ ಐತಿಹಾಸಿಕ ಸತ್ಕಾಂಶಗಳ ಬಗ್ಗೆ ಸಂಶಯ
ತಾಳುವುದು ಜ್ಞಾನದ ದ್ಯೋತಕವಲ್ಲ. ನಿಜವಾಗಿ ಅದು ಅಜ್ಞಾನದ ಸಂಕೇತವಾಗಿದೆ.
30 ಕುರ್‌ಆನ್ ಅಧ್ಯಯನ ಮಾರ್ಗದರ್ಶಿ
ಮಾರ್ಗದ:
ಕುರ್‌ಆನ್ ಜಗತ್ತಿನ ಅಸಂಖ್ಯಾತ ಜನರು ಹಲವಾರು ಉದ್ದೆ: €ಶಗಳನ್ನಿರಿಸಿಕೊಂಡು
ಸಮೂಪಿಸುವಂತಹ ಒಂದು ವಿಶಿಷ್ಟ ಗ್ರಂಥವಾಗಿದೆ. ಅವರೆಲ್ಲರ ಅವಶ್ಯಕತೆಗಳನ್ನೂ
ಉದ್ದೇಶಗಳನ್ನೂ ಮುಂದಿರಿಸಿಕೊಂಡು ಏನಾದರೂ ಸಲಹೆ ನೀಡಲು ಮಾನವನಿಗೆ
ಸಾಧ್ಯವಿಲ್ಲ. ನನಗಂತು ಕುರ್‌ಆನ್ ಕಲಿಯ ಬಯಸುವ ಈ ಸಂದಣಿಯಲ್ಲಿ
ಅಸಕ್ಷಿಯಿರುವುದು ಅದನ್ನು ಗ್ರಹಿಸ ಬಯಸುವ ಮತ್ತು ಮಾನವನ ಜೀವನದ
ಸಮಸ್ಯೆಗಳಲ್ಲಿ ಅದು ಯಾವ ಮಾರ್ಗದರ್ಶನವೀಯುತ್ತದೆಂದು ತಿಳಿಯ ಬಯಸುವವರ
ಬಗ್ಗೆ ಮಾತ್ರ. ಇಂತಹವರಿಗೆ ನಾನು ಇಲ್ಲಿ ಕುರ್‌ಆನ್ ಅಧ್ಯಯನದ ಕುರಿತು ಕೆಲವು
ಸಲಹೆಗಳನ್ನು ಕೊಡುವೆನು. ಮಾನವನಿಗೆ ಈ ವಿಷಯದಲ್ಲಿ ಸಾಮಾನ್ಯವಾಗಿ
ಎದುರಾಗುವ ಕೆಲವು ಜಟಿಲವಾದ ಸಮಸ್ಯೆ ಕೈಗಳನ್ನು ಬಿಡಿಸಲು ಪ್ರಯತ್ನಿಸುವೆನು.
ಒಬ್ಬ ವ್ಯಕ್ತಿಗೆ ಕುರ್‌ಆನಿನ ಮೇಲೆ ವಿಶ್ವಾಸವಿರಲಿ ಇಲ್ಲದಿರಲಿ ಈ
ಗ್ರಂಥವನ್ನು ಅರಿತುಕೊಳ್ಳಲು ಬಯಸುವವನಾದರೆ, ಆತ ಪ್ರಥಮತಃ ತನ್ನ ಮನ-
ಮಸ್ತಿಷ್ಕಗಳಲ್ಲಿ ಮೊದಲಿನಿಂದಲೇ ನೆಲೆನಿಂತಿರುವಂತಹ ವಿಜಾರೆ ಸಿದ್ದಾಂತಗಳನ್ನು
ಮತ್ತು ಅನುಕೂಲ ಅಥವಾ ಪ್ರತಿಕೊಲ ಹಿತಾಸಕ್ತಿಗಳನ್ನು ಸಾಧ್ಯವಿರುವಷ್ಟು ಮುಕ್ತ
ಗೊಳಿಸಿ ಕೇವಲ ಕುರ್‌ಆನನ್ನು ಅರಿಯಬೇಕೆಂಬ ನಿಷ್ಕಳಂಕ ಉದ್ದೇಶದಿಂದ ಹೃತ್ಪೂರ್ವಕ
ಓದಲಾರಂಭಿಸಬೇಕು. ಕೆಲವು ವಿಶಿಷ್ಟ ಭಾವನೆಗಳನ್ನಿರಿಸಿಕೊಂಡು ಈ ಗ್ರಂಥವನ್ನೋದು
ವವರು ಇದರ ಪಂಕ್ತಿಗಳಲ್ಲಿ ತಮ್ಮದೇ ವಿಚಾರಗಳನ್ನು ಓದುತ್ತ ಹೋಗುವರೇ ವಿನಾ '
ಕುರ್‌ಆನಿನ ಗಂಧಗಾಳಿಯೂ ಅವರಿಗೆ ಸೋಂಕಲಾರದು. ಈ ರೀತಿಯ ಅಧ್ಯಯನ
ಕ್ರಮವು ಯಾನ ಗ್ರಂಥದ ಮಟ್ಟಿಗೂ ಸರಿಯಲ್ಲ. ಮುಖ್ಯವಾಗಿ ಈ ರೀತಿ
ಓದುವವರಿಗಂತೂ ಪವಿತ್ರ ಕುರ್‌ಆನ್ ತನ್ನ ಅರ್ಥ ತಾತ್ಸರ್ಯಗಳ ದ್ವಾರವನ್ನೇ
ತೆರೆಯುವುದಿಲ್ಲ.
ಸ್ಥೂಲ ಪರಿಚಯವನ್ನು ಮಾತ್ರ ಮಾಡಿಕೊಳ್ಳುವವರಿಗೆ ಕೇವಲ ಒಂದು ಸಲ
ಓದಿದರೂ. ಸಾಕಾಗಬಹುದು. ಆದರೆ ಇದರ ಅಂತರಾಳಕ್ಕೆ ಇಳಿಯ ಬಯಸುವವರಿಗೆ
ನಾಲ್ಕಾರು ಬಾರಿ ಓದಿದರೂ ಸಾಕಾಗದು. ಇದನ್ನು ಪದೇ ಪದೇ ಓದಬೇಕು. ಪ್ರತಿ
ಬಾರಿಯೂ ಒಂದು ವಿಶಿಷ್ಟ ರೀತಿಯಿಂದ ಓದಬೇಕು. ಒಬ್ಬ ವಿದ್ಯಾರ್ಥಿಯಂತೆ
ಲೇಖನಿ ಮತ್ತು ಪುಸ್ತಕವನ್ನು ತೆಗೆದುಕೊಂಡು ಅಗತ್ಕವುಳ್ಳಿ ಮುಖ್ಯ ವಿಷಯಗಳನ್ನು
ಬರೆದಿಟ್ಟುಕೊಳ್ಳಬೇಕು. ಹಾಗೆ ಸಿದ್ಧ: ರಿರುವವರು ಈ ಗ್ರಂಥವು ಅವರ ಮುಂದಿಡಲು
ಕುರ್‌ಆನ್ ಅಧ್ಯಯನ ಮಾರ್ಗದರ್ಶಿ 31
ಉದ್ದೇಶಿಸಿರುವ ವಿಚಾರ ಹಾಗೂ ಆಚಾರ ಕ್ರಮದ ಸಂಪೂರ್ಣ ವ್ಯವಸ್ಥೆಯು ಅವರ
ಮುಂದೆ ಬರುವಂತಾಗಲು ಕನಿಷ್ಠ ಎರಡು ಬಾರಿಯಾದರೂ ಓದಬೇಕು. ಈ
ಆರಂಭದ ಅಧ್ಯಯನದ ವೇಳೆ ಅವರು ಕುರ್‌ಆನಿನ ಸಂಪೂರ್ಣ ದೃಶೃದ ಮೇಲೆ
ಒಂದು ಸಮಗ್ರ ದೃಷ್ಟಿಯನ್ನು ಬೀರಲು ಪ್ರಯತ್ನಿಸುತ್ತ ಈ ಗ್ರಂಥವು ಯಾವ
ವಿಚಾರಗಳನ್ನು ಮುಂದಿರಿಸುತ್ತದೆ, ಆ ವಿಚಾರಗಳಿಂದ ಎಂತಹ ಜೀವನ ವ್ಯವಸ್ಥೆಯ
ನಿರ್ಮಾಣವಾಗುತ್ತದೆ ಎಂದು ಪರಿಶೀಲಿಸುತ್ತ ಸಾಗಬೇಕು. ಹಾಗೆ ಸಾಗುತ್ತಿರುವಾಗ,
ಎಲ್ಲಾದರೂ ಯಾವುದಾದರೊಂದು ಪ್ರಶ್ನೆಯು ಮನಸ್ಸಿನಲ್ಲಿ ಉದ್ಭವಿಸಿದರೆ ಆಗಲೇ
ಮತ್ತು ಅಲ್ಲೇ ಏನಾದರೊಂದು ನಿರ್ಧಾರಕ್ಕೆ ಬಂದು ಬಿಡಬಾರದು. 'ಅದನ್ನು
ಗುರುತಿಸಿ ಬರೆದಿಟ್ಟುಕೊಳ್ಳಬೇಕು ಮತ್ತು ತಾಳ್ಮೆಯೊಂದಿಗೆ ಅಧ್ಯಯನವನ್ನು
ಮುಂದುವರಿಸಬೇಕು. ಹೆಚ್ಚಿನ ವೇಳೆ ಮುಂದೆ ಎಲ್ಲಾದರೊಂದು ಕಡೆ ಅವರಿಗೆ ಆ
ಪ್ರಶ್ನೆಗೆ ಸರಿಯಾದ ಉತ್ತರ ಸಿಗುವುದು. ಉತ್ತರ ಸಿಕ್ಕಿದೊಡನೆ ತಾನು ಗುರುತಿಸಿಟ್ಟು
ಕೊಂಡಿದ್ದ ಜಾಗದಲ್ಲಿ ಅದನ್ನು ಬರೆದುಕೊಳ್ಳಬೇಕು. ಆದರೆ, ಆರಂಭದ ಅಧ್ಯಯನದ
ವೇಳೆ ಯಾವುದಾದರೂ ಪ್ರಶ್ನೆಯ ಉತ್ತರ ಸಿಗದೆ ಹೋದರೆ ತಾಳ್ಮೆಗೆಡದೆ
ಎರಡನೆಯ ಬಾರಿ ಓದಬೇಕು. ಎರಡನೆಯ ಬಾರಿ ನಡೆಸುವ ےمذ ಅಧ್ಯಯನದ
ವೇಳೆಯೂ ಉತ್ತರ ಪಡೆಯತಕ್ಕಂತಹ ಪ್ರಶ್ನೆಗಳು ಉಳಿಯುವುದು ತೀರಾ
ಅಪರೂಪವೆಂಬುದನ್ನು ನಾನು ನನ್ನ ಸ್ವಂತ ಅನುಭವದಿಂದ ಹೇಳುತ್ತಿದ್ದೇನೆ.
ಈ ರೀತಿ ಕುರ್‌ಆನಿನ ಮೇಲೆ ಒಂದು ಸಮಗ್ರ ದೃಷ್ಟಿ ಹಾಯಿಸಿಕೊಂಡ ಬಳಿಕ
ಕೂಲಂಕಷ ಅಧ್ಯಯನವನ್ನಾರಂಭಿಸಬೇಕು. ಈ ದಿಸೆಯಲ್ಲಿ ಓದುಗನು ಕುರ್‌ಆನಿನ
ಶಿಕ್ಷಣದ ಪ್ರತಿಯೊಂದು ಮುಖವನ್ನು ಮಂದಟ್ಟು ಮಾಡಿಕೊಂಡು ಬರೆದಿಟ್ಟು
ಕೊಳ್ಳಬೇಕು. ಉದಾ: ಯಾವ ತರದ ಮನುಷ್ಯ ಮಾದರಿಯನ್ನು ಕುರ್‌ಆನ್ ಮೆಚ್ಚು
ತ್ತದೆ ಮತ್ತು ಯಾವ ಮಾದರಿಯ ಮನುಷ್ಯನನ್ನು ಅದು ಧಿಕ್ಕರಿಸಲ್ಪಟ್ಟವನೆಂದೂ
ಕ್ರೋಧಕ್ಕೊಳೆಗಾದವನೆಂದೂ ನಿಷ್ಕರ್ಪಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು
ಪ್ರಯತ್ನಿಸಬೇಕು. ಈ ವಿಷಯದಲ್ಲಿ ಸರಿಯಾದ ಹಿಡಿತ ಸಿಗಲಿಕ್ಕಾಗಿ ತನ್ನ ಟಿಪ್ಪಣಿ
ಪುಸ್ತಕ(ೆಂ-bಂಂk)ದಲ್ಲಿ ಒಂದು ಕಡೆ "ಮೆಚ್ಚುಗೆಗೆ ಅರ್ಹನಾದವ' ಎಂದೂ
ಇನ್ನೊಂದು ಕಡೆ 'ಮೆಚ್ಚುಗೆಗೆ ಅನರ್ಹನಾದವ' ಎಂದೂ ಬರೆದುಕೊಂಡು ಅಂತಹವರ
ವೈಶಿಷ್ಟ್ಯಗಳನ್ನು ಎದುರು ಬದುರಾಗಿ ಬರೆಯುತ್ತ ಸಾಗಬೇಕು. ಅಥವಾ ಕುರ್‌ಆನಿನ
32 ಕುರ್‌ಆನ್ ಅಧ್ಯಯನ ಮಾರ್ಗದರ್ಶಿ
ಪ್ರಕಾರ ಮಾನವರ ಯಶಸ್ಸು ಹಾಗೂ ಮೋಕ್ಷ ಯಾವ ವಿಷಯಗಳನ್ನವಲಂಬಿಸಿವೆ
ಮತ್ತು ಯಾವ ವಿಷಯಗಳು ಅವನ ಹಾನಿ ಹಾಗೂ ವಿನಾಶಕ್ಕೆ ಕಾರಣವಾಗುವುವು
ಎಂಬುದನ್ನು ತಿಳಿಯಲು ಪ್ರಯತ್ನಿಸಬೇಕು. ಈ ವಿಷಯವನ್ನು ವಿವರವಾಗಿ ತಿಳಿದು
ಕೊಳ್ಳೆಲು ತನ್ನ ಟಿಪ್ಪಣಿ ಪುಸ್ತಕದಲ್ಲಿ ವಿಜಯಕ್ಕೆ ಕಾರಣವಾದವುಗಳು- ಹಾನಿಗೆ
ಕಾರಣವಾದವುಗಳು ಎಂಬ ಎರಡು ಶೀರ್ಷಿಕೆಗಳನ್ನು ಎದುರು ಬದುರಾಗಿರಿಸಿಕೊಂಡು
ಕುರ್‌ಆನ್ ಅಧ್ಯಯನದ ವೇಳೆ ದಿನಂಪ್ರತಿ ಈ ಎರಡೂ ವಿಷಯಗಳನ್ನು
ಗುರುತಿಸುತ್ತ ಸಾಗುವುದೇ ಉತ್ತಮ ವಿಧಾನ. ಇದೇ ಕ್ರಮವನ್ನು ವಿಶ್ವಾಸ, ಚಾರಿತ್ರ್ಯ,
ಹಕ್ಕು ಬಾಧ್ಯತೆಗಳು, ಕರ್ತವ್ಯ, ಕರ್ಮಗಳು, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ,
ರಾಜಕೀಯ, ಕಾನೂನು, ಸಾಮೂಹಿಕ ಶಿಸ್ತು, ಯುದ್ಧ, ಒಪ್ಪಂದ ಇತ್ಕಾದಿ ಜೀವನದ
ಪ್ರತಿಯೊಂದು ಸಮಸ್ಯೆಯ ಬಗ್ಗೆಯೂ ಕುರ್‌ಆನಿನ ಮಾರ್ಗದರ್ಶನವನ್ನು ಗುರುತಿಸುತ್ತಾ
ಹೋಗಬೇಕು. ಇವುಗಳ ಪೈಕಿ ಪ್ರತಿಯೊಂದು ವಿಭಾಗದ ರೂಪ ಏನಾಗುತ್ತದೆಂದು ٭
ತಿಳಿಯಲು ಪ್ರಯತ್ನಿಸಬೇಕು. ತರುವಾಯ ಇವೆಲ್ಲವುಗಳನ್ನು ಒಟ್ಟುಗೂಡಿಸುವುದರಿಂದ
ಜೀವನದ ಸಂಪೂರ್ಣ ಚಿತ್ರವು ಯಾವ ತರದ್ದಾಗುತ್ತದೆಂದು ಗ್ರಹಿಸಲು ಪ್ರಯತ್ನಿಸಬೇಕು.
ಮಾನವನು ಯಾವುದಾದರೊಂದು ಜೀವನ ಸಮಸ್ಯೆಯ ಕುರಿತು ಕುರ್‌ಆನಿನ
ದೃಷ್ಟಿಕೋನ ಏನೆಂದು ಶೋಧಿಸಲಿಚ್ಛಿಸುವುದಾದರೆ, ಮೊದಲು ಇದಕ್ಕಾಗಿ ಪ್ರಾಚೀನ
ಮತ್ತು ಆಧುನಿಕ ಸಾಹಿತ್ಯಗಳ ಗಾಢ ಅಧ್ಯಯನ ನಡೆಸಿ, ಆ ಸಮಸ್ಯೆಯ ಮೂಲ
ವಿಷಯಗಳಾವುವು? ಮಾನವನು ಈ ಕುರಿತು ಇಷ್ಟರವರೆಗೆ ಏನೆಲ್ಲ ಯೋಚಿಸಿದ್ದಾನೆ?
ಏನೆಲ್ಲ ಗ್ರಹಿಸಿಕೊಂಡಿದ್ದಾನೆ? ಅದರಲ್ಲಿ ನಿಷ್ಯರ್ಷಿಸಲ್ಪಡತಕ್ಕ ಸಂಗತಿಗಳಾವುವು?
ಮಾನವನ ವಿಚಾರವು ಎಲ್ಲಿ ಹೋಗಿ ನಿಂತು ಬಿಡುತ್ತದೆ ಎಂದು ತಿಳಿಯಬೇಕು.
ಅನಂತರ ನಿಷ್ಯರ್ಷಿಸಲ್ಪಡಬೇಕಾದ ಆ ಸಮಸ್ಸೆಗಳನ್ನು ಮುಂದಿಟ್ಟುಕೊಂಡು ಕುರ್‌ಆನಿನ
ಅಧ್ಯಯನ ನಡೆಸಬೇಕು. ಹೀಗೆ ಒಬ್ಬನು ಯಾವುದಾದರೊಂದು ಸಮಸ್ಯೆಯ ಬಗ್ಗೆ
ಶೋಧನೆ ನಡೆಸಲಿಕ್ಕಾಗಿ ಕುರ್‌ಆನಿನ ಅಧ್ಯಯನ ನಡೆಸುವಾಗ ಅವನು ಈ ತನಕ
ಅನೇಕ ಬಾರಿ ಓದಿದ್ದಂತಹ ಸೂಕ್ತಗಳಲ್ಲೇ ಅವನ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.
ಈ ಮುಂಚೆ ಎಂದೂ ಹೊಳೆಯದಿದ್ದಂತಹ ಆ ವಿಷಯವು ಅಲ್ಲಿ ಅಡಗಿಕೊಂಡಿರುವುದು
ಅವನ ಗಮನಕ್ಕೆ ಬರುತ್ತದೆ. ۱
ಕುರ್‌ಆನ್ ಅಧ್ಯಯನ ಮಾರ್ಗದರ್ಶಿ 33
ಆದರೆ ಕುರ್‌ಆನನ್ನು ಗ್ರಹಿಸೆಲಿಕ್ಕಾಗಿ ಈ ಎಲ್ಲ ವಿಧಾನಗಳನ್ನು ಬಳೆಸಿದರೂ
ಕುರ್‌ಆನ್ ಯಾಕಾಗಿ ಬಂದಿದೆಯೋ ಆ ಕಾರ್ಯವನ್ನು ಮಾನವನು ಕಾರ್ಯತಃ
ಮಾಡದೆ ಹೋದರೆ ಕುರ್‌ಆನಿನ ತಿರುಳನ್ನು ಸಂಪೂರ್ಣ ಅರ್ಥಮಾಡಿಕೊಳ್ಳಲು
ಸಾಧ್ಯವಿಲ್ಲ. ನೀವು ಆರಾಮ ಕುರ್ಚಿಯಲ್ಲಿ ಕುಳಿತು ಅದನ್ನು ಓದಿ, ಅದರಲ್ಲಿರು
ವುದನ್ನೆಲ್ಲ ಅರಿತುಕೊಂಡು ಸುಮ್ಮನಿದ್ದು ಬಿಡಲು, ಇದು ಕೇವಲ ವಿಚಾರ-
ಸಿದ್ದಾಂತಗಳ ಗ್ರಂಥವೇನೂ ಅಲ್ಲ. ಇದರ ಮರ್ಮಗಳನ್ನು ಪಾಠಶಾಲೆಗಳಲ್ಲೋ
ಆಶ್ರಮಗಳಲ್ಲೋ ಬಗೆಹರಿಸಿಕೊಳ್ಳೆಬಹುದೆನ್ನಲು ಇದು ಸಾಮಾನ್ಯವಾಗಿ ಮತದ
ಬಗ್ಗೆ ಜನರು ಭಾವಿಸುವಂತಹ ಕೇವಲ ಮತೀಯ ಗ್ರಂಥವೂ ಅಲ್ಲ. ಈ
ಮುನ್ನುಡಿಯ ಪ್ರಾರಂಭದಲ್ಲಿ ಹೇಳಿರುವಂತೆ ಇದೊಂದು ಸಂದೇಶ ಹಾಗೂ
ಆಂದೋಲನದ ಗ್ರಂಥವಾಗಿದೆ. ಇದು ಬಂದಾಗಲೇ ಓರ್ವ ಮೌನ ಪ್ರಕೃತಿಯ
ಹಾಗೂ ಉತ್ತಮ ಗುಣಸ್ವಭಾವದ ವ್ಯಕ್ತಿಯನ್ನು ಏಕಾಂತವಾಸದಿಂದ ಹೊರತಂದು
ದೇವನಿಂದ ವಿಮುಖವಾಗಿದ್ದ ಜಗತ್ತನ್ನು ಎದುರಿಸಲಿಕ್ಕಾಗಿ ಸಿದ್ದಗೊಳಿಸಿತು. ಆ
ವ್ಯಕ್ತಿಯ ಬಾಯಿಯಿಂದ ಮಿಥ್ಕದ ವಿರುದ್ಧ ಸ್ವರವೆಬ್ಬಿಸಿತು ಮತ್ತು ಆ ಕಾಲದ ಕುಫ್ರ್
(ಸತ್ಯನಿಷೇಧು, ಫಿಸ್ಕ್(ಕರ್ಮಬ್ರಷ್ಟತೆ) ಮತ್ತು ಪಥಭ್ರಷ್ಟತೆಯ ಧ್ವಜವಾಹಕರೊಡನೆ
ಹೋರಾಟಕ್ಕಿಳಿಸಿತು. ಒಂದೊಂದು ಮನೆಯಿಂದಲೂ ಒಬ್ಬೊಬ್ಬ ಸಜ್ಜನನನ್ನು ಎಳೆದು
ತಂದು ಈ ಸೆತ್ಯ ಸಂದೇಶವಾಹಕನ ದ್ವಜದ ಕೆಳೆಗೆ ಒಟ್ಟುಗೂಡಿಸಿತು. ಮೂಲೆ
ಮೂಲೆಗಳಿಂದ ಕಿಡಿಗೇಡಿಗಳನ್ನೂ ಗಲಭೆಕೋರರನ್ನೂ ಉದ್ರೇಕಿಸಿ, ಸತ್ಯದ ಪಕ್ಷಪಾತಿ
ಗಳೊಂದಿಗೆ ಯುದ್ದ ಮಾಡಿಸಿತು. ಕೇವಲ ಒಬ್ಬ ವ್ಯಕ್ತಿಯ ಕರೆಯೊಂದಿಗೆ ತನ್ನ
ಕಾರ್ಯವನ್ನಾರಂಭಿಸಿ, ಖಲಾಫತೆ ಇಲಾಹಿಯ್ಯಾ (ಅಲ್ಲಾಹನ ಪ್ರತಿನಿಧಿತ್ವ) ವ್ಯವಸ್ಥೆಯ
ಸಂಸ್ಥಾಪನೆಯ ವರೆಗಿನ ನಿರಂತರ ಇಪ್ಪತ್ತಮೂರು ವರ್ಷಗಳವರೆಗೆ ಇದೇ ಗ್ರಂಥವು
ಇಷ್ಟು ದೊಡ್ಡ ಆಂದೋಲನಕ್ಕೆ ಮಾರ್ಗದರ್ಶನ ನೀಡಿತ್ತು. ಸತ್ಕಾಸತ್ಮಗಳ ನಡುವಿನ
ಘರ್ಷಣೆಯ ಈ ಪ್ರಾಣಾಂತಿಕ ಕಾಲಾವಧಿಯ ಪ್ರತಿಯೊಂದು ಹಂತದಲ್ಲಿ ನಿರ್ನಾಮದ
ರೀತಿಯನ್ನೂ ನಿರ್ಮಾಣದ ವಿಧಾನವನ್ನೂ ತೋರಿಸಿಕೊಟ್ಟಿತು. ಹೀಗಿರುವಾಗ ನೀವು
ಧರ್ಮ-ಅಧರ್ಮಗಳ ವಿವಾದ, ಇಸ್ಲಾಮ್ ಮತ್ತು ಅಜ್ಞಾನಗಳ ನಡುವಿನ ಹೋರಾಟದ
ರಣಾಂಗಣದಲ್ಲಿ ಕಾಲಿಡದೆಯೇ ಕೇವಲ ಕುರ್‌ಆನಿನ ವಾಕ್ಕಗಳನ್ನು ಓದಿಕೊಂಡ
ಮಾತ್ರಕ್ಕೆ ಅದರ ಎಲ್ಲ ಪರಮಾರ್ಥಗಳೂ ನಿಮ್ಮ ಮುಂದೆ ಅನಾವರಣಗೊಳ್ಳುವುದು
ಹೇಗೆ ಸಾಧ್ಯ? ಇದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕಾದರೆ ನೀವು
34 ಕುರ್‌ಆನ್ ಅಧ್ಯಯನ ಮಾರ್ಗದರ್ಶಿ
EE nicks
ಅದನ್ನು ಕೈಗೆತ್ತಿಕೊಂಡು ಎದ್ದೇಳಬೇಕು. ದೇವನ ಸಂದೇಶದ ಪ್ರಚಾರ ಕಾರ್ಯವನ್ನು
ಪ್ರಾರಂಭಿಸಬೇಕು. ಈ ಗ್ರಂಥವು ಹೇಗೆ ಮಾರ್ಗದರ್ಶನ ಮಾಡುತ್ತದೋ ಹಾಗೆ
ಮುಂದಡಿಯಿಡುತ್ತಾ ಸಾಗಬೇಕು. ಆಗ ಕುರ್‌ಆನ್ ಅವಶೀರ್ಣಗೊಳ್ಳುತ್ತಿದ್ದ ಕಾಲದಲ್ಲಿ
ಸಂಭವಿಸಿದ್ದೆಲ್ಲಾ ನಿಮ್ಮ ಮೇಲೂ ಸಂಭವಿಸುವುದು. ಬದ್, ಉಹುದ್‌ಗಳಿಂದ
ಹಿಡಿದು ಹುನೈನ್, ತಬೂಕ್‌ಗಳ ವರೆಗಿನ ಘಟ್ಟಗಳೂ ನಿಮ್ಮ ಮುಂದೆ ಬರುವುವು.
ಅಬೂಜಹಲ್ ಮತ್ತು ಅಬೂಲಹಬ್‌ರೊಂದಿಗೂ ಸೆಣಸಬೇಕಾಗುವುದು. ಮುನಾಫಿಕರು
(ಕಪಟವಿಶ್ವಾಸಿಗಳು) ಮತ್ತು ಯಹೊದಿಯರೂ ನಿಮಗೆ ಸಿಗುವರು. ಸಾಬಿಕೂನಲ್
ಅವ್ವಲೂನ್ (ಪ್ರಾರಂಭದ ಸಂಗಾತಿಗಳು)ರಿಂದ ಹಿಡಿದು ಮುವಲ್ಲಫತುಲ್‌ಕುಲೂಬ್
(ಹೈದಯ ಗೆಲ್ಲಬಯಸುವ) ವರೆಗಿನ ಎಲ್ಲಾ ವಿಧದ ಮಾನವ ಮಾದರಿಗಳನ್ನು ನೀವು
ಕಾಣುವಿರಿ ಮತ್ತು ಅವರೊಡನೆ ವ್ಯವಹರಿಸುವಿರಿ. ಇದುವೇ ನಾನು "ಕುರ್‌ಆನಿನ
ರೀತಿ'ಯೆನ್ನುವ ಒಂದು ವೈಶಿಷ್ಟ್ಯಪೂರ್ಣ ರೀತಿಯಾಗಿದೆ. ಅದರ ಪ್ರತಾಪವೆಷ್ಟೆಂದರೆ,
ಯಾವ ಯಾವ ಹಂತದಿಂದ ನೀವು ಸಾಗುವಿರೋ ಅಲ್ಲಿ ಕುರ್‌ಆನಿನ ಕೆಲವು
ಸೂಕ್ತಗಳು ಮತ್ತು ಅಧ್ಯಾಯಗಳು ಮುಂದೆ ಬಂದು ಅವು ಇಂತಹ ಸಂದರ್ಭದಲ್ಲೇ
ಅವತೀರ್ಣಗೊಂಡಿದ್ದವು ಮತ್ತು ಇಂತಹ ಆದೇಶದೊಂದಿಗೇ ಬಂದಿದ್ದವು ಎಂದು
ತೋರಿಸುತ್ತಲೇ ಸಾಗುವುವು. ಇಂತಹ ಸೆಂದರ್ಭದಲ್ಲಿ ಭಾಷೆ, ವಾಕರಣ ಹಾಗೂ
ಅರ್ಥ ವಿವರಣೆಗಳ ಕೆಲವು ಮರ್ಮಗಳು ಆ ಸನ್ಮಾರ್ಗಗಾಮಿಯ ದೃಷ್ಟಿಯಿಂದ
ತಪ್ಪಿಹೋಗಲೂ ಸಾಧ್ಯವಿದೆ. ಆದರೆ ಕುರ್‌ಆನ್ ತನ್ನ ಅಂತರಾಳವನ್ನು ಅನಾವರಣ
ಗೊಳಿಸುವಲ್ಲಿ ಲೋಭ ತೋರಲು ಸಾಧ್ಯವೇ ಇಲ್ಲ.
ಅನಂತರ ಇದೇ ಸಮಗ್ರ ನಿಯಮ ಪ್ರಕಾರ ಕುರ್‌ಆನಿನ ಆದೇಶಗಳು, ಅದರ
ನೈತಿಕ ಬೋಧನೆಗಳು ಆರ್ಥಿಕ ಮತ್ತು ನಾಗರಿಕ ಜೀವನದ ಬಗ್ಗೆ ಅದರ
ಮಾರ್ಗದರ್ಶನಗಳು ಮತ್ತು ಜೀವನದ ವಿವಿಧ ರಂಗಗಳ ಕುರಿತು ಅದು ತೋರಿಸಿ
ಕೊಟ್ಟ ನೀತಿ ನಿಯಮ ಇತ್ಯಾದಿಗಳನ್ನು ಮಾನವನು ಕಾರ್ಯತಃ ಅಳವಡಿಸಿಕೊಳ್ಳುವ
ತನಕ ಅವು ಅವನಿಗೆ ಅರ್ಥವಾಗದು. ತನ್ನ ವೈಯಕ್ತಿಕ ಜೀವನವನ್ನು ಅದರ
ಅನುಸರಣೆಯಿಂದ ದೂರವಿರಿಸಿಕೊಂಡ ವ್ಯಕ್ತಿಗಾಗಲಿ, ತನ್ನೆಲ್ಲ ಚಟುವಟಿಕೆಗಳನ್ನು
ಅದು ತೋರಿಸಿ ಕೊಟ್ಟಿರುವ ಮಾರ್ಗಕ್ಕೆ ವಿರುದ್ಧ ನಡೆಸುತ್ತಿರುವ ಜನಾಂಗಕ್ಕಾಗಲಿ
ಈ ಗ್ರಂಥವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.
ಕುರ್‌ಆನ್ ಅಧ್ಯಯನ ಮಾರ್ಗದರ್ಶಿ 35
ಕುರ್‌ಆನ್ ಸಕಲ ಮಾನವ ಕೋಟಿಯ ಸನ್ಮಾರ್ಗದರ್ಶನಕ್ಕಾಗಿ ಬಂದ
ಗ್ರಂಥವೆಂದು ಹಿರಿಯ-ಕಿರಿಯರೆನ್ನದೆ ಎಲ್ಲರೂ ಬಲ್ಲರು. ಆದರೆ, ಅದನ್ನು ಓದಲಾರಂಭಿಸಿ
ದಾಗ, ಅದು ತನ್ನ ಅವತೀರ್ಣ ಕಾಲದ ಅರಬ್ ಜನತೆಯೊಡನೆ ಮಾತಾಡಿದಂತೆ
ತೋರುತ್ತದೆ. ಒಮ್ಮೊಮ್ಮೆ ಅದು ಸಕಲ ಮಾನವ ಕೋಟಿಯನ್ನೂ ಜನಸಾಮಾನ್ಯರನ್ನೂ
ಸಂಬೋಧಿಸುತ್ತದಾದರೂ ಅದರ ಹೆಚ್ಚಿನ ಮಾತುಗಳೆಲ್ಲ ಅರಬರ ಅಭಿರುಚಿ,
ಅವರದೇ ಪರಿಸರ, ಅವರದೇ ಇತಿಹಾಸ ಮತ್ತು ಅವರದೇ ರೀತಿ ರಿವಾಜುಗಳಿಗೆ
ಸಂಬಂಧಿಸಿರುತ್ತವೆ. ಇದನ್ನು ಕಂಡ ಓರ್ವನು, ಸಕಲ ಮಾನವರಿಗಾಗಿ ಅವತೀರ್ಣಗೊಂಡ
ಗ್ರಂಥದಲ್ಲಿ ಒಂದು ವಿಶಿಷ್ಟ ಕಾಲ, ಸ್ಥಳೆ ಮತ್ತು ಜನಾಂಗಕ್ಕೆ ಸಂಬಂಧಿಸಿದ
ವಿಷಯಗಳು ಇಷ್ಟು ಹೆಚ್ಚು ಇರಲು ಕಾರಣವೇನು ಎಂದು ಯೋಚಿಸತೊಡಗುತ್ತಾನೆ.
ಇದರ ನಿಜಸ್ಥಿತಿಯನ್ನು ಅರಿಯದ ಕಾರಣ, ಕೆಲವರು ಇದು ಆ ಕಾಲದ ಅರಬರನ್ನು
ಸುಧಾರಿಸಲಿಕ್ಕಾಗಿಯೇ ಬಂದಿರಬಹುದೆಂದೂ ನಂತರ ಅದನ್ನು ಬಲವಂತವಾಗಿ
ಎಳೆದು ತಂದು ಸಕಲ ಮಾನವರಿಗಾಗಿ ಮತ್ತು ಎಲ್ಲ ಕಾಲಗಳಿಗಾಗಿ ಮಾರ್ಗದರ್ಶಕ
ಗ್ರಂಥವನ್ನಾಗಿ ಪರಿಗಣಿಸಿಕೊಳ್ಳಲಾಗಿರಬಹುದೆಂದೂ ಸಂದೇಹ ಪಡುತ್ತಾರೆ.
ಈ ಆಕ್ಷೇಪವನ್ನು ಕೇವಲ ಆಕ್ಲೇಪಕ್ಕಾಗಿ ಮಾತ್ರ ಎತ್ತದೆ ವಸ್ತುಸ್ಥಿತಿಯನ್ನು
ಅರಿತುಕೊಳ್ಳ ಬಯಸುವವರಿಗೆ ನಾನು ಸಲಹೆ ನೀಡುವುದೇನೆಂದರೆ-ಅವರು ಮೊದಲು
ಕುರ್‌ಆನನ್ನು ಸ್ವತಃ ಓದಿ, ಅದರಲ್ಲಿ ಕೇವಲ ಅರಬರಿಗೆ ಮಾತ್ರ ಅನ್ವ್ಯಯಿಸುವಂತಹ
ಹಾಗೂ ಯಾವುದಾದರೊಂದು ಕಾಲ ಮತ್ತು ಪ್ರದೇಶಕ್ಕೆ ಸೀಮಿತವಾದಂತಹ ವಿಶ್ವಾಸ,
ಸಂಬಿಕೆ, ಕಲ್ಪನೆ ಅಥವಾ ನೀತಿ-ನಿಯಮಗಳು ಮತ್ತು ಪ್ರಾಯೋಗಿಕ ಕಾಯಿದೆ-
ಕಾನೂನುಗಳು ಎಲ್ಲೆಲ್ಲಿ ಇವೆ ಎಂಬುದನ್ನು ಗುರುತಿಸಿಡಬೇಕು. ಕುರ್‌ಆನ್ ಒಂದು
ನಿರ್ದಿಷ್ಟ ಸ್ನಳೆ ಹಾಗೂ ಕಾಲದ ಜನರನ್ನುದ್ದೇಶಿಸಿ ಅವರ ಬಹುದೇವ ವಿಶ್ವಾಸ
ಮತ್ತು ಕಂದಾಚಾರಗಳನ್ನು ಖಂಡಿಸಿ ಅವರ ಪರಿಸರದಲ್ಲಿರುವ ವಸ್ತುಗಳ ಆಧಾರದಲ್ಲಿ
ಏಕದೇವ ವಿಶ್ವಾಸಕ್ಕೆ ಪುರಾವೆ ನೀಡುತ್ತದೆಂಬ ಕಾರಣಕ್ಕೆ ಮಾತ್ರ ಅದರ ಸಂದೇಶವೂ
ಒಂದು ನಿರ್ದಿಷ್ಟ ಕಾಲ ಅಥವಾ ಸ್ಥಳಕ್ಕೆ ಮಾತ್ರ ಸೀಮಿತವಾಗಿದೆ ಎಂದು ವಾದಿಸಲು
ಸಾಕಾಗದು. ಬಹುದೇವವಾದವನ್ನು ಖಂಡಿಸುತ್ತ ಅದು ಹೇಳುವ ಮಾತುಗಳು
ಅರಬ್ ಬಹುದೇವಾರಾಧಕರಿಗೆ ಅನ್ವಯವಾಗುವಂತೆಯೇ ಜಗತ್ತಿನ ಎಲ್ಲ ಬಹುದೇವ
ವಿಶ್ವಾಸಿಗಳಿಗೂ ಅನ್ವಯವಾಗುವುದಿಲ್ಲವೇ? ಅದೇ ಪುರಾವೆಗಳನ್ನು ನಾವು ಎಲ್ಲ
36 ಕುರ್‌ಆನ್ ಅಧ್ಯಯನ ಮಾರ್ಗದರ್ಶಿ
ಕಾಲಗಳೆ ಮತ್ತು' ಎಲ್ಲಾ ಪ್ರದೇಶಗಳ ಬಹುದೇವವಿಶ್ಪಾಸಿಗಳ ವಿಚಾರಗಳನ್ನು
ತಿದ್ದಲಿಕ್ಕಾಗಿ ಉಪಯೋಗಿಸಬಾರದೇ? ತೌಹೀದ್(ಏಕ ದೇವವಿಶ್ವಾಸ) ಸರಿಯೆಂಬುದಕ್ಕೆ
ಕುರ್‌ಆನ್ ನೀಡುವ ಆಧಾರ ಪ್ರಮಾಣವನ್ನು ಕಿಂಚಿತ್ ಅದಲು ಬದಲುಗೊಳಿಸಿ,
ಎಲ್ಲ ಕಾಲಗಳಲ್ಲೂ ಎಲ್ಲ ಪ್ರದೇಶಗಳಲ್ಲೂ ಉಪಯೋಗಿಸಿಕೊಳ್ಳಲು ಸಾಧ್ಯವಿಲ್ಲವೇ
ಎಂದು ನೋಡಬೇಕು. ಇದು ಸಾಧ್ಯವೆಂದಾದರೆ, ಒಂದು ಸಾರ್ವಲೌಕಿಕ ಶಿಕ್ಷಣವನ್ನು
ಒಂದು ಪ್ರತೇಕ ಕಾಲ ಹಾಗೂ ಪ್ರದೇಶದ ಜನರ ಮುಂದಿರಿಸಲಾಗಿತ್ತೆಂಬ ಕಾರಣಕ್ಕೆ
ಅದನ್ನು ಕಾಲಬಾಧಿತ ಹಾಗೂ ಪ್ರಾದೇಶಿಕವೆನ್ನಲು ಸಾಧ್ಯವಿಲ್ಲ. ಆದಿಯಿಂದ
ಅಂತ್ಯದ ವರೆಗೂ ಕ್ರಮಬದ್ಧ ( ೩5) ವಿವರಣಾ ಶೈಲಿಯಲ್ಲಿ ಮಂಡಿಸಿ, ಅದನ್ನು
ಯಾವುದಾದರೊಂದು ವಿಶಿಷ್ಟ ಪರಿಸ್ಥಿತಿ ಅಥವಾ ಸನ್ನಿವೇಶಕ್ಕೆ ಸಮನ್ವಯಗೊಳಿಸಿ
ವಿಶ್ಲೇಷಿಸದೆ ಇರುವ ಯಾವ ತತ್ವಸಿದ್ದಾಂತವೂ ಜೀವನ ವ್ಯವಸ್ಥೆಯೂ ಮತವೂ
ವಿಚಾರಧಾರೆಯೂ ಜಗತ್ತಿನಲ್ಲಿಲ್ಲ. ಇಂತಹ ಕ್ರಮಬದ್ಧತೆ ಸ ಸಾಧ್ಯವಲ್ಪ ۔ ಒಂದು ವೇಳೆ
ಸಾಧ್ಯವಾದರೂ ಈ ವಿಧಾನದಿಂದ ಮುಂದಿಟ್ಟ ವಿಷಯವು ಕೇವಲ ಕಾಗದದ
ಪುಟಗಳಲ್ಲೇ ಉಳಿದೀತು. ಅದು ಮಾನವ ಜೀವನದಲ್ಲಿ ಪ್ರವೇಶಿಸಿ ಪ್ರಾಯೋಗಿಕ
ವ್ಯವಸ್ಥೆಯಾಗಿ ಮಾರ್ಪಡುವುದು ಅಸಂಭವನೀಯ.
ಇಷ್ಟೇ ಅಲ್ಲ. ಒಂದು ವೈಚಾರಿಕ, ನೈತಿಕ ಮತ್ತು ಸಾಂಸ್ಕೃತಿಕ ಆಂದೋಲನವನ್ನು
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಬ್ಬಿಸಲುದ್ದೇಶಿಸಿದ್ದರೆ ಅದನ್ನು ಆರಂಭದಿಂದಲೇ
ಅಂತಾರಾಷ್ಟ್ರೀಯವನ್ನಾಗಿ ಮಾಡುವ ಅಗತ್ಮವಿಲ್ಲ. ಅದು ಹಿತಕರವೂ ಅಲ್ಲ.
ವಾಸ್ತವದಲ್ಲಿ ಅದರ ಸರಿಯಾದ ಪ್ರಾಯೋಗಿಕ ವಿಧಾನವು ಕೇವಲ ಒಂದೇ ಆಗಿದೆ.
ಅದು ಯಾವುದೆಂದರೆ-ಆ ಆಂದೋಲನವು ಯಾವ ವೈಚಾರಿಕ ಸಿದ್ಧಾಂತಗಳ ಹಾಗೂ
ತತ್ಕಾದರ್ಶಗಳ ತಳಹದಿಯಲ್ಲಿ ಮಾನವ ಜೀವನ ವ್ಯವಸ್ಥೆಯನ್ನು ಸಂಸ್ಥಾಪಿಸಲಿಚ್ಛಿಸು
ತ್ರದೋ ಅವುಗಳನ್ನು ಸಂಪೂರ್ಣ ಶಕ್ತಿ ಉಪಯೋಗಿಸಿ ಅದು ಉದ್ಭವಿಸಿದ
ಪ್ರದೇಶದಲ್ಲೇ ಮುಂದಿಡಬೇಕು. ಆ ಆಂದೋಲನದ ಪ್ರಬೋಧಕನು ಅವರ ಭಾಷೆ,
ಸ್ವಭಾವ, ಅಭ್ಯಾಸ, ವರ್ತನೆಗಳನ್ನು ಚೆನ್ನಾಗಿ ಬಲ್ಲವನಾಗಿರಬೆಕು. ಆ ತತ್ವಾದರ್ಶ
ಗಳನ್ನು ತನ್ನ ದೇಶದಲ್ಲಿ ತಾನೇ ಕಾರ್ಯತಃ ಆಚರಣೆಗೆ ತಂದು ಅವುಗಳ ಮೇಲೆ
ಒಂದು ಯಶಸ್ವೀ ಜೀವನ ವ್ಯವಸ್ಥೆಯನ್ನು ನಡೆಸಿ, ಇಡೀ ಜಗತ್ತಿಗೆ ಮಾದರಿಯಾಗಿ
ತೋರಿಸಿ ಕೊಡಬೇಕು. ಆಗ ಮಾತ್ರ ಇತರ ಜನಾಂಗಗಳು ಅದರ ಕಡೆಗೆ ಗಮನ
ಕುರ್‌ಆನ್ ಅಧ್ಯಯನ ಮಾರ್ಗದರ್ಶಿ 37
ಕೊಡುವರು. ಅವರ ಬುದ್ಧಿಜೀವಿಗಳು ಸ್ವತಃ ಮುಂದೆ ಬಂದು ಅದನ್ನು ಅರಿತು
ಕೊಳ್ಳಲಿಕ್ಕೂ ತಮ್ಮ ದೇಶದಲ್ಲಿ ಆಚರಣೆಗೆ ತರಲಿಕ್ಕೂ ಪ್ರಯತ್ನಿಸುವರು, ಆದುದರಿಂದ
ಒಂದು ಸಿದ್ಧಾಂತ-ಕರ್ಮಗಳ ವ್ಯವಸ್ಥೆ ಯನ್ನು ಆರಂಭದಲ್ಲಿ ಒಂದೇ ಜನಾಂಗದ
ಮುಂದಿಟ್ಟು ಆಧಾರ ಪ್ರಮಾಣಗಳ ಸಂಪೂರ್ಣ ಶಕ್ತ ಕ್ರಿಯನ್ನು ಅದಕ್ಕೆ ಮನವರಿಕೆ
ಮಾಡಲಿಕ್ಕೂ ತೃಪ್ತಿ ಪಡಿಸಲಿಕ್ಕೂ ಉಪಯೋಗಿಸಲಾಗಿರುವುದು ಆ ವೈವಸ್ಥೆಯು
ಕೇವಲ ಏಕ ಜನಾಂಗೀಯವಾಗಿತೆ ತೈನ್ನುವುದಕ್ಕೆ ಆಧಾರವಾಗುವುದಿಲ್ಲ. ವಾಸ್ತವದಲ್ಲಿ
ಒಂದು ಜನಾಂಗೀಯ ವ್ಯವಸ್ಥೆಯನ್ನು ಒಂದು ಅಂತಾರಾಷ್ಟ್ರೀಯ ವ್ಯವಸ್ಥೆಯಿಂದಲೂ
ಒಂದು ಕಾಲಬಾಧಿತ ವ್ಯವಸ್ಥೆಯನ್ನು ಒಂದು ಸಾರ್ವತ್ರಿಕ ವ್ಯವಸ್ಥೆಯಿಂದಲೂ
ಪ್ರತ್ಯೇಕಿಸುವ ವೈಶಿಷ್ಟ್ಯಗಳು ಯಾವುದೆಂದರೆ-ಜನಾಂಗೀಯ ವ್ಯವಸ್ಥೆಯು ಕೇವಲ
ಒಂದು ಜನಾಂಗದ 71وت ಮತ್ತು ಅದರ ವಿಶಿಷ್ಟ ಹಕ್ಕುಗಳಿಗಾಗಿ ವಾದಿಸುತ್ತದೆ
ಅಥವಾ ತನ್ನಲ್ಲಿ ಇತರ ಜನಾಂಗಗಳಲ್ಲಿ ನಡೆಯಲಾಗದಂತಹ ಕೆಲವು ತತ 7 ಸಿದ್ಧಾಂತ
ಗಳನ್ನು" ಮಾತ್ರ ಇರಿಸಿಕೊಳ್ಳುತ್ತದೆ. ಇದಕ್ಕೆ ವೈತಿರಿಕ್ತವಾಗಿ ಅಂತಾರಾಷ್ಟ್ರೀಯ
ವ್ಯವಸ್ಥೆಯು ಸಕಲ ಮಾನವರಿಗೆ ಸಮಾನ ಸ್ಥಾನಮಾನಗಳನ್ನೂ ಸರಿಸಮಾನ ಹಕ್ಕು
ಗಳನ್ನೂ ನೀಡಲಿಕ್ಕಾಗಿ ಸಿದ್ಧವಿರುತ್ತದೆ. ಅದರ ತತ್ವ ಸಿದ್ದಾಂತಗಳಲ್ಲೂ ಸಾರ್ವತ್ರಿಕತೆ
ಯಿರುತ್ತದೆ. ಅದೇ ರೀತಿಯಲ್ಲಿ ಒಂದು ಕಾಲಬಾಧಿತ ವ್ಯವಸ್ಥೆಯು ಕಾಲಚಕ್ರದ
ಕೆಲವೇ ಉರುಳಾಟಗಳ ಬಳಿಕ ಆಚರಿಸಲು ಸಾಧ್ಯವಾಗದಂತಹ ಸಿದ್ಧಾಂತಗಳೆ ಮೇಲೆ
ನಿಂತಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಒಂದು ಸಾರ್ವಕಾಲಿಕ ವ್ಯವಸ್ಥೆಯ ಸಿದ್ದಾಂತಗಳು
ಬದಲಾಗುವ ಎಲ್ಲ ಪರಿಸ್ಥಿತಿಗಳೊಂದಿಗೆ ಹೊಂದಿಕೊಳ್ಳುತ್ತಾ ಹೋಗುತ್ತವೆ. ಈ
ವೈಶಿಷ್ಟ್ಯಗಳನ್ನು ಮುಂದಿಟ್ಟುಕೊಂಡು ಕುರ್‌ಆನನ್ನು ಓದಬೇಕು ಮತ್ತು ಅದು
ಪ್ರತಿಪಾದಿಸುತ್ತಿರುವ ವ್ಯವಸ್ಥೆಯು ಕಾಲಬಾಧಿತ ಹಾಗೂ ಜನಾಂಗೀಯವೆಂಬ
ಸಂದೇಹವನ್ನು ಮೂಡಿಸುವ ವಿಷಯಗಳು ಯಾವುವು ಎಂದು ನಿರ್ಧರಿಸಿಕೊಳ್ಳಲು
ಸ್ವಲ್ಪ ಪ್ರಯತ್ನಿಸಬೇಕು.
ಕುರ್‌ಆನ್ ಒಂದು ಪರಿಪೂರ್ಣ ಮಾರ್ಗದರ್ಶಕ ಹಾಗೂ ಜೀವನ ಸಂವಿಧಾನ
ಗ್ರಂಥವೆಂಬ ವಿಷಯ ಓರ್ವ ಸಾಮಾನ್ಯ ಅಧ್ಧಯನಕಾರ ಕೇಳಿರುತ್ತಾನೆ. ಆದರೆ ಅವನು
38 ಕುರ್‌ಆನ್ ಅಧ್ಯಯನ ಮಾರ್ಗದರ್ಶಿ
ಅದನ್ನು ಓದಿದಾಗ ಆದರಲ್ಲಿ ಸಾಮಾಜಿಕ, ನಾಗರಿಕ ರಾಜಕೀಯ, ಆರ್ಥಿಕವೇ
ಮೊದಲಾದ ವಿಷಯಗಳ ವಿವರಪೂರ್ಣ ಆದೇಶ-ನಿಯಮಾವಳಿಗಳು ಅವನಿಗೆ
ಸಿಗುವುದಿಲ್ಲ. ಕುರ್‌ಆನ್ ಪದೇ ಪದೇ ಒತ್ತಿ ಹೇಳುವ ನಮಾರ್, ರುಕಾತ್‌ಗಳಂತಹ
ಕಡ್ಡಾಯ ವಿಧಿಕರ್ಮಗಳ ಬಗೆಗೂ, ಅವುಗಳಿಗೆ ಸಂಬಂಧಿಸಿದ ಎಲ್ಲ ಆವಶ್ಯಕ
ವಿಧಿಗಳನ್ನು ನಿರ್ದೇಶಿಸಿರುವುದನ್ನು ಅವನು ಕಾಣುವುದಿಲ್ಲ. ಇದು ಅವನಲ್ಲಿ 'ಇದು
ಯಾವ ಅರ್ಥದಲ್ಲಿ ಮಾರ್ಗದರ್ಶಕ ಗ್ರಂಥವಾಗಿದೆ' ಎಂಬ ಭಾವನೆಯನ್ನು ಮೂಡಿಸುತ್ತದೆ.
ವಸ್ತುಸ್ಲಿತಿಯ ಒಂದು ಮುಖ್ಯಾಂಶವು ಮನುಷ್ಯನ ದೃಷ್ಟಿಯಿಂದ ಮರೆಯಾಗಿ
ಬಿಡುವುದೇ ಈ ವಿಷಯದಲ್ಲಿ ಇಂತಹ ಪೇಚಾಟಕ್ಕೆ ಕಾರಣ. ಅರ್ಥಾತ್: ಅಲ್ಲಾಹನು
ಕೇವಲ ಗ್ರಂಥವನ್ನಷ್ಟೇ ಅವತೀರ್ಣಗೊಳಿಸಿರುವುದಲ್ಲ, ಓರ್ವ ಪ್ರವಾದಿಯನ್ನೂ
ನಿಯೋಗಿಸಿದ್ದನು. ಒಂದು ಸಿದ್ದ ನಕಾಶೆಯನ್ನು ಮಾತ್ರ ಜನರಿಗೆ ಒದಗಿಸಿ, ಅವರು
ಅದರಂತೆ ತಾವೇ ಕಟ್ಟಡ ನಿರ್ಮಾಣ ಮಾಡಬೇಕೆಂದು ಹೇಳಿರುತ್ತಿದ್ದರೆ ನಿರ್ಮಾಣ
ಕಾರ್ಯದ ಪ್ರತಿಯೊಂದು ವಿವರವೂ ನಮಗೆ ಸಿಗಬೇಕಿತ್ತೆನ್ನುವುದು ಸ್ವಾಭಾವಿಕ. ಆದರೆ
ನಿರ್ಮಾಣದ ಆದೇಶದ ಸಹಿತ ಓರ್ವ ಇಂಜಿನಿಯರನೂ ಸರಕಾರದಿಂದಲೇ
ನೇಮಕಗೊಂಡಿದ್ದು ಅವನು ಆ ಆದೇಶಗಳಿಗನುಸಾರ ಒಂದು ಭವ್ಮ ಕಟ್ಟಡವನ್ನು
ಕಟ್ಟಿ ನಿಲ್ಲಿಸಿರುವಾಗ ಆ ಇಂಜಿನಿಯರನನ್ನೂ ಅವನು ನಿರ್ಮಿಸಿದ ಕಟ್ಟಡವನ್ನೂ
ಕಡೆಗಣಿಸಿ, ನಕಾಶೆಯಲ್ಲೇ ಎಲ್ಲಾ ಚಿಕ್ಕ ಪುಟ್ಟ ವಿಷಯಗಳ ವಿವರಗಳನ್ನು ಹುಡುಕು
ವುದು, ಅದು ಸಿಗದಿದ್ದಾಗ ನಕಾಶೆಯೇ ಅಪೂರ್ಣವೆಂದು ದೂರುವುದು ಸರಿಯಾಗದು.
ಕುರ್‌ಆನ್ ಆಂಶಿಕ ವಿಷಯಗಳ ಗ್ರಂಥವಲ್ಲ. ಅದು ತತ್ವ ಸಿದ್ಧಾಂತಗಳ ಗ್ರಂಥವಾಗಿದೆ.
ಇಸ್ಲಾಮೊ ವ್ಯವಸ್ಥೆಯ ವೈಚಾರಿಕ' ಹಾಗೂ ನೈತಿಕ ಬುನಾದಿಗಳನ್ನು ವಿವರವಾಗಿ
ಮುಂದಿರಿಸುವುದು ಮಾತ್ರವಲ್ಲ ಬೌದ್ದಿಕ ಪುರಾವೆಗಳ ಹಾಗೂ ಭಾವನಾತ್ಮಕ ಶೈಲಿಯ
ಮೂಲಕ ಚೆನ್ನಾಗಿ ಸುದೃಢಗೊಳಿಸುವುದೂ ಕುರ್‌ಆನಿನ ನೈಜ ಕೆಲಸವಾಗಿದೆ.
ಇನ್ನುಳಿದಿರುವುದು ಇಸ್ಲಾಮೊ ಜೀವನದ ಪ್ರಾಯೋಗಿಕ ರೂಪ. ಈ ವಿಷಯದಲ್ಲಿ
ಅದು ಜೀವನದ ಪ್ರತಿಯೊಂದು ರಂಗಕ್ಕೆ ಸಂಬಂಧಿಸಿದ ವಿವರಪೂರ್ಣ ನಿಯಮ
ನಿಬಂಧನೆಗಳನ್ನು ತೋರಿಸುವುದರ ಮೂಲಕ ಮಾನವನಿಗೆ ಮಾರ್ಗದರ್ಶನವನ್ನೀಯು
ವುದಿಲ್ಲ. ಅದು ಜೀವನದ ರಂಗಗಳ ಗಡಿ ರೇಖೆಗಳನ್ನು ತೋರಿಸಿ ಕೊಡುತ್ತದೆ ಮತ್ತು
ಕುರ್‌ಆನ್ ಅಧ್ಯಯನ ಮಾರ್ಗದರ್ಶಿ 39
ಕೆಲವು ರಂಗಗಳಲ್ಲಿ ಸ್ಪಷ್ಟವಾದ ಗುರುತು ಕಲ್ಲುಗಳನ್ನು ನಿಲ್ಲಿಸುತ್ತದೆ. ಆ ರಂಗಗಳು
ಅಲ್ಲಾಹನ ಇಂಗಿತಕ್ಕನುಸಾರ ಯಾವ ರೀತಿಯಲ್ಲಿ ರೂಪಿಸಲ್ಪಡಬೇಕೆಂದೂ ತೋರಿಸಿ
ಕೊಡುತ್ತವೆ. ಈ ಮಾರ್ಗದರ್ಶನ ಪ್ರಕಾರ ಕಾರ್ಯತಃ ಇಸ್ಲಾಮೊ ಜೀವನವನ್ನು
ರೂಪಿಸುವ ಕಾರ್ಯ ಪ್ರವಾದಿ(ಸ) ಅವರದ್ದಾಗಿತ್ತು. ಜಗತ್ತಿಗೆ ಕುರ್‌ಆನ್ ನೀಡಿದ
ಸಿದ್ದಾಂತಗಳ ವ್ಯಾಖ್ಯಾನವಾಗಿರತಕ್ಕಂತಹ ವೈಯಕ್ತಿಕ ಸದ್ದುಣ-ಪ್ರಾಯೋಗಿಕ ಸಚ್ಚಾರಿತ್ರ್ಯ .
ಗಳನ್ನು ಹಾಗೂ ಸಮಾಜ ಮತ್ತು ರಾಷ್ಟ್ರದ ಮಾದರಿಯನ್ನು ತೋರಿಸಿಕೊಡಲಿಕ್ಕಾಗಿಯೇ
ಅವರನ್ನು ನೇಮಿಸಲಾಗಿತ್ತು.
07 Py ۴
pod ಈ Roc
ಇನ್ನೊಂದು ಪ್ರಶ್ನೆಯು ಸಾಮಾನ್ಯವಾಗಿ ಜನರ ಮನಸ್ಸನ್ನು ಕೊರೆಯುತ್ತಿ
ರುತ್ತದೆ. ಒಂದೆಡೆ ದೇವಗ್ರಂಥ ಬಂದ ಬಳಿಕವೂ ಅನೈಕ್ಕ ಹಾಗೂ ಭೇದಭಾವಗಳಲ್ಲಿ
ಸಿಲುಕಿ ತಮ್ಮ ಧರ್ಮವನ್ನು ತುಂಡು ತುಂಡಾಗಿ ಮಾಡುವವರನ್ನು ಕುರ್‌ಆನ್
ಅತ್ಕುಗ್ರವಾಗಿ ಖಂಡಿಸುತ್ತದೆ. ಇನ್ನೊಂದೆಡೆ ಕುರ್‌ಆನಿನ ಆದೇಶಗಳ ವ್ಯಾಖ್ಯಾನದಲ್ಲಿ
ಆಧುನಿಕ ಪಂಡಿತರು ಮಾತ್ರವಲ್ಲ ಪ್ರಾಚೀನ ಕರ್ಮಶಾಸ್ತ್ರಜ್ಞರು, ತಾಬಿಈಗಳು
ಮತ್ತು ಸಹಾಬಿಗಳ(ರ) ನಡುವೆ ಕೂಡ ಎಷ್ಟು ಭಿನ್ನಾಭಿಪ್ರಾಯ ಕಾಣುತ್ತದೆಯೆಂದರೆ
ಪ್ರಾಯಶಃ ವ್ಯಾಖ್ಯಾನದ ಬಗ್ಗೆ ಏಕಾಭಿಪ್ರಾಯವಿರುವಂತಹ ಒಂದೇ ಒಂದು
ಆದೇಶದ ಸೂಕ್ತವೂ ಸಿಗಲಾರದು. ಇವರೆಲ್ಲ ಕುರ್‌ಆನಿನಲ್ಲಿ ಹೇಳಿರುವಂತಹ
ಖಂಡನೆಗೆ ಅರ್ಹರೇ? ಇಲ್ಲವೆಂದಾದರೆ ಕುರ್‌ಆನ್ ವಿರೋಧಿಸುತ್ತಿರುವ ಆ ಅನ್ಯೈಕ್ಕ
ಹಾಗೂ ಭೇದಭಾವಗಳು ಯಾವುವು?
ಇದೊಂದು ಅತ್ಯಂತ ವಿಶಾಲವಾದ ಬಹುಮುಖ ಸಮಸ್ಯೆಯಾಗಿದೆ. ಇದರ
ಬಗ್ಗೆ ಕೊಲಂಕಷವಾಗಿ ಚರ್ಚಿಸಲು ಇಲ್ಲಿ ಅವಕಾಶವಿಲ್ಲ. ಇಲ್ಲಿ ಕುರ್‌ಆನಿನ ಓರ್ವ
ಸಾಮಾನ್ಯ ವಿದ್ಯಾರ್ಥಿಯ ತೊಡಕನ್ನು ನಿವಾರಿಸಲಿಕ್ಕಾಗಿ ಒಂದು ಸಣ್ಣ ಸೂಚನೆ
ಮಾತ್ರ ಸಾಕು. ಅದೇನೆಂದರೆ- ಕುರ್‌ಆನ್, ಧಾರ್ಮಿಕ ಐಕ್ಕ ಮತ್ತು ಇಸ್ಲಾಮೊ
ಸಾಮೂಹಿಕ ವ್ಯವಸ್ಥೆಯನ್ನು ಉಳಿಸಿಕೊಳ್ಳುತ್ತಾ ಕೇವಲ ಆದೇಶಗಳ ವ್ಯಾಖ್ಯಾನಗಳಲ್ಲಿ,
ಪ್ರಾಮಾಣಿಕ ಸಂಶೋಧನೆಯ ಆಧಾರದಲ್ಲಿ ಉಂಟಾಗುವ ಆರೋಗ್ಯಕರ ಭಿನ್ನಾಭಿಪ್ರಾಯ
ವನ್ನು ವಿರೋಧಿಸುವುದಿಲ್ಲ. ಅದು ಖಂಡಿಸುವುದು ಸ್ವಾರ್ಥ ಮತ್ತು ದೋಷಪೂರ್ಣ
40 ಕುರ್‌ಆನ್ ಅಧ್ಯಯನ ಮಾರ್ಗದರ್ಶಿ
ವೀಕ್ಷಣದಿಂದಾರಂಭಿಸಿ, ವಿಚ್ಛಿದ್ರತೆ ಹಾಗೂ ಅಂತಃಕಲಹದ ವರೆಗೂ ಸಾಗುವಂತಹ
ಭಿನ್ನತೆಯನ್ನು ಮಾತ್ರ. ವಾಸ್ತವದಲ್ಲಿ ಈ ಎರಡೂ ತರದ ಭಿನ್ನತೆಗಳು ಒಂದೇ
ರೀತಿಯವುಗಳಲ್ಲ. ಪರಿಣಾಮದ ದೃಷ್ಟಿಯಿಂದಲೂ ಅವುಗಳಲ್ಲಿ ಹೋಲಿಕೆ ಇಲ್ಲ.
ಒಂದನೇ ವಿಧದ ಭಿನ್ನತೆಯು ಪ್ರಗತಿಯ ಜೀವ ಮತ್ತು ಜೀವನದ ಜೀವಾಳವಮಾಗಿದೆ.
ಇಂತಹ ಭಿನ್ನತೆಯು ಬುದ್ದಿ ಹಾಗೂ ವಿವೇಚನಾ ಶಕ್ತಿ ಹೊಂದಿರುವವರಿಂದ
ರೂಪುಗೊಂಡ ಎಲ್ಲ ಸಮಾಜಗಳೆಲ್ಲೂ ಕಂಡು ಬರುತ್ತದೆ. ಇದು ಜೀವಕಳೆಯ
ದ್ಯೋತಕವಾಗಿದೆ. ಇಂತಹ ಭಿನ್ನತೆಯು ಬುದ್ಧಿಜೀವಿಗಳಿಂದ ಬರಿದಾದ ಕೇವಲ
ಕೊರಡುಗಳಿಂದ ರೂಪುಗೊಂಡ ಸಮಾಜದಲ್ಲಿ ಮಾತ್ರ ಇಲ್ಲದಿರಬಹುದು. ಇನ್ನು
ಎರಡನೆಯ ತರದ ಭಿನ್ನತೆಯು ಯಾವ ವರ್ಗದಲ್ಲೇ ತಲೆದೋರಲಿ, ಅದು ಆ
ವರ್ಗವನ್ನು ಒಡೆದು ಛಿದ್ರಗೊಳಿಸಿಯೇ ಬಿಡುತ್ತದೆ. ಇಂತಹ ಭಿನ್ನತೆ ತಲೆದೋರು
ವುದು ಆರೋಗದ ಲಕ್ಷಣವಲ್ಲ, ಅದು ಅನಾರೋಗ್ಯದ ಲಕ್ಷಣವಾಗಿದೆ. ಇದರ
ಪರಿಣಾಮ ಎಂದೂ ಯಾವ ವರ್ಗಕ್ಕೂ ಹಿತಕಾರಿಯಾಗದು. ಪ್ರಸ್ತುತ ಎರಡೂ ತರದ
ಭಿನ್ನತೆಗಳನ್ನು ಸ್ಪಷ್ಟವಾಗಿ ಹೀಗೆ ಹೇಳಬಹುದು:
ಅಲ್ಲಾಹನ ಮತ್ತು ಸಂದೇಶವಾಹಕರ ಅನುಸರಣೆಯ ವಿಷಯದಲ್ಲಿ ಸಂಘಟನೆಗೆ
ಸೇರಿದವರೆಲ್ಲರೂ ಒಮ್ಮತಾಭಿಪ್ರಾಯ ಹೊಂದಿರುವುದು-ಆದೇಶಗಳ ಆಯ್ಕೆಗೆ
ಕುರ್‌ಆನ್ ಮತ್ತು ಪ್ರವಾದಿಚರ್ಯೆಯನ್ನು ಮೂಲವೆಂದು ಒಪ್ಪಿಕೊಳ್ಳುವುದು
ಮತ್ತು ಇಬ್ಬರು ವಿದ್ವಾಂಸರು ಯಾವುದಾದರೊಂದು ಆಂಶಿಕ ವಿಷಯದ ಶೋಧನೆ
ಯಲ್ಲಿ ಅಥವಾ ಇಬ್ಬರು ನ್ಯಾಯಾಧೀಶರು ಯಾವುದಾದರೊಂದು ವ್ಯಾಜ್ಯದ
ತೀರ್ಮಾನದಲ್ಲಿ ಪರಸ್ಪರ ಭಿನ್ನಾಭಿಪ್ರಾಯ ತಾಳಿದಾಗ ಇವರಲ್ಲಿ ಯಾರೂ ಆ
ಸಮಸ್ಯೆಯನ್ನಾಗಲಿ ಆ ಕುರಿತು ತಮ್ಮ ಅಭಿಪ್ರಾಯವನ್ನಾಗಲೀ ಧರ್ಮದ ಆಧಾರವೆಂದು
ಪರಿಗಣಿಸದೆ ತನ್ನೊಡನೆ ಭಿನ್ನಾಭಿಪ್ರಾಯವಿರಿಸುವವನನ್ನು ಧರ್ಮಬಾಹಿರನೆನ್ನದಿ
ರುವುದು-ಇನ್ನು ಇಬ್ಬರೂ ತಂತಮ್ಮ ಆಧಾರ ಪ್ರಮಾಣಗಳನ್ನು ಕೊಟ್ಟು
ತಮ್ಮಿಂದಾದಷ್ಟು ಸಂಶೋಧನಾ ಕಾರ್ಯವನ್ನು ಮಾಡಿದಾಗೆ ಆ ಅಭಿಪ್ರಾಯಗಳಲ್ಲಿ
ಯುಕ್ತ ಕಂಡದ್ದನ್ನು ಸ್ವೀಕರಿಸಲು ಅಥವಾ ಎರಡನ್ನೂ ಸರಿಯೆನ್ನಲು ಅದನ್ನು
ಜನಾಭಿಪ್ರಾಯಕ್ಕೆ ಅಥವಾ ನ್ಯಾಯಾಲಯದ ವಿಷಯವಾಗಿದ್ದರೆ ರಾಷ್ಟ್ರದ ಉಚ್ಛ್ಚತಮ
ಕುರ್‌ಆನ್ ಅಧ್ಯಯನ ಮಾರ್ಗದರ್ಶಿ 41
ನ್ಯಾಯಾಲಯಕ್ಕೆ, ಸಾಮೂಹಿಕ ವಿಷಯವಾಗಿದ್ದರೆ ಸಂಘಟನಾ ವ್ಯವಸ್ಥೆಗೆ
ಬಿಟ್ಟುಕೊಡುವುದು-ಇದು ಒಂದು ವಿಧ.
ಇನ್ನೊಂದು ವಿಧದ ಪ್ರಕಾರ ಧರ್ಮದ ಮೂಲ ವಿಷಯಗಳಲ್ಲೇ
ಭಿನ್ನಾಭಿಪ್ರಾಯವಿರಿಸುವುದು ಅಥವಾ ಒಬ್ಬ ವಿದ್ವಾಂಸ ಸೂಫೀ ಅಥವಾ ಮುಪ್ರೀ,
ಪ್ರತಿನಿಧಿ ಅಥವಾ ನಾಯಕನು ಅಲ್ಲಾಹ್ ಹಾಗೂ ದೇವ ಸಂದೇಶವಾಹಕರು
ಧರ್ಮದ ಮೂಲಭೂತವೆಂದು ಹೇಳಿರದಂತಹ ವಿಷಯದಲ್ಲಿ ಒಂದು ಅಭಿಪ್ರಾಯ
ತಾಳುವುದು ಮತ್ತು ವೃಥಾ ಎಳೆದಾಡಿ ಅದನ್ನು ಧರ್ಮದ ಮೂಲಭೂತ ವಿಷಯವ
ನ್ನಾಗಿ ಮಾಡುವುದು. ಅನಂತರ ಅದರ ಬಗ್ಗೆ ಭಿನ್ನಾಭಿಪ್ರಾಯ ತಾಳಿದವರನ್ನು
ಧರ್ಮಬಾಹಿರ, ಸಮಾಜಬಾಹಿರನೆಂದು ಸಾರಿಬಿಡುವುದು. ತನ್ನ ಜೊತೆ ಸಹಮತ
ವುಳ್ಳವರ ಒಂದು ಕೂಟವನ್ನು ಕಟ್ಟಿಕೊಂಡು, ತಮ್ಮದು ಮಾತ್ರ ನೈಜ ಮುಸ್ಲಿಮ್
ಸಮುದಾಯವೆಂದೂ ಉಳಿದವರೆಲ್ಲರೂ ನರಕವಾಸಿಗಳೆಂದೂ ಸಾರಿ, ಮುಸ್ಲಿಮ
ರಾಗಿದ್ದರೆ ಈ ಕೂಟದಲ್ಲಿ ಸೇರಿಕೊಳ್ಳಿ ಅನ್ಯಥಾ ನೀವು ಮುಸ್ಲಿಮರಾಗಲಾರಿರಿ
ಎಂದು ಘೋಷಿಸುವುದು.
ಕುರ್‌ಆನ್ ಅನೈಕ್ಕ ಮತ್ತು ಭಿನ್ನಮತವನ್ನು ಎಲ್ಲೆಲ್ಲಾ ವಿರೋಧಿಸಿದೆಯೋ
ಅಲ್ಲೆಲ್ಲಾ ಈ ಎರಡನೆಯ ಅಭಿಪ್ರಾಯವನ್ನೇ ವಿರೋಧಿಸಿದೆ. ಮೊದಲನೆಯ ತರದ
ಭಿನ್ನಾಭಿಪ್ರಾಯದ ಹಲವಾರು ಉದಾಹರಣೆಗಳು ಸ್ವತಃ ಪ್ರವಾದಿವರ್ಯರ(ಸ)
ಉಪಸ್ಥಿತಿಯಲ್ಲೇ ನಡೆದಿವೆ. ಅವರು ಅವುಗಳನ್ನು ಸರಿಯೆಂದು ಸಾರಿದುದು
ಮಾತ್ರವೇ ಅಲ್ಲ, ಅವುಗಳನ್ನು ಪ್ರಶಂಸಿಸಿದ್ದರು ಕೂಡಾ. ಏಕೆಂದರೆ ಈ ಭಿನ್ನಾಭಿಪ್ರಾಯ
ಗಳು . ಸಮುದಾಯದಲ್ಲಿ ವಿವೇಚನೆ, ಸಂಶೋಧನೆ, ಜಿಜ್ಞಾಸೆ, ವಿವೇಕ ಮತ್ತು
ಸಂಶೋಧನಾತ್ಮಕ ಪ್ರತಿಭೆಗಳ ಇರುವಿಕೆಯನ್ನು ಸಾದರ ಪಡಿಸುತ್ತವೆ. ಸಮುದಾಯದಲ್ಲಿ
ಬುದ್ಧಿಜೀವಿಗಳಿಗೆ ತಮ್ಮ ಧರ್ಮ ಹಾಗೂ ಅದರ ಆದೇಶಗಳೆ ಬಗ್ಗೆ ಆಸಕ್ತಿ
ಇದೆಯೆಂಬುದನ್ನೂ ಅವರು ತಮ್ಮ ಜೀವನದ ಸಮಸ್ಯೆಗಳ .ಪರಿಹಾರವನ್ನು
ಧರ್ಮದಿಂದ ಹೊರಹೋಗದೆ ಅದರೊಳಗೆಯೇ ಹುಡುಕುತ್ತಾರೆ ಎಂಬುದನ್ನೂ
ತೋರ್ಪಡಿಸುತ್ತದೆ. ಒಟ್ಟು ಸಮುದಾಯವು ತಾತ್ವಿಕ ವಿಷಯಗಳಲ್ಲಿ ಸಹಮತ
ಹೊಂದಿದ್ದು ತನ್ನ ಏಕತೆಯನ್ನು ಕಾಪಾಡುವ ಮತ್ತು ತನ್ನ ಬುದ್ಧಿಜೀವಿಗಳಿಗೂ
42 ಕುರ್‌ಆನ್ ಅಧ್ಯಯನ ಮಾರ್ಗದರ್ಶಿ
ಚಿಂತಕರಿಗೂ ನೈಜ ಮೇರೆಯೊಳಗಿದ್ದುಕೊಂಡು ಸಂಶೋಧನೆ ಮಾಡುವ ಸ್ವಾತಂತ್ರ್ಯ
ನೀಡಿ ಪ್ರಗತಿಯ ಅವಕಾಶವನ್ನು ತೆರೆದಿರಿಸುವಂತಹ ಅತ್ಯಮೂಲ್ಯ ನಿಯಮವನ್ನು
ಪಾಲಿಸುತ್ತದೆ ಎಂಬುದನ್ನೂ ಸೂಚಿಸುತ್ತದೆ.
ಕುರ್‌ಆನಿನ ಅಧ್ಯಯನ ನಡೆಸುವಾಗ ಓರ್ವ ಓದುಗನ ಮನಸ್ಸಿನಲ್ಲುಂಟಾಗುವ
ಸಕಲ ಸಮಸ್ಯೆಗಳನ್ನೂ ಈ ಮುನ್ನುಡಿಯಲ್ಲಿ ಬಗೆಹರಿಸುವುದು ನನ್ನ ಉದ್ದೇಶವಲ್ಲ.
ಏಕೆಂದರೆ ಹೆಚ್ಚಿನ ಪ್ರಶ್ನೆಗಳು ಯಾವುದಾದರೊಂದು ಸೂಕ್ತವನ್ನು ಅಥವಾ
ಅಧ್ಯಾಯವನ್ನು ಓದುವಾಗ ಮನಸ್ಸನ್ನು ಕಾಡುತ್ತವೆ. ಅವುಗಳ ಉತ್ತರವನ್ನು
ಕುರ್‌ಆನ್ ವ್ಯಾಖ್ಯಾನದಲ್ಲಿ ಆಯಾ ಸಂದರ್ಭಗಳಲ್ಲೇ ಕೊಡಲಾಗಿದೆ. ಆದುದರಿಂದ
ನಾನು ಇಂತಹ ಪ್ರಶ್ನೆಗಳನ್ನು ಬಿಟ್ಟು ಇಲ್ಲಿ ಸಮಗ್ರವಾಗಿ ಇಡೀ ಕುರ್‌ಲನಿಗೆ
ಸಂಬಂಧಿಸಿದ ಸಮಸ್ಯೆಗಳನ್ನು ಮಾತ್ರ ಚರ್ಚಿಸಿದ್ದೇನೆ. ವಾಚಕ ಬಾಂಧವರು
ಮುನ್ನುಡಿಯನ್ನು ಮಾತ್ರ ಓದಿಕೊಂಡು ಇದು ಅಪೂರ್ಣವೆಂಬ ತೀರ್ಮಾನಕ್ಕೆ ಬಂದು
ಬಿಡಬಾರದು-ಸಂಪೂರ್ಣ ಗ್ರಂಥವನ್ನು ಓದಬೇಕು.
7
ಫೇ ಳೇ Poca